ಬಳ್ಳಾರಿ

ಎ ಎ ಪಿ ಪಕ್ಷದ ಮುಖ್ಯಮಂತ್ರಿ ಸ್ಥಾನ ಕಲ್ಯಾಣ ಕರ್ನಾಟಕ ಭಾಗಕ್ಕೆ ಒಲೆಯಲ್ಲಿದೆ : ನಾರಾಯಣಸ್ವಾಮಿ ಹೇಳಿಕೆ

ಎ ಎ ಪಿ ಪಕ್ಷದ ಮುಖ್ಯಮಂತ್ರಿ ಸ್ಥಾನ ಕಲ್ಯಾಣ ಕರ್ನಾಟಕ ಭಾಗಕ್ಕೆ ಒಲೆಯಲ್ಲಿದೆ : ನಾರಾಯಣಸ್ವಾಮಿ ಹೇಳಿಕೆ

ಬಳ್ಳಾರಿ ಮಾ.28:  ಮುಂಬರುವ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ  ಆಮ್ ಆದ್ಮಿ  ಪಕ್ಷ ಅಧಿಕಾರಕ್ಕೆ ಬರಲಿದ್ದು, ಮುಖ್ಯಮಂತ್ರಿ ಸ್ಥಾನವನ್ನು ಕಲ್ಯಾಣ ಕರ್ನಾಟಕ ಭಾಗಕ್ಕೆ ಕೊಡುವ ಸಾಧ್ಯತೆ ಇದೆ ಎಂದು ಆಮ್ ಆದ್ಮಿ  ಪಕ್ಷದ ಮುಖಂಡ ನಾರಾಯಣಸ್ವಾಮಿ ಅವರು ಹೇಳಿದರು.

     ನಗರದ ಜಿಲ್ಲಾಧಿಕಾರಿಗಳ ಕಚೇರಿ ಆವರಣದ ಪತ್ರಿಕಾಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. 2023ರ ಸಾರ್ವತ್ರಿಕ ಚುನಾವಣೆಯಲ್ಲಿ ಪಂಚ ಪಕ್ಷಗಳು ಅಕಾಡಕ್ಕೆ ಇಳಿಯಲಿದೆ. ಸರ್ಕಾರ ರಚಿಸುವ ಬಹುಮತ ಸ್ಥಾನ ಪಡೆದುಕೊಳ್ಳವುದರಲ್ಲಿ ಆಡಳಿತ ಪಕ್ಷ ಹಾಗೂ ವಿರೋಧ ಪಕ್ಷವು  ಕೂಡ ರಾಜ್ಯದಲ್ಲಿ ರಾಜಕೀಯ ಪಕ್ಷಗಳು ಸ್ಥಿರತೆ ಕಳೆದುಕೊಳ್ಳುತ್ತವೆ.

     ಎಎಪಿ ಪಕ್ಷ ಇತ್ತೀಚೆಗೆ ರಾಷ್ಟ್ರ ಮಟ್ಟದ ತೃತೀಯ ರಂಗ ಪಾರ್ಟಿಯೆಂದು ಮತದಾರರಲ್ಲಿ ಗುರುತಿಸಿಕೊಂಡು ರಾಜ್ಯದಲ್ಲಿ ಮುಖ್ಯಮಂತ್ರಿ ಗದ್ದುಗೆ ಹಿಡಿಯಲೆಂದು ಕರ್ನಾಟಕ ರಾಜ್ಯ ಮತದಾರರು ಬಯಸುತ್ತಿದ್ದಾರೆ. ದೇಶದ ಪ್ರಮುಖ ಪಕ್ಷ ಎಎಪಿಯಿಂದ ಉತ್ತರ ಕಲ್ಯಾಣ ಭಾಗಕ್ಕೆ ಮುಖ್ಯಮಂತ್ರಿ ಪಟ್ಟ ಒಲಿದು ಬರುವ ಸಾಧ್ಯತೆ ಇದೆ ಎಂದರು. 

    ಎಎಪಿ ಪಕ್ಷಕ್ಕೆ ಮತದಾರರು ಆಶೀರ್ವಾದ ಮಾಡಿದಲ್ಲಿ ಉತ್ತರ ಕಲ್ಯಾಣ ಭಾಗಕ್ಕೆ ರಾಜ್ಯ ಮುಖ್ಯಮಂತ್ರಿ ಸ್ಥಾನ ನೀಡುವ ಸಾಧ್ಯತೆ ಇದೆ. ಉತ್ತರ ಕಲ್ಯಾಣ ಭಾಗದ ಬಲಿಷ್ಠ ಸಾಮ್ರಾಜ್ಯ ಕೊಟ್ಟಿದ್ದು ಈ ಭೂಮಿ , ಕನ್ನಡ ಸಾಮ್ರಾಜ್ಯ ಅಧಿಪಥ್ಯದ ರಾಜಧಾನಿಗಳ ಬೆಳವಣಿಗೆಗೆ ಈ ಮಣ್ಣಲ್ಲೇ ಆಳ್ವಿಕೆಗೆ ಸಾಕ್ಷಿಯಾದ ಸ್ಥಳಗಳು ಕಲ್ಯಾಣ ಚಾಲುಕ್ಯ ಸಾಹಿತ್ಯ ರತ್ನ, ಕದಂಬ ಹೊಯ್ಸಳರ ಶಿಲೆಗಳ ಬಸವಾದಿ ಶಿವ ಶರಣರ ಶರೀಫರಂತ ಸಂತರು ನಡೆದಾಡಿದ ಜನಪದ ನೆಲೆಗೆ ಎಎಪಿ ಪಕ್ಷದಿಂದ ಮುಖ್ಯಂತ್ರಿ ಸ್ಥಾನ ಒಲೆಯುವ ಸಂದರ್ಭ ಕೂಡ ಬರಬಹುದು ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು 

ಸುದ್ದಿ ಓದಿ