ಕಲ್ಯಾಣ ಕರ್ನಾಟಕ ಜನೋತ್ಸವದ ಸಾಂಸ್ಕೃತಿಕ ಜನ ಸಂಭ್ರಮ ಕಾರ್ಯಕ್ರಮ
ಬಳ್ಳಾರಿ 19: ಪಟೇಲರು ದಿಟ್ಟ ನಿರ್ಧಾರ ಕೈಗೊಳ್ಳದಿದ್ದರೆ ಇಂದಿನ ಕಲ್ಯಾಣ ಕರ್ನಾಟಕ ಪಾಕಿಸ್ತಾನದ ಭಾಗವಾಗಿರುತಿತ್ತು ಎಂದು ಪ್ರಜ್ಞಾ ಪ್ರವಾಹದ ಕ್ಷತ್ರೀಯ ಸಂಘಟನಾ ಕಾರ್ಯದರ್ಶಿ ರಘುನಂದನ ಅವರು ನುಡಿದರು.
ಅವರು ನಗರದ ರಾಘವ ಕಲಾಮಂದಿರದಲ್ಲಿ ಕಲ್ಯಾಣ ಜನ ಮೋರ್ಚಾ, ರಂಗತೋರಣ, ವಿಕಾಸ ಅಕಾಡೆಮಿ ಶುಕ್ರವಾರ ಆಯೋಜಿಸಿದ್ದ ಕಲ್ಯಾಣ ಕರ್ನಾಟಕ ಜನೋತ್ಸವದ ಸಾಂಸ್ಕೃತಿಕ ಜನ ಸಂಭ್ರಮದ ಕಾರ್ಯಕ್ರಮದಲ್ಲಿ ಮುಖ್ಯ ವಕ್ತಾರರಾಗಿ ಆಗಮಿಸಿ ಮಾತನಾಡುತಿದ್ದರು. ಮುಂದುವರೆದು ಮಾತನಾಡಿ ಅಂದಿನ ರಜಾಕಾರರ ಮನಸ್ಥಿತಿ ಇಂದು ಮುಂದುವರೆದಿದ್ದು ಅದನ್ನು ಸಂಪೂರ್ಣವಾಗಿ ತೊಡೆದು ಹಾಕದಿದ್ದಲ್ಲಿ ಪರಿಸ್ಥಿತಿ ಮತ್ತಷ್ಟು ವಿಕೋಪಕ್ಕೆ ಆಗಬಹುದು ಎಂಬುದಕ್ಕೆ ಇಂದಿನ ಅಪಘಾನಿಸ್ತಾನದ ಸ್ಥಿತಿಯೇ ಸಾಕ್ಷಿ ಎಂದು ಅವರು ಕಲ್ಯಾಣ ಕರ್ನಾಟಕ ಮುಕ್ತಿ ಆಂದೋಲನದ ವೀರಗಾಥೆಯನ್ನು ಇಂದಿನ ಪೀಳಿಗೆಗೆ ತಿಳಿಸುವುದರ ಮೂಲಕ ಜಾಗೃತಿ ಮೂಡಿಸುವುದು ಹಿಂದೆಂದಿಗಿಂತಲೂ ಅತ್ಯಗತ್ಯವಾಗಿದೆ ಎಂದರು.
ನಂತರ ಮುಖ್ಯ ಅತಿಥಿಗಳಾದ ಬಿಐಟಿಎಂ ನಿರ್ದೇಶಕ ಡಾ. ಯಶವಂತ ಭೂಪಾಲ್, ಗಂಗಾಮತಸ್ಥ ಸಮಾಜದ ರಾಜ್ಯಾಧ್ಯಕ್ಷ ಬಿ ಮೌಲಾಲಿ ಅವರು ಮಾತನಾಡಿದರು. ವಿಕಾಸ ಅಕಾಡೆಮಿ ಜಿಲ್ಲಾ ಸಂಚಾಲಕ ಡಾ.ಜಿ ಆರ್ ವಸ್ತ್ರದ, ವೇದಿಕೆಯಲ್ಲಿದ್ದರು,ವಿವೇಕತೋರಣ ಕಾರ್ಯದರ್ಶಿ ಡಾ ಕೃಷ್ಣ ಅವರು ವಂದಿಸಿದರು, ರಂಗತೋರಣ ಕಾರ್ಯದರ್ಶಿ ಪ್ರಭುದೇವ ಕಪ್ಪಗಲ್ಲು ಸ್ವಾಗತಿಸಿ ಪ್ರಸ್ತಾವಿಕ ನುಡಿಗಳನ್ನಾಡಿದರು, ಗಂಗಾಧರ ದುರ್ಗಂ ನಿರೂಪಿಸಿದರು, ಶಿಲ್ಪಾ ಅವರು ಪ್ರಾರ್ಥನೆ ಗೀತೆ ಹಾಡಿದರು.
ಈ ಸಂದರ್ಭದಲ್ಲಿ ಸರ್ಕಾರದಿಂದ ಇತ್ತಿಚೆಗೆ ರಾಜ್ಯ ಮಟ್ಟದ ಗುಬ್ಬಿ ವೀರಣ್ಣ ಪ್ರಶಸ್ತಿ ಪುರಸ್ಕೃತ ಮದಿರೆ ಮರಿಸ್ವಾಮಿ ಅವರಿಗೆ ಸನ್ಮಾನಿಸಿ ಗೌರವಿಸಲಾಯಿತು ನಂತರ ಅವರಿಂದ ನಡೆದ ಹಾರ್ಮೋನಿಯಂ ವಾದನ ನೆರೆದ ಪ್ರೇಕ್ಷಕರನ್ನು ಮಂತ್ರ ಮುಗ್ಧರನಾಗಿಸಿತು ನಂತರ ಜೀಲಾನಿ ಬಾಷಾ ಅವರ ಲಕ್ಷ್ಮಿ ಕಲಾ ಕ್ಷೇತ್ರದ, ಅಭಿಷೇಕ ಅವರ ಸೂರ್ಯಕಲಾ ಅಕಾಡೆಮಿ ವಿದ್ಯಾರ್ಥಿಗಳಿಂದ ಭರತ ನಾಟ್ಯ, ಜಾನಪದ ನೃತ್ಯ, ದೇಶಭಕ್ತಿ ನೃತ್ಯ ಪ್ರದರ್ಶಿಸಿದರು , ಯಲ್ಲನಗೌಡ ಶಂಕರಬಂಡೆ ಹಾಗೂ ಜಡೇಶ ಹನುಮಯ ಮತ್ತು ತಂಡದಿಂದ ಜಾನಪದ ಹಾಗೂ ದೇಶಭಕ್ತಿ ಗೀತೆಗಳ ಗಾಯನ ನಡೆಯಿತು.