ಮನರಂಜನೆ

ಗೆಲುವಿನ ನಗೆಬೀರಿದ “ಕಾಗೆಮೊಟ್ಟೆ”

ಗೆಲುವಿನ ನಗೆಬೀರಿದ “ಕಾಗೆಮೊಟ್ಟೆ”

ಬೆಂಗಳೂರು, ಅ. 09: ಕಳೆದ ಶುಕ್ರವಾರ ಬಿಡುಗಡೆಯಾದ ಗುರುರಾಜ್ ಜಗ್ಗೇಶ್, ಮಾದೇಶ್ ಹಾಗೂ ಹೇಮಂತ್ ಅಭಿನಯದ ಕಾಗೆಮೊಟ್ಟೆ ಚಿತ್ರ ಯಶಸ್ಸಿನ ಹಾದಿಯತ್ತ ಸಾಗಿದೆ.

ಚಂದ್ರಹಾಸ್ ಕಥೆ ಬರೆದು ಆ್ಯಕ್ಷನ್‌ಕಟ್ ಹೇಳಿರುವ ಚಿತ್ರ, ಬಿಡುಗಡೆಯಾದ ಎಲ್ಲಾ  ಕೇಂದ್ರಗಳಲ್ಲಿ  ಪ್ರೇಕ್ಷಕರ  ಮನಗೆದ್ದು ಮುನ್ನಡೆಯುತ್ತಿದ್ದು, ಚಿತ್ರತಂಡ ಚಿತ್ರದ ಗೆಲುವಿನ ನಗೆ ಬೀರಿದೆ. 

ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾನಾಡಿದ ನಿರ್ದೇಶಕ ಚಂದ್ರಹಾಸ್, ಚಿತ್ರಕ್ಕೆ ಪ್ರೇಕ್ಷಕರಿಂದ ಒಳ್ಳೇ ಪ್ರತಿಕ್ರಿಯೆ ಬಂದಿದೆ. ಹೊಸಬರ ತಂಡಕ್ಕೆ ಈಮಟ್ಟದ ಸಹಕಾರ ಸಿಕ್ಕಿರುವುದು ಖುಷಿಯಾಗಿದೆ. 120 ಥಿಯೇಟರ್‌ಗಳಲ್ಲಿ  ಸಿನಿಮಾ ರಿಲೀಸಾಗಿತ್ತು, ಮಂದಿನ ವಾರದಿಂದ 20 ಚಿತ್ರಮಂದಿರಗಳು ಹೆಚ್ಚಾಗುತ್ತಿವೆ, ಉತ್ತರ ಕರ್ನಾಟಕ, ಬಿಸಿ ಸೆಂಟರ್‌ಗಳಲ್ಲಿ ಕಲೆಕ್ಷನ್ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ ಎಂದರು.

-: ಸತ್ಯಜಿತ್ ಚಿಕಿತ್ಸೆಗೆ 25 ಸಾವಿರ ರೂ.:-

ಕಾಗೆಮೊಟ್ಟೆ ಚಿತ್ರದಲ್ಲಿ ನಟಿಸಿದ್ದ ಹಿರಿಯನಟ ಸತ್ಯಜಿತ್ ಅವರು ಈಗ ಅನಾರೋಗ್ಯದಿಂದ ಆಸ್ಪತ್ರೆಯಲ್ಲಿದ್ದಾರೆ, ತ್ರಿವೇಣಿ ಚಿತ್ರಮಂದಿರದ  ಮೊದಲ ದಿನದ ಮಾರ್ನಿಂಗ್ ಶೋ ಕಲೆಕ್ಷನ್  25 ಸಾವಿರ ರೂ. ಗಳನ್ನು ಅವರ ಚಿಕಿತ್ಸೆಗಾಗಿ ನೀಡುತ್ತಿ ದ್ದೇವೆ ಎಂದು ನಿರ್ದೇಶಕರು ತಿಳಿಸಿದರು. ಚಿತ್ರದ ನಾಯಕಿ ತನುಜಾ ಮಾತನಾಡಿ ಇದು ನನ್ನ ಮೊದಲ ಚಿತ್ರ, ಹೈಸ್ಕೂಲ್ ಹುಡುಗಿಯ ಮೊದಲ ಕ್ರಷ್, ನಂತರ ಹೇಗೆ ಲವ್‌ನಲ್ಲಿ ಜಾರುತ್ತಾಳೆ ಎಂದು ನನ್ನ ಪಾತ್ರದ ಮೂಲಕ ತೋರಿಸಿದ್ದಾರೆ. ನಾನು ಆರಂಭದಲ್ಲಿ ಈ ಪಾತ್ರ ಮಾಡ್ತೀನಾ ಅಂತ ತುಂಬಾ ಹೆದರಿದ್ದೆ,  ಪ್ರತಿ ಸೀನನ್ನೂ ಭಯದಿಂದಲೇ ಮಾಡಿದೆ,  ಹೋಗ್ತಾ ಹೋಗ್ತಾ ಹೊಂದಿಕೊಂಡೆ. ಇಡೀ ಸಿನಿಮಾದಲ್ಲಿ ದಿಬೆಸ್ಟ್ ಅನ್ನೋದನ್ನು ಮನಸಿನ ಪುಟದಲಿ ಹಾಡಿನ ಮೂಲಕ ಕೊಟ್ಟಿದ್ಧೇನೆ ಅಂತ ನನ್ನ ಭಾವನೆ,  ಈಗ ಚಿತ್ರ ಸಕ್ಸಸ್ ಆಗಿರುವುದು ನಮಗೆಲ್ಲ ತುಂಬಾ ಖುಷಿಯಾಗಿದೆ ಎಂದು ಹೇಳಿದರು.   ನಂತರ ಚಿತ್ರದ  ನಾಯಕನಟ  ಗುರುರಾಜ್ ಜಗ್ಗೇಶ್  ಮಾತನಾಡುತ್ತ,   ಚಂದ್ರಹಾಸ್‌ಗೆ  ಒಂದು  ರಾ ಸಬ್ಜೆಕ್ಟ್ ಮಾಡಬೇಕೆಂಬ ಕನಸಿತ್ತು. ಅದಕ್ಕೆ ಮೂರು ಪಾತ್ರಗಳನ್ನಿಟ್ಟುಕೊಂಡು ಒಳ್ಳೇ ಕಥೆ ಮಾಡಿದರು.  ನಮಗೆಲ್ಲ ನೀವು ಹೇಗಿದ್ದೀರೋ ಹಾಗೇ ಆ್ಯಕ್ಟ್ ಮಾಡಿ ಎಂದಿದ್ದರು,  ನಮ್ಮಲ್ಲಿ ಏನೇ ಇದ್ದರೂ, ಅದನ್ನು ಹೆಕ್ಕಿ ತೆಗೆಯುವುದು ನಿರ್ದೇಶಕರು, ಅದನ್ನು ಚಂದ್ರಹಾಸ್ ಸಮರ್ಥವಾಗಿ ಮಾಡಿದ್ದಾರೆ. ಇಡೀ ಚಿತ್ರದಲ್ಲಿ ಯಾವುದೇ ಡೆಮ್ಮಿ ಪಾತ್ರ ಅಂತ ಇಲ್ಲ, ಎಲ್ಲರಿಗೂ ಒಳ್ಳೇ ಅವಕಾಶ ಸಿಕ್ಕಿದೆ, ಸಿನಿಮಾದಲ್ಲಿರುವ ರಿಯಾಲಿಟಿ  ಚಿತ್ರ ನೋಡಿದ ಎಲ್ಲರಿಗೂ ಇಷ್ಟವಾಗಿದೆ. ಕೃಷ್ಣ  ಎಲ್ಲಿ ಬದುಕು ಆರಂಭಿಸಿದ,  ಎಲ್ಲಿ  ಫಿನಿಶ್ ಆದ ಎಂಬುದುನ್ನು ನೈಜವಾಗಿ  ಮೂಡಿಸಿದ್ದಾರೆ. ನನಗೆ ಆ್ಯಕ್ಷನ್  ಎಷ್ಟು ಈಜಿನೋ, ರೊಮ್ಯಾನ್ಸ್ ಮಾಡುವುದು  ಅಷ್ಟೇ ಕಷ್ಟವಾಗಿತ್ತು ಎಂದು ಚಿತ್ರೀಕರಣದ ಅನುಭವಗಳನ್ನು  ಹಂಚಿಕೊಂಡರು.  ಚಿತ್ರದ ಸಾಹಸ ನಿರ್ದೇಶಕ ಮಾಸ್ ಮಾದ, ನಟ ಮಾದೇಶ್, ಛಾಯಾಗ್ರಾಹಕ ಪಿ.ಎಲ್. ರವಿ, ಚಿತ್ರದ ವಿತರಕ ಆಟೋರಾಜು ಕೂಡ ಹಾಜರಿದ್ದು ಚಿತ್ರದ ಯಶಸ್ಸಿನ ಸಂತಸ ಹಂಚಿಕೊಂಡರು. 

ಸುದ್ದಿ ಓದಿ