ಹುನಗುಂದ

ಮುಂಚೂಣಿ ನಾಯಕರ ಮೇಲೆ ನಿಗಾವಹಿಸಲು ಅಧಿಕಾರಿಗಳಿಗೆ ಮಾಹಿತಿ: ಚಿತ್ತವಾಡಗಿ

ಮುಂಚೂಣಿ ನಾಯಕರ ಮೇಲೆ ನಿಗಾವಹಿಸಲು ಅಧಿಕಾರಿಗಳಿಗೆ ಮಾಹಿತಿ: ಚಿತ್ತವಾಡಗಿ

ಹುನಗುಂದ 10: ಸಾರಿಗೆ ನೌಕರರ ಮುಷ್ಕರದಿಂದ ಸಾರ್ವಜನಿಕರ ಆಸ್ತಿ ಪಾಸ್ತಿಗಳಿಗೆ ಹಾನಿಯಾಗಬಾರದು ಎನ್ನುವ ಉದ್ದೇಶದಿಂದ ಸಾರಿಗೆ ನೌಕರರ ಮುಂಚೂಣಿಯಲ್ಲಿರುವ ನಾಯಕರ ಮೇಲೆ ನಿಗಾವಹಿಸುವಂತೆ ನಮ್ಮ ಡೀಪೋದ ಆರು ಜನ ನೌಕರರ ಹೆಸರನ್ನು ನಮ್ಮ ಮೇಲಾಧಿಕಾರಿಗಳಿಗೆ ಮತ್ತು ಪೊಲೀಸ್ ಇಲಾಖೆಯ ಅಧಿಕಾರಿಗಳಿಗೆ ನೀಡಲಾಗಿದೆ ಎಂದು ಡೀಪೋ ಮ್ಯಾನೇಜರ್ ಬಾಲಪ್ಪ ಬಿ.ಚಿತ್ತವಾಡಗಿ ತಿಳಿಸಿದರು.                                                                                         

ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಸರ್ಕಾರ ಸಾರಿಗೆ ನೌಕರರಿಗೆ ಸಾಕಷ್ಟು ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದರೂ ಸಹ ಕರ್ತವ್ಯಕ್ಕೆ ಬಂದಿಲ್ಲ. ನಾವು ಸಹ ನಮ್ಮ ಡೀಪೋದಲ್ಲಿ ಕಾರ್ಯನಿರ್ವಹಿಸುತ್ತಿರುವ ಚಾಲಕ ಮತ್ತು ನಿರ್ವಾಹಕರ ಮನೆ ಮನೆಗಳಿಗೆ ನಮ್ಮ ಇಲಾಖೆಯ ಅಧಿಕಾರಿಗಳನ್ನು ಕಳಿಸಿ ಮನವೊಲಿಸುವ ಪ್ರಯತ್ನ ಮಾಡಿದರೂ ಯಾವದೇ ಪ್ರಯೋಜನವಾಗಿಲ್ಲ, ಅದು ಅಲ್ಲದೇ ಅಧಿಕಾರಿಗಳು ನೌಕರರ ಮನೆಗಳಿಗೆ ತೆರಳಿದರೂ ಸಹ ಯಾರು ಕೈಗೆ ಸಿಗುತ್ತಿಲ್ಲ. ಸರ್ಕಾರ ಈಗಾಗಲೇ ಯಾರು ಕರ್ತವ್ಯಕ್ಕೆ ಬಂದಿಲ್ಲ ಅಂತವರ ಸಂಬಳವನ್ನು ಕಡಿತಗೊಳಿಸುವಂತೆ ನಿರ್ದೇಶನ ನೀಡಿದ್ದು, ಆ ಪ್ರಕಾರ ಕರ್ತವ್ಯಕ್ಕೆ ಗೈರಾದವರ ಹೆಸರನ್ನು ನಮ್ಮ ಮೇಲಾಧಿಕಾರಿಗಳಿಗೆ ಕಳಿಸಿಕೊಡಲಾಗುವುದು. ಇನ್ನು ಇಲಾಖೆ ಬಸ್ ಬಂದಾಗಿದ್ದರಿಂದ ಪರ್ಯಾಯವಾಗಿ ಖಾಸಗಿ ವಾಹನಗಳಿಗೆ ಪ್ರಯಾಣಿಕರನ್ನು ಸಾಗಾಟ ಮಾಡಲು ಸರ್ಕಾರವೇ ಅವಕಾಶ ನೀಡಿದ್ದು, ಅದರಂತೆ ನಮ್ಮಲ್ಲಿಯು ಸಹ ಖಾಸಗಿ ವಾಹನಗಳಿಗೆ ಅವಕಾಶ ನೀಡಲಾಗಿದೆ. ಸರ್ಕಾರದ ಆಸ್ತಿಗಳಿಗೆ ಹಾನಿಯಾಗಬಾರದು ಎನ್ನುವ ದೃಷ್ಠಿಯಿಂದ ಪೊಲೀಸ್ ಬಂದೂಬಸ್ತನ್ನು ಪಡೆದುಕೊಳ್ಳಲಾಗಿದೆ. ಸಾರಿಗೆ ನೌಕರರ ಮೇಲೆ ಸರ್ಕಾರ ಕಠಿಣ ಕ್ರಮ ತಗೆದುಕೊಳ್ಳುವ ಮುನ್ನವೇ ಸ್ವಯಂಪ್ರೇರಿತವಾಗಿ ಚಾಲಕ ಮತ್ತು ನಿರ್ವಾಹಕ ಕರ್ತವ್ಯಕ್ಕೆ ಹಾಜರಾಗುವುದಾದರೇ ಅಂತಹ ನೌಕರರಿಗೆ ಕೆಲಸ ನೀಡಿ ಅದರ ಜತೆ ಪೊಲೀಸ್ ಬಿಗಿಭದ್ರತೆಯನ್ನು ಕೂಡಾ ಅವರಿಗೆ ಒದಗಿಸುವ ವ್ಯವಸ್ಥೆಯನ್ನು ಮಾಡಲಾಗುವುದು ಎಂದರು.

ಸುದ್ದಿ ಓದಿ