ಕೆಕೆಆರ್ಡಿಬಿ ಅನುದಾನ, ಸಮರ್ಪಕ ಬಳಕೆ : ಭೀಮಾನಾಯ್ಕ
ಹಗರಿಬೊಮ್ಮನಹಳ್ಳಿ 02: ಕ್ಷೇತ್ರದ ಪ್ರತಿಯೊಂದು ಗ್ರಾಮಗಳಲ್ಲಿ ಸಿಸಿ ರಸ್ತೆ, ವ್ಯೆವಸ್ಥಿತ ಶಾಲಾ ಕೊಠಡಿಗಳನ್ನು ನಿರ್ಮಾಣ ಮಾಡುವ ಮುಖಾಂತರ ಕೆಕೆಆರ್ಡಿಬಿ ಯೋಜನೆಯನ್ನು ಸಮರ್ಪಕವಾಗಿ ಬಳಕೆ ಮಾಡಿಕೊಳ್ಳಲಾಗಿದೆ ಎಂದು ಶಾಸಕ ಎಸ್.ಭೀಮಾನಾಯ್ಕ ಹೇಳಿದರು.
ತಾಲೂಕಿನ ಕಣವಿನಾಯಕನಹಳ್ಳಿ ಗ್ರಾಮದಲ್ಲಿ 15ಲಕ್ಷರೂ ಮೊತ್ತದ ಸಿಸಿ ರಸ್ತೆ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿ, ಕಣವಿನಾಯಕನಹಳ್ಳಿ ಗ್ರಾಮದಿಂದ ಹನಸಿಗೆ ಹೋಗುವ ರಸ್ತೆ ಅಭಿವೃಧ್ದಿಗೆ ಶೀಘ್ರದಲ್ಲಿ ಅನುದಾನ ನೀಡಲಾಗುವುದು. ಗ್ರಾಮದ ದೇವಸ್ಥಾನ ನಿರ್ಮಾಣಕ್ಕೆ ದೇವಸ್ಥಾನ ಸಮಿತಿ ರಚನೆಯಾದ ನಂತರ ಶಾಸಕರ ಅನುದಾನದಲ್ಲಿ 2ಲಕ್ಷರೂ ಅನುದಾನ ನೀಡಲಾಗುವುದು. ಶಾಸಕರಾದವರಿಗೆ ಅಭಿವೃಧ್ದಿ ಇಚ್ಚಾಶಕ್ತಿ ಇರಬೇಕು. ಬಿಜೆಪಿ ಸರಕಾರ ಬಂದ ನಂತರ ಕ್ಷೇತ್ರದಲ್ಲಿ ಅನುದಾನ ಕೊರತೆಯಾಗಿದೆ. ಸಿದ್ದರಾಮಯ್ಯ ಸಿಎಂ ಇದ್ದ ಸಂದರ್ಭದಲ್ಲಿ ಕ್ಷೇತ್ರಕ್ಕೆ 2ಸಾವಿರ ಕೋಟಿರೂ ಅನುದಾನ ತಂದು ಸಮಗ್ರ ಅಭಿವೃಧ್ದಿ ಮಾಡಲಾಗಿದೆ ಎಂದು ತಿಳಿಸಿದರು. ಇದೇವೇಳೆ ಹನಸಿ ಶಾಲಾ ಕೊಠಡಿ ನಿರ್ಮಾಣಕ್ಕೆ, ಅಂಗನವಾಡಿ ಕಟ್ಟಣ ನಿರ್ಮಾಣದ ಭೂಮಿಪೂಜೆ ನೆರವೇರಿಸಿದರು.
ಈ ಸಂದರ್ಭದಲ್ಲಿ ತಹಶೀಲ್ದಾರ್ ಶರಣಮ್ಮ, ಮುಖಂಡರಾದ ಮುಟುಗನಹಳ್ಳಿ ಕೊಟ್ರೇಶ, ಕನ್ನಿಹಳ್ಳಿ ಚಂದ್ರಶೇಖರ, ಗಂಗಯ್ಯಸ್ವಾಮಿ, ಹನಸಿ ದೇವರಾಜ, ಗ್ರಾ.ಪಂ.ಸದಸ್ಯ ಪ್ರಕಾಶ್, ವ,ವೀರೇಶ್, ಧನಂಜಯ, ಭರಮಪ್ಪ, ಗೋಣಿಬಸಪ್ಪ, ಕೊಟ್ರೇಶ ಇತರರಿದ್ದರು.