ಮನರಂಜನೆ

ನಟ ಕಿಚ್ಚ ಸುದೀಪ್ ಡೆನ್ವರ್ ಬ್ರಾಂಡ್ ರಾಯಭಾರಿ

ನಟ ಕಿಚ್ಚ ಸುದೀಪ್ ಡೆನ್ವರ್ ಬ್ರಾಂಡ್ ರಾಯಭಾರಿ

ಬೆಂಗಳೂರು, ಜ 25 :ನಟ ಕಿಚ್ಚ ಸುದೀಪ್ ಅವರು ಡೆನ್ವರ್ ಬ್ರಾಂಡ್ ರಾಯಭಾರಿಯಾಗಿರುವುದಾಗಿ ಕಂಪನಿ ಮಾರ್ಕೆಟಿಂಗ್ ಮತ್ತು ಸೇಲ್ಸ್ ನ ನಿರ್ದೇಶಕ ಸೌರವ್ ಗುಪ್ತಾ ಘೋಷಿಸಿದ್ದಾರೆ. ಈ ರಾಯಭಾರಿತ್ವ ಎರಡು ವರ್ಷದ ಅವಧಿಯವರೆಗೆ ಇರಲಿದೆ. ಕಿಚ್ಚ ಸುದೀಪ್ ನಟನೆ ಜತೆಗೆ ಈಗಾಗಲೇ ಸಾಕಷ್ಟು ಬ್ರಾಂಡ್ ಗಳಿಗೆ ಅಂಬಾಸಿಡರ್ ಆಗಿದ್ದಾರೆ. ಅದೇ ರೀತಿ ಇದೀಗ ಡೆನ್ವರ್ ಫರ್ಪ್ಯೂಮ್ ಬ್ರಾಂಡ್ಗೂ ರಾಯಭಾರಿಯಾಗಿದ್ದಾರೆ. ಭಾನುವಾರ ನಗರದ ಎಂಜಿ ರಸ್ತೆಯಲ್ಲಿನ ತಾಜ್ ಹೋಟೆಲ್ ನಲ್ಲಿ ನಡೆದ ಅದ್ದೂರಿ ಕಾರ್ಯಕ್ರಮದಲ್ಲಿ ಸ್ವತಃ ಕಿಚ್ಚ ಸುದೀಪ್ ಮತ್ತು ಡೆನ್ವರ್ ಕಂಪನಿಯ ನಿರ್ದೇಶಕ ಸೌರವ್ ಗುಪ್ತಾ ಭಾಗವಹಿಸಿ ಪ್ರಾಡಕ್ಟ್ ಮತ್ತು ಡೆನ್ವರ್ ಬಗ್ಗೆ ಮಾಹಿತಿ ನೀಡಿದರು. “ಈಗಾಗಲೇ ನಾವು ಕಳೆದ ಹಲವು ವರ್ಷಗಳಿಂದ ಈ ಮಾರುಕಟ್ಟೆಯಲ್ಲಿದ್ದೇವೆ. ದಕ್ಷಿಣ ಮಾರುಕಟ್ಟೆಯಲ್ಲಿಯೂ ಒಳ್ಳೆಯ ಹೋಲ್ಡ್ ಸೃಷ್ಟಿ ಮಾಡಿದ್ದೇವೆ.

ಅದರಂತೆ ಇನ್ನೊಂದು ಹೆಜ್ಜೆ ಮುಂದೆ ಹೋಗಿ ಕನ್ನಡ ಸೇರಿ ಬಹುಭಾಷೆಗಳಲ್ಲಿ ಹೆಸರು ಮಾಡಿರುವ ಬಾದ್ಷಾ ಕಿಚ್ಚ ಸುದೀಪ್ ರಾಯಭಾರಿಯಾಗಿದ್ದಾರೆ. ನಮ್ಮ ಬ್ರಾಂಡ್ ನ ಟ್ಯಾಗ್ ಲೈನ್ ದಿ ರಿಯಲ್ ಸೆಂಟ್ ಆಫ್ ಸಕ್ಸಸ್. ಇದೀಗ ಆ ರೀತಿ ಯಶಸ್ಸು ಕಂಡ ಸುದೀಪ್ ಅವರು ನಮ್ಮ ಬಳಗ ಸೇರಿಕೊಂಡಿದ್ದಕ್ಕೆ ಅವರಿಗೆ ನಮ್ಮ ಕಡೆಯಿಂದ ಸ್ವಾಗತ ಎಂದು ಸೌರವ್ ಗುಪ್ತಾ ತಿಳಿಸಿದರು.  ಡೆನ್ವರ್ ಫರ್ಪ್ಯೂಮ್ ಮತ್ತು ಡಿಯೋಡ್ರಂಟ್ನ ರಾಯಭಾರಿಯಾಗಿರುವ ಸುದೀಪ್ ಮಾತನಾಡಿ, ಸಿನಿಮಾ ಕ್ಷೇತ್ರದಲ್ಲಿ ಈ ರೀತಿಯ  ಪ್ರಾಡಕ್ಟ್ಗಳು, ಬ್ರಾಂಡ್ಗಳ ಅವಕಾಶ ಸಹಜ. ಯಾವ ಬ್ರಾಂಡ್ ನಮಗೆ ಹೊಂದಾಣಿಕೆ ಆಗುತ್ತದೋ ಅದನ್ನು ಆಯ್ದುಕೊಳ್ಳಬೇಕು. ಸೌರವ್ ಅವರು ಈ ಬ್ರಾಂಡ್ ಬಗ್ಗೆ ಹೇಳಿದಾಗ, ಖುಷಿಯಾಯಿತು. ಈಗಾಗಲೇ ಹಿಂದಿಯಲ್ಲಿ ಶಾರುಖ್ ಖಾನ್, ತೆಲುಗಿನಲ್ಲಿ ಮಹೇಶ್ ಬಾಬು ಈ ಬ್ರಾಂಡ್ನ ರಾಯಭಾರಿಯಾಗಿದ್ದಾರೆ.  ಕನ್ನಡದಲ್ಲಿ ನಾನು ಈ ಪ್ರಾಡಕ್ಟ್ ನ ಮುಖವಾಗಿದ್ದೇನೆ ಎಂದರು. ಡೆನ್ವರ್ ಫರ್ಪ್ಯೂಮ್ 2007 ರಲ್ಲಿ ಸ್ಥಾಪನೆಯಾಗಿ ಡಿಯೋಡ್ರಂಟ್ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿದೆ. ಭಾರತ ಸೇರಿ ಆಫ್ರಿಕಾ, ಮಾಲ್ಡೀವ್ಸ್, ನೇಪಾಳ, ಬಾಂಗ್ಲಾದೇಶ, ಶ್ರೀಲಂಕಾ ಮತ್ತು ಮಲೇಷ್ಯಾಗಳಂತಹ ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿಯೂ ಲಭ್ಯವಿದೆ. 2017ರಲ್ಲಿ ಶಾರುಖ್ ಖಾನ್, 2019ರಲ್ಲಿ ಟಾಲಿವುಡ್ ನಟ ಮಹೇಶ್ ಬಾಬು ಈ ಬ್ರಾಂಡ್ನ ಅಂಬಾಸಿಡರ್ ಆಗಿದ್ದರು. ಇದೀಗ ಕರ್ನಾಟಕದಲ್ಲಿ ಸುದೀಪ್ ಬ್ರಾಂಡ್ ನ ಮುಖವಾಗುತ್ತಿದ್ದಾರೆ. 

 


ಸುದ್ದಿ ಓದಿ