ಮನರಂಜನೆ

ಜ.8ಕ್ಕೆ 'ಕೆಜಿಎಫ್-2 ' ಟೀಸರ್ ಬಿಡುಗಡೆ

ಜ.8ಕ್ಕೆ 'ಕೆಜಿಎಫ್-2 ' ಟೀಸರ್ ಬಿಡುಗಡೆ

ಬೆಂಗಳೂರು, ಜ.6 : ಸ್ಯಾಂಡಲ್ ವುಡ್ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ಚಿತ್ರ ಕೆಜಿಎಫ್-2 ಸಿನಿಮಾದ ಟೀಸರ್ ಬಿಡುಗಡೆಗೊಳ್ಳಲು ಸಿದ್ಧಗೊಂಡಿದೆ. ಜ. 8ರಂದು ಟೀಸರ್ ಸಿನಿರಸಿಕರ ಮುಂದೆ ಬರಲಿದೆ. ಈ ಮಾಹಿತಿ ಯನ್ನು ಖುದ್ದು ಚಿತ್ರ ನಿರ್ದೇಶಕರು ಮಾಹಿತಿ ನೀಡಿದ್ದಾರೆ.ಇಂದು ಬೆಳಗ್ಗೆ ಟ್ವೀಟ್ ಮಾಡಿರುವ ನಿರ್ದೇಶಕ ಪ್ರಶಾಂತ್ ನೀಲ್, ಕೆಜಿಎಫ್-2 ಟೀಸರ್ ಬಿಡುಗಡೆಗೆ ಕೇವಲ 2 ದಿನ ಮಾತ್ರ ಬಾಕಿ ಇದೆ. ಜ‌. 8ರಂದು ಬೆಳಗ್ಗೆ 10.18ಕ್ಕೆ ಟೀಸರ್ ರಿಲೀಸ್ ಆಗಲಿದೆ ಎಂದು ಸ್ಪಷ್ಟಪಡಿಸಿದ್ದಾರೆ‌.ಹೊಂಬಾಳೆ ಫಿಲ್ಮ್ಸ್ ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಯಾಗಲಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.ಕೆಜಿಎಫ್ ಮೊದಲ- ಭಾಗ ನೋಡಿದ ಸಿನಿಪ್ರಿಯರು ಹಲವು ಪ್ರಶ್ನೆಗಳನ್ನಿಟ್ಟುಕೊಂಡು ಚಿತ್ರಮಂದಿರದಿಂದ  ಹೊರ ಬಂದಿದ್ದರು. ಆ ಎಲ್ಲಾ ಪ್ರಶ್ನೆಗಳಿಗೆ ಭಾಗ -2ರಲ್ಲಿ ಉತ್ತರ ಸಿಗಲಿದೆ . 

 

ಸುದ್ದಿ ಓದಿ