ರಾಷ್ಟ್ರೀಯ

ಪುತ್ರನ ವಿರುದ್ದ ಇಡಿ ಪ್ರಕರಣ ವಜಾಗೊಳಿಸಲು ರೈತರಿಗೆ ದ್ರೋಹ; ಅಮರಿಂದರ್ ಸಿಂಗ್ ವಿರುದ್ದ ಕೇಜ್ರೀವಾಲ್ ಆಕ್ರೋಶ

ಪುತ್ರನ ವಿರುದ್ದ ಇಡಿ ಪ್ರಕರಣ ವಜಾಗೊಳಿಸಲು  ರೈತರಿಗೆ ದ್ರೋಹ;  ಅಮರಿಂದರ್ ಸಿಂಗ್  ವಿರುದ್ದ ಕೇಜ್ರೀವಾಲ್ ಆಕ್ರೋಶ

ನವದೆಹಲಿ, ಡಿ 14 :ಹಿರಿಯ ಕಾಂಗ್ರೆಸ್  ನಾಯಕ, ಪಂಜಾಬ್ ಮುಖ್ಯಮಂತ್ರಿ  ಕ್ಯಾಪ್ಟನ್  ಅಮರಿಂದರ್ ಸಿಂಗ್ ಅವರ   ವಿರುದ್ಧ ದೆಹಲಿ ಮುಖ್ಯಮಂತ್ರಿ ಅರವಿಂದ್ ಸಿಂಗ್ ಸೋಮವಾರ  ತೀವ್ರ ವಾಗ್ದಾಳಿ ನಡೆಸಿದ್ದಾರೆ.  ತಾವು ಸದಾ ರೈತರ ಪರ  ನಿಲ್ಲುವುದಾಗಿ  ಎಂದು  ಅವರು  ಸ್ಪಷ್ಟಪಡಿಸಿದ್ದಾರೆ. "ನಾನೆಂದಿಗೂ  ರೈತರ  ಪರ,  ದೆಹಲಿ ಕ್ರೀಡಾಂಗಣ ಜೈಲಾಗದಂತೆ ನೋಡಿಕೊಂಡಿದ್ದೇನೆ   ಕೇಂದ್ರದೊಂದಿಗೆ ಹೋರಾಟ ನಡೆಸಿ.  ರೈತರ ರಕ್ಷಣೆಗಾಗಿ ಸೇವೆ ಸಲ್ಲಿಸುತ್ತಿದ್ದೇನೆ.  ಆದರೆ,  ನೀವು ( ಅಮರಿಂದರ್ ಸಿಂಗ್)   ನಿಮ್ಮ ಪುತ್ರನ ವಿರುದ್ಧ  ದಾಖಲಾಗಿರುವ   ಇಡಿ ದಾಖಲಿಸಿರುವ  ಪ್ರಕರಣಗಳನ್ನು  ವಜಾಗೊಳಿಸಲು   ಕೇಂದ್ರದೊಂದಿಗೆ ಒಪ್ಪಂದ ಮಾಡಿಕೊಂಡಿದ್ದೀರಿ,  ಪ್ರಕರಣಗಳನ್ನು  ವಜಾಗೊಳಿಸಲು ನೀವು ರೈತ ಚಳವಳಿಗೆ ದ್ರೋಹ ಬಗೆದ್ದೀದ್ದೀರಿ,   ರೈತರಿಗೆ ದ್ರೋಹ ಎಸಗಿದ್ದೀರಿ ಎಂದು ಕೇಜ್ರಿವಾಲ್ ಟ್ವಿಟ್ಟರ್  ಮೂಲಕ  ಮುಖ್ಯಮಂತ್ರಿ  ಅಮರಿಂದರ್ ಸಿಂಗ್  ವಿರುದ್ಧ ವಾಗ್ದಾಳಿ ನಡೆಸಿದರು.

ಸುದ್ದಿ ಓದಿ