ಬಳ್ಳಾರಿ

ಕೋವಿಡ್ ಮಾರ್ಗಸೂಚಿಗಳೊಂದಿಗೆ ಕೆ-ಸೆಟ್ ಪರೀಕ್ಷೆಗಳು

ಕೋವಿಡ್ ಮಾರ್ಗಸೂಚಿಗಳೊಂದಿಗೆ ಕೆ-ಸೆಟ್ ಪರೀಕ್ಷೆಗಳು

ಬಳ್ಳಾರಿ 07:  ಮೈಸೂರು ವಿಶ್ವ್ವವಿದ್ಯಾಲಯವು ದಿ.11ರಂದು ಆಯೋಜಿಸಿರುವ ಕೆ-ಸೆಟ್ ಪರೀಕ್ಷೆಗಳಿಗೆ ಸಂಬಂಧಿಸಿದಂತೆ, ವಿಜಯನಗರ ಕೃಷ್ಣದೇವರಾಯ ವಿಶ್ವವಿದ್ಯಾಲಯವು ನೋಡಲ್ ಕೇಂದ್ರವಾಗಿ ಕಾರ್ಯನಿರ್ವಹಿಸಲಿರುವ ಹಿನ್ನಲೆಯಲ್ಲಿ ಬಳ್ಳಾರಿಯ 11 ಪರೀಕ್ಷಾ ಕೇಂದ್ರಗಳಲ್ಲಿ ಕೆ-ಸೆಟ್ ಪರೀಕ್ಷೆಗಳು ನಡೆಯಲಿವೆ. ವಿದ್ಯಾರ್ಥಿಗಳು ಕೋವಿಡ್-19 ಮಾರ್ಗಸೂಚಿಗಳನ್ನು ಪಾಲಿಸಬೇಕು. ಮಾಸ್ಕ್ ಧರಿಸಬೇಕು, ಸ್ಯಾನಿಟೈಸರ್, ಗ್ಲೌಸ್‍ಗಳನ್ನು ಬಳಸಬೇಕು, ವಿದ್ಯಾರ್ಥಿಗಳು ಹಾಲ್‍ಟಿಕೇಟ್(ಗುರುತಿನ ಪತ್ರ) ನೊಂದಿಗೆ ಕಡ್ಡಾಯವಾಗಿ ಪರೀಕ್ಷಾ ಸಮಯಕ್ಕೆ ಸರಿಯಾಗಿ ಕೊಠಡಿಯಲ್ಲಿ ಹಾಜರಿರಲು ಸೂಚಿಸಿದೆ.

ಸುದ್ದಿ ಓದಿ