11 ಪರೀಕ್ಷಾ ಕೇಂದ್ರಗಳಲ್ಲಿ ಕೆ-ಸೆಟ್ ಪರೀಕ್ಷೆಗಳು
ಬಳ್ಳಾರಿ 07: ಮೈಸೂರು ವಿಶ್ವ್ವವಿದ್ಯಾಲಯವು ಮಾ. 11ರಂದು ಆಯೋಜಿಸಿರುವ ಕೆ-ಸೆಟ್ ಪರೀಕ್ಷೆಗಳಿಗೆ ಸಂಬಂಧಿಸಿದಂತೆ, ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯವು ನೋಡಲ್ ಕೇಂದ್ರವಾಗಿ ಕಾರ್ಯನಿರ್ವಹಿಸಲಿರುವ ಹಿನ್ನಲೆಯಲ್ಲಿ ಬಳ್ಳಾರಿಯ 11 ಪರೀಕ್ಷಾ ಕೇಂದ್ರಗಳಲ್ಲಿ ಕೆ-ಸೆಟ್ ಪರೀಕ್ಷೆಗಳು ನಡೆಯಲಿವೆ.
ಅದರಂತೆ, ಪರೀಕ್ಷಾ ಕೇಂದ್ರಗಳಾದ ವಿಜಯನಗರ ಕೃಷ್ಣದೇವರಾಯ ವಿಶ್ವವಿದ್ಯಾಲಯ, ಬಳ್ಳಾರಿ, ಸ.ಸ.ಅ. ಸರ್ಕಾರಿ ಪ್ರಥಮ ದರ್ಜೆ ಕಾಲೇಜು (ಸ್ವಾಯತ್ತ), ಬಳ್ಳಾರಿ ಗುರುತಿಪ್ಪೇರುದ್ರ ಕಾಲೇಜು, ಗಾಲಿ ರುಕ್ಮಿಣಿಯಮ್ಮ ಚೆಂಗಾರೆಡ್ಡಿ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜು, ಬಳ್ಳಾರಿ, ವೀರಶೈವ ಕಾಲೇಜು, ಬಳ್ಳಾರಿ, ಶೆಟ್ಟರ್ ಗುರುಶಾಂತಪ್ಪ (ಸಂಯುಕ್ತ) ಪದವಿ ಪೂರ್ವ ಕಾಲೇಜು, ಅಲ್ಲಂ ಸುಮಂಗಳಮ್ಮ ಮೆಮೋರಿಯಲ್ ಕಾಲೇಜು ಆಫ್ ವುಮೆನ್ಸ್, ಬಳ್ಳಾರಿ, ನ್ಯೂ ಚೈತ್ಯನ್ಯ ಪಿ.ಯು. ಕಾಲೇಜು, ಹವಂಬಾವಿ, ಬಳ್ಳಾರಿ ಮತ್ತು ರಾವ್ಬಹುದ್ದೂರ್ ವೈ ಮಹಾಬಲೇಶ್ವಪ್ಪ ಇಂಜಿನೀಯರಿಂಗ್ ಕಾಲೇಜು, ಬಳ್ಳಾರಿಯಲ್ಲಿ ಒಟ್ಟು 6,509 ವಿದ್ಯಾರ್ಥಿಗಳು ವಿವಿಧ ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆಯನ್ನು ಬರೆಯಲಿದ್ದಾರೆ. ವಿದ್ಯಾರ್ಥಿಗಳು ಕೋವಿಡ್-19 ಮಾರ್ಗಸೂಚಿಗಳನ್ನು ಪಾಲಿಸಬೇಕು. ಮಾಸ್ಕ್ ಧರಿಸಬೇಕು, ಸ್ಯಾನಿಟೈಸರ್, ಗ್ಲೌಸ್ಗಳನ್ನು ಬಳಸಬೇಕು, ವಿದ್ಯಾರ್ಥಿಗಳು ಹಾಲ್ಟಿಕೇಟ್ (ಗುರುತಿನ ಪತ್ರ) ನೊಂದಿಗೆ ಕಡ್ಡಾಯವಾಗಿ ಪರೀಕ್ಷಾ ಸಮಯಕ್ಕೆ ಸರಿಯಾಗಿ ಕೊಠಡಿಯಲ್ಲಿ ಹಾಜರಿರಲು ಸೂಚಿಸಿದ್ದಾರೆ.