ಪ್ಯಾಕೇಜ್ ಘೋಷಣೆಯಲ್ಲಿ ಪತ್ರಕರ್ತರ ಕಡೆಗಣನೆ
ಹಗರಿಬೊಮ್ಮನಹಳ್ಳಿ 22 : ಕೋವಿಡ್ 2ನೇ ಅಲೆಯ ಅಬ್ಬರ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು ಸಾವುಗಳ ಸಂಖ್ಯೆ ದ್ವಿಗುಣ ಗೊಳ್ಳುತ್ತಿದೆ. ಅದಕ್ಕಾಗಿ ಸಕರ್ಾರ ಹಲವು ವರ್ಗಗಳಿಗೆ ಪ್ಯಾಕೇಜ್ನ್ನು ಘೊಷಣೆ ಮಾಡಿದ್ದು, ಪ್ಯಾಕೇಜ್ನಲ್ಲಿ ಪತ್ರಕರ್ತರಿಗೆ ಕವಡೆ ಕಾಸಿನ ಕಿಮ್ಮತ್ತಿಲ್ಲದಂತೆ ಕಡೆಗಣಿಸಿರುವುದು ಖಂಡನೀಯ ಎಂದು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬುಡ್ಡಿ ಬಸವರಾಜ ಆಕ್ರೋಶ ವ್ಯಕ್ತಪಡಿಸಿದರು. ಪಟ್ಟಣದಲ್ಲಿ ಅವರು ಪತ್ರಿಕೆಯೊಂದಿಗೆ ಮಾತನಾಡಿ ಕೊರೋನಾ ಸಂಕಷ್ಟ ಸಮಯದಲ್ಲಿ ಮುದ್ರಣ ಮಾಧ್ಯಮ ಮತ್ತು ದೃಶ್ಯ ಮಾಧ್ಯಮ ಪತ್ರಕರ್ತರು ಈ ಮಹಾಮಾರಿಯ ಅಬ್ಬರವನ್ನು ಲೆಕ್ಕಿಸದೇ ನಾಡಿನ ಮೂಲೆ ಮೂಲೆಗಳಲ್ಲಿನ ಸುದ್ದಿಗಳನ್ನು ಹೆಕ್ಕಿತಂದು ಜನಜಾಗೃತಿ ಮೂಡಿಸಲು ಶ್ರಮಿಸುತ್ತಿದ್ದಾರೆ.
ಅಲ್ಲದೇ ಸಕರ್ಾರವೇ ಪತ್ರಕರ್ತರನ್ನು ಫ್ರಂಟ್ಲೈನ್ ಕೊರೋನಾ ವಾರಿಯರ್ಸ್ ಎಂದು ಘೋಷಣೆ ಮಾಡಿದ್ದು, ರಾಜ್ಯ ಸಕರ್ಾರ ಬಿಡುಗಡೆ ಮಾಡಿರುವ ಪ್ಯಾಕೇಜ್ನಲ್ಲಿ ಪತ್ರಕರ್ತರನ್ನು ಸಂಪೂರ್ಣವಾಗಿ ಕಡೆಗಣಿಸುವ ಮೂಲಕ ಯಡಿಯೂರಪ್ಪನವರ ಸಕರ್ಾರ ತಮ್ಮದು ಬರೀ ಉದ್ರಿ ಘೊಷಣೆ ಎಂಬುದನ್ನು ಸಾಬೀತು ಮಾಡಿ ಪತ್ರಕರ್ತರ ಮೂಗಿಗೆ ತುಪ್ಪ ಸವರಿದೆ ಎಂಬುದರಲ್ಲಿ ಎರೆಡುಮಾತಿಲ್ಲ. ಸದಾ ಅಕ್ಷರಗಳೊಂದಿಗೆ ಬದುಕು ಸವಿಸುತ್ತಾ ತಮ್ಮ ಕುಟುಂಬ ವರ್ಗವನ್ನು ಲೆಕ್ಕಿಸದೇ ಪತ್ರಕರ್ತರು ಸಮಾಜ ಸೇವೆಯಲ್ಲಿ ತೊಡಗಿದ್ದಾರೆ. ಎಲ್ಲೋ ಬೆರಳೆಣಿಕೆಯಷ್ಟು ಪತ್ರಕರ್ತರನ್ನು ಬಿಟ್ಟರೆ ರಾಜ್ಯದಲ್ಲಿ ಬಹುತೇಕ ಉಳಿದ ಪತ್ರಕರ್ತರೆಲ್ಲಾ ಆಥರ್ಿಕವಾಗಿ ಬಹಳ ಹಿಂದೆ ಉಳಿದಿದ್ದಾರೆ. ಆದರೂ ಸಹ ಸಕರ್ಾರ ಪತ್ರಕರ್ತರನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿ ಪ್ಯಾಕೇಜ್ ಘೋಷಣೆ ಮಾಡುವ ಮೂಲಕ ತನ್ನ ಉದ್ದಟತನವನ್ನು ಮೆರೆದಿರುವುದು ಈ ನಾಡಿನ ಸುದ್ದಿಮನೆಗಳ ದುರಂತವೇ ಸರಿ. ಆಡಳಿತ ರೂಢ ಸಕರ್ಾರದ ಪ್ರತೀ ಮಾತುಗಳನ್ನು ಅಕ್ಷರದ ಮೂಲಕ ಸುದ್ದಿಮಾಡಿ ನಾಡಿನ ಜನರ ಮನೆ ಮನೆಗೆ ಪ್ರಚಾರ ಪಡಿಸುವ ಮಾಧ್ಯಮ ವರ್ಗಕ್ಕೂ ತಮ್ಮದೇ ಕುಟುಂಬವಿರುತ್ತದೆ ಎಂಬುವ ಅರಿವಿರಬೇಕು, ಪತ್ರಕರ್ತರಿಗೆ ರಾಜ್ಯ ಸಕರ್ಾರದ ದ್ರೋಹ ಬಗೆಯದಂತೆ , ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಈ ಕೂಡಲೇ ಎಚ್ಚೆತ್ತುಕೊಂಡು ಕನರ್ಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯರಿಗೆ ವಿಶೇಷ ಪ್ಯಾಕೇಜ್ ಘೋಷಣೆ ಮಾಡಲೇಬೇಕೆಂದು ಈ ಮೂಲಕ ಒತ್ತಾಯಿಸುತ್ತಿದ್ದೇನೆ ಎಂದರು.