ಜೋಕುಮಾರ ಸ್ವಾಮಿಯ ಆಗಮನ: ಬುಟ್ಟಿಯಲ್ಲಿ ಹೊತ್ತು ಸಾಗಿದ ಮಹಿಳೆಯರು
ಹಗರಿಬೊಮ್ಮನಹಳ್ಳಿ 20: ತಾಲೂಕಿನ ತಂಬ್ರಹಳ್ಳಿ ಗ್ರಾಮದಲ್ಲಿ ಜನಪದ ಹಬ್ಬಗಳಲ್ಲೊಂದಾದ ಜೋಕುಮಾರನ ಹಬ್ಬವನ್ನು ಆಚರಿಸಲಾಯಿತು. ಗಣೇಶ ಮೂರ್ತಿ ವಿಸರ್ಜಿಸಿದ ಮರುದಿನವೇ ಜೋಕುಮಾರ ಜನ್ಮ ಪಡೆಯುತ್ತಾನೆ, ಜೋಕುಮಾರನ ಮೂರ್ತಿಗೆ ಬೇವಿನ ಎಲೆಗಳ ಉಡುಗೆಯೊಂದಿಗೆ ಅಲಂಕಾರ ಮಾಡುತ್ತಾರೆ ಬಾಯಿಗೆ ಬೆಣ್ಣೆಯನ್ನು ಒರೆಸಿ ಕಪ್ಪು ಕಾಡಿಗೆಯಿಂದ ಸಿಂಗಾರ ಮಾಡುತ್ತಾರೆ, ಬುಟ್ಟಿಯಲ್ಲಿ ಜೋಕುಮಾರನನ್ನು ಹೊತ್ತು ಕೊಂಡು ಸುಮಂಗಲಿಯರು ಓಣಿಯಲ್ಲಿ ಹಾಡುತ್ತಾ ಮನೆ ಮನೆಗೆ ಸಾಗುತ್ತಾರೆ.
ಜಾನಪದದಲ್ಲಿ ಅಪರೂಪ ಕಥೆ ಕಳೆಗಟ್ಟುವ ಜೋಕುಮಾರಸ್ವಾಮಿಯನ್ನು ಗಂಗಾಮತಸ್ಥ ಸಮುದಾಯದ ಮಹಿಳೆಯರು ಬುಟ್ಟಿಯಲ್ಲಿ ಹೊತ್ತು ಕೊಂಡು ಊರೂರು ಅಲೆಯುತ್ತಾರೆ ಪಾರಂಪಾರಿಕವಗಿ ಪೂರ್ವಜರು ಅನುಸರಿಸಿಕೊಂಡು ಬಂದ ಆಚರಣೆಯನ್ನು ಕೈಬಿಡ ದೆ ಇಂದಿಗೂ ಜೋಕುಮಾರನೊಂದಿಗೆ ಸಾಗಿಬಂದು ಜನಪದದ ಹಾಡುಗಳನ್ನು ಕಾಣಬಹು ದಾಗಿದೆ. ಬಾರಿಕರ ಮಹಿಳೆಯರು ಜೋಕುಮಾರಸ್ವಾಮಿಯನ್ನು ಬುಟ್ಟಿ ಯಲ್ಲಿ ಪ್ರತಿಷ್ಠಾಪಿಸಿ ಓಣಿಗಳಲ್ಲಿ ತಿರುಗಾಡಿ ಜನಪದ ಕಲೆಗಳನ್ನು ಪ್ರದರ್ಶಿಸುತ್ತಾರೆ.
ತಾಲೂಕಿನ ತಂಬ್ರಹಳ್ಳಿಯ ಬಡೆಗೆರ್ ಸಿದ್ದಪ್ಪನ ವರ ಮನೆಯಲ್ಲಿ ಕುಮಾರಸ್ವಾಮಿಯ ಮೂರ್ತಿಯನ್ನು ತಯಾರಿಸುತ್ತಾರೆ ಅದನ್ನು ಬುಟಿಷಯಲ್ಲಿ ಹೊತ್ತುಕೊಂಡು ಹೆಂಗಳೆಯರು ಸರದಿ ಪ್ರಕಾರ ವರ್ಷ ಒಬ್ಬರಂತೆ ಮೂರ್ತಿಯನ್ನು ತಮ್ಮ ಮನೆಗೆ ಹೋಗುವುದು ವಾಡಿಕೆ ಮೊದಲು ಗೌಡರು ಬಣಕಾರರು ಶಾನುಭೋಗರು ತಳವಾರ್ ಮನೆಗೆ ಹೋಗಿ ಪೂಜೆ ಮುಗಿಸಿಕೊಂಡು ಮುಡಿ ತುಂಬಾ ಹೂವ ಮುಡಿದಂತೆ ಚೆಲುವಿನ ತನ್ನ ಮಡದಿಯಾಗೆಂದು ಸುಕುಮಾರ ಈ ಜೋಕುಮಾರ ಎಂದೆಲ್ಲ ಆಡುತ್ತಾ ಬುಟ್ಟಿಯಲ್ಲಿರುವ ಬೇವಿನ ಪತ್ರೆಯನ್ನು ಕೊಟ್ಟು ಪ್ರತಿಯಾಗಿ ಕಾಳುಕಡಿ ಎನ್ನು ಪಡೆದುಕೊಳ್ಳುತ್ತಾರೆ ಆ ಬೇವಿನ ಪತ್ರಿಯನ್ನು ಹೊಲದಲ್ಲಿ ಇqಢದವುದರಿಂದ ಮಳೆ ಬೆಳೆ ಚೆನ್ನಾಗಿ ಬರುತ್ತದೆ ಎಂಬ ಪ್ರತೀತವೂ ಜನರ ನಂಬಿಕೆಯಾಗಿದೆ ಹಿಂದಿನ ಕಾಲದಿಂದಲೂ ಈ ಸಂಪ್ರದಾಯ ಹಳ್ಳಿಗಳಲ್ಲಿ ಆಚರಣೆಯಲ್ಲಿದೆ. ಹಿಂದಿನ ಕಾಲದಲ್ಲಿ ವರ್ಷಕ್ಕಾಗುವಷ್ಟು ಕಾಳು ಸಂಗ್ರಹವಾಗುತ್ತಿತ್ತು ಆದರೆ ಈಗ ಮಳೆಗಾಲ ಕೈಕೊಟ್ಟಿದ್ದರಿಂದ ಬೆಳೆ ಕಡಿಮೆಯಾಗುವುದರಿಂದ ನಮಗೆ ಬರುವ ಕಾಳಿನ ಸಂಗ್ರಹ ಕೂಡ ಕಡಿಮೆಯಾಗಿದೆ ಎನ್ನುತ್ತಾರೆ ಇವರು ಜೋಕುಮಾರಸ್ವಾಮಿ ಈ ವರ್ಷವಾದರ ಮಳೆಬೆಳೆ ಸಮೃದ್ಧಿವಾಗಿ ಕರುಣಿಸಲಿ ಎನ್ನುತ್ತಾರೆ ತಂಬ್ರಹಳ್ಳಿಯಲ್ಲಿ ಹುಟ್ಟಿದ ಜೋಕುಮಾರಸ್ವಾಮಿ 9 ಹಳ್ಳಿಗಳಲ್ಲಿ ಮೆರೆಯುತ್ತಾನೆ ಒಂಬತ್ತನೇ ದಿನದ ನಂತರ ಅನಂತನ ಹುಣ್ಣಿಮೆಯ ರಾತ್ರಿಯಂದು ದಲಿತರ ಕಾಲೋನಿಗೆ ಹೋಗಿ ಸಂಪ್ರದಾಯದಂತೆ ಭಚ್ಚಿ ದಲಿತ ಮಹಿಳೆಯೊಬ್ಬಳು ಮೂರ್ತಿಯನ್ನು ಇರಿಯುತ್ತಾಳೆ ಅಲ್ಲಿಗೆ ಜೋಕುಮಾರನ ಅಂತ್ಯವಾಗುತ್ತದೆ ಮೂರ್ತಿಯನ್ನು ನದಿಯ ದಡದಲ್ಲಿ ಇರುವ ಅಗಸರ ಬಂಡೆಯ ಕೆಳಗೆ ಬಾರಿಕರು ಇಟ್ಟು ತಿರುಗಿ ನೋಡದ ಬರುತ್ತಾರೆ ಪ್ರತಿವರ್ಷ ನಡೆಯುತ್ತಲೇ ಇರುತ್ತದೆ ಎಂದು ಸುಣಗಾರ ಪದ್ಮಾವತಿ ಹೇಳಿದರು. ಜೋಕುಮಾರ ಮೂರ್ತಿಯನ್ನು ಸುಣಗಾರ ಪದ್ದಮ್ಮ, ಸುಣಗಾರ ಹುಲಿಗೆಮ್ಮ, ಗುಡ್ಲಾನೂರು ಹನುಮಮ್ಮ, ಬಂಡಿ ರೇಣುಕಮ್ಮ, ಸುಣಗಾರ ಪದ್ಮಾವತಿ, ಸುಣಗಾರ ಅಂಬಮ್ಮ, ಸುಣಗಾರ ರೇಣುಕಮ್ಮ, ಮಾಲವಿ ಹುಲಿಗೆಮ್ಮ, ಸುಂಣಗಾರ ಮಂಜುಳಾ, ಎಸ್.ರೇಖಾ ಮೂರ್ತಿಯನ್ನು ಹೊತ್ತು ಸಾಗುತ್ತಾ ಕತೆ ಸೇರಿದಂತೆ ಹಾಡುಗಳನ್ನು ಹಾಡುತ್ತಾ ಸಾಗಿದರು.