ಚಲುವಾದಿ, ಮಾದಿಗ ಸಮುದಾಯ ನ್ಯಾ.ಎ.ಜೆ.ಸದಾಶಿವ ಆಯೋಗದ ವರದಿ ಜಾರಿಗಾಗಿ ಜಂಟಿ ಹೋರಾಟ
ಲೋಕದರ್ಶನ ವರದಿ
ಕಂಪ್ಲಿ 20: ಸ್ಥಳೀಯ ಎಪಿಎಂಸಿ ಆವರಣದಲ್ಲಿ ಚಲುವಾದಿ ಮತ್ತು ಮಾದಿಗ ಸಮುದಾಯಗಳ ಮುಖಂಡರು ಸೇರಿ ರಚಿಸಿಕೊಂಡ ಚಲುವಾದಿ ಮತ್ತು ಮಾದಿಗ ಸಮುದಾಯದ ನ್ಯಾ.ಎ.ಜೆ.ಸದಾಶಿವ ಆಯೋಗದ ವರದಿ ಜಾರಿಗಾಗಿ ಜಂಟಿ ಹೋರಾಟ ಸಮಿತಿ ಸದಸ್ಯರ ಸಂಘಟನಾ ಸಭೆ ಬುಧವಾರ ಜರುಗಿತು.
ಚಲುವಾದಿ ಮತ್ತು ಮಾದಿಗ ಸಮುದಾಯದ ನ್ಯಾ.ಎ.ಜೆ.ಸದಾಶಿವ ಆಯೋಗದ ವರದಿ ಜಾರಿಗಾಗಿ ಜಂಟಿ ಹೋರಾಟ ಸಮಿತಿ ಪ್ರಮುಖರಾದ ಸಿ.ಆರ್.ಹನುಮಂತ ಮತ್ತು ಜಿ.ರಾಮಣ್ಣ ಜಂಟಿಯಾಗಿ ಮಾತನಾಡಿ, ನ್ಯಾ ಎ.ಜೆ.ಸದಾಶಿವ ವರದಿ ಅನುಷ್ಠಾನ ವಿಚಾರದಲ್ಲಿ ಚಲುವಾದಿ ಮತ್ತು ಮಾದಿಗ ಸಮುದಾಯದ ಬೆಂಬಲ ವಿದೆ ಆದರೆ, ನ್ಯಾ.ಎ.ಜೆ.ಸದಾಶಿವ ವರದಿ ಜಾರಿಗೊಳಿಸಲು ಚಲುವಾದಿ ಮತ್ತು ಮಾದಿಗ ಸಮುದಾಯಗಳ ವಿರೋಧವಿದೆ ಎಂದು ಬೋವಿ ಮತ್ತು ಲಂಬಾಣಿ ಸಮುದಾಯಗಳ ಮುಖಂಡರು ಹೇಳಿಕೆ ನೀಡಿದ್ದು ಸರಿಯಲ್ಲ. ಸದಾಶಿವ ವರದಿ ಜಾರಿಗೆಗೆ ಚಲುವಾದಿ ಮತ್ತು ಮಾದಿಗ ಸಮುದಾಯದವರು ಒಕ್ಕೊರಲಿನಿಂದ ಆಗ್ರಹಿಸುತ್ತೇವೆ. ಇದಕ್ಕಾಗಿ ಚಲುವಾದಿ ಮತ್ತು ಮಾದಿಗ ಸಮುದಾಯದವರು ಒಗ್ಗೂಡಿ ಹೋರಾಟ ಮಾಡಲಿಕ್ಕಾಗಿ ಚಲುವಾದಿ ಮತ್ತು ಮಾದಿಗ ಸಮುದಾಯದ ನ್ಯಾ.ಎ.ಜೆ.ಸದಾಶಿವ ಆಯೋಗದ ವರದಿ ಜಾರಿಗಾಗಿ ಜಂಟಿ ಹೋರಾಟ ಸಮಿತಿ ರಚಿಸಿಕೊಂಡಿದ್ದು, ಶೀಘ್ರದಲ್ಲಿಯೇ ಪದಾಧಿಕಾರಿಗಳನ್ನು ಆಯ್ಕೆಮಾಡಿಕೊಂಡು, ಸದಾಶಿವ ವರದಿ ಜಾರಿಗೆ ಒತ್ತಾಯಿಸಿ ರಾಜ್ಯಮಟ್ಟದ ಬಹೃತ್ ಮಟ್ಟದ ಹೋರಾಟ ಹಮ್ಮಿಕೊಳ್ಳುತ್ತವೆ ಎಂದರು ಸಭೆಯಲ್ಲಿ ಮಾದಿಗ ಸಮುದಾಯದ ಮುಖಂಡರಾದ ಎ.ಲಕ್ಷ್ಮಿಪತಿ, ವಕೀಲ ಮುನಿಸ್ವಾಮಿ, ಮೆಟ್ರಿ ಕುಮಾರ್, ಪ್ರಸಾದ್, ಜಡೆಪ್ಪ, ಶೇಖರ್, ಚಲುವಾದಿ ಸಮುದಾಯದ ಮುಖಂಡರಾದ ವಕೀಲರಾದ ಸಿ.ಯಂಕಪ್ಪ, ರುದ್ರ್ಪ, ಟಿ.ಶಿವಪ್ಪ, ಬಾವಿಕಟ್ಟೆ ದೇವೇಂದ್ರ, ಸಿ.ವೆಂಕಟೇಶ್, ಕೆ.ಲಕ್ಷ್ಮಣ, ಜವುಕು ಬಸವರಾಜ್, ಬೆಳ್ಳಕ್ಕಿ ಹುಸೇನಪ್ಪ, ವಿರುಪಾಕ್ಷಿ, ಟಿ.ವಿರುಪಣ್ಣ ಸೇರಿ ಚಲುವಾದಿ ಮತ್ತು ಮಾದಿಗ ಸಮುದಾಯಗಳ ಮುಖಂಡರಿದ್ದರು.