ಮುಂಡರಗಿ

3 ರಿಂದ ಜೀವನ ದರ್ಶನ ಪ್ರವಚನ ಕಾರ್ಯಕ್ರಮ

3 ರಿಂದ ಜೀವನ ದರ್ಶನ ಪ್ರವಚನ ಕಾರ್ಯಕ್ರಮ

ಲೋಕದರ್ಶನ ವರದಿ 

ಮುಂಡರಗಿ 31:  ಆ.3ರಿಂದ 27ರವರೆಗೆ ಪಟ್ಟಣದ ಜಗದ್ಗುರು ಅನ್ನದಾನೀಶ್ವರ ಸಂಸ್ಥಾನ ಮಠದಲ್ಲಿ ಶ್ರಾವಣಮಾಸದ ಪ್ರಯುಕ್ತ ಜಗದ್ಗುರು ನಾಡೋಜ ಡಾ.ಅನ್ನದಾನೀಶ್ವರ ಮಹಾಸ್ವಾಮಿಗಳ ಸಾನಿಧ್ಯದಲ್ಲಿ ಅಬ್ಬಿಗೇರಿಯ ಶಂಭುಲಿಂಗ ಶಾಸ್ತ್ರಿಗಳಿಂದ ಹಾನಗಲ್ ಗುರು ಕುಮಾರ ಶಿವಯೋಗಿಗಳ ಜೀವನ ದರ್ಶನ ಪ್ರವಚನ ಕಾರ್ಯಕ್ರಮ ಹಾಗೂ ಭಾರತ ಸ್ವಾತಂತ್ರ್ಯೋತ್ಸದ 75ನೇ ಅಮೃತ ಮಹೋತ್ಸವದ ವಿಶೇಷ ಕಾರ್ಯಕ್ರಮಗಳು ಜರುಗಲಿವೆ ಎಂದು ಪ್ರವಚನ ಕಮೀಟಿ ಅದ್ಯಕ್ಷ ಪ್ರಶಾಂತ ಗುಡದಪ್ಪನವರ ತಿಳಿಸಿದರು. 

ಪಟ್ಟಣದ ಶ್ರೀಮಠದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ದಿ.3ರಂದು ಜರುಗುವ ಕಾರ್ಯಕ್ರಮದಲ್ಲಿ ಹೂವಿನಹಡಗಲಿ ಶಾಖಾ ಗವಿಮಠದ ಡಾ.ಹಿರಿಯ ಶಾಂತವೀರ ಸ್ವಾಮಿಜಿ ಅವರು ನೇತೃತ್ವ ವಹಿಸುವರು, ಹೂವಿನ ಶಿಗ್ಲಿಯ ಶ್ರೀ ಚನ್ನವೀರ ಮಹಾಸ್ವಾಮಿಗಳು, ಶ್ರೀಮಠದ ಉತ್ತರಾಧಿಕಾರಿಗಳಾದ ಡಾ.ಮಲ್ಲಿಕಾರ್ಜುನ ಮಹಾಸ್ವಾಮಿಗಳು, ಲಿಂಗನಾಯಕನಹಳ್ಳಿಯ ಶ್ರೀ ಚನ್ನವೀರ ಸ್ವಾಮಿಜಿಗಳು ಸಾನಿದ್ಯವಹಿಸುವರು. 

ದಿ.22ರಂದು ಅಂತರಾಷ್ಟ್ರೀಯ ಜಾನಪದ ಸಾಹಿತಿಗಳಾದ ಜೀವನಸಾಬ ಬಿನ್ನಾಳ ಅವರಿಂದ ಜಾನಪದ ಸಾಹಿತ್ಯದಲ್ಲಿ ಶರಣರ ಪರಂಪರೆ ಎನ್ನುವಂತ ಉಪನ್ಯಾಸ ಜರುಗುವದು. ವೀರಯ್ಯ ಕಾಗನೂರಮಠ ಹಾಗೂ ಶ್ರೀಮತಿ ಅನ್ನಪೂರ್ಣಮ್ಮ ಹೂಗಾರ ಭಕ್ತಿ ಸೇವೆ ವಹಿಸುವರು. ಜ.ಅ ವಿದ್ಯಾ ಸಮಿತಿ ಅಂಗ ಸಂಸ್ಥೆಗಳ ವಿದ್ಯಾರ್ಥಿಗಳಿಂದ ವಿಶೇಷ ಮನರಂಜನೆ ಕಾರ್ಯಕ್ರಮಗಳು ಜರುಗುವವು ಎಂದು ಮಾಹಿತಿ ನೀಡಿದರು. 

ಈ ವೇಳೆ ಜ.ಅ.ಆಡಳಿತಾಧಿಕಾರಿ ಡಾ.ಬಿ.ಜಿ.ಜವಳಿ, ಪ್ರವಚನ ಕಮೀಟಿ ಉಪಾದ್ಯಕ್ಷ ರವೀಂದ್ರಗೌಡ ಪಾಟೀಲ, ಕಾರ್ಯದರ್ಶಿ ಕುಮಾರ ಬನ್ನಿಕೊಪ್ಪ, ಅಶೋಕ ಅಂಗಡಿ, ವೀರೇಶ ಗೋಡಿ, ಮಂಜುನಾಥ ಮುಧೋಳ ಇತರರು ಇದ್ದರು. 


ಸುದ್ದಿ ಓದಿ