ಸಿರುಗುಪ್ಪ

ಭಗವಾನ್ ಮಹಾವೀರರ ಜಯಂತಿ

ಭಗವಾನ್ ಮಹಾವೀರರ ಜಯಂತಿ

ಸಿರುಗುಪ್ಪ: ಧರ್ಮ ಸತ್ಯ ಅಹಿಂಸೆ ಬ್ರಹ್ಮಚಾರಿಯ ಅಪರಿಗ್ರಹ ತ್ಯಾಗ ಸಂಯಮ ಪ್ರೀತಿ ಮತ್ತು ಕರುಣೆ ನಮ್ರತೆ ಸದ್ಗುಣ ವನ್ನು ಕಾಣುತ್ತಲೆ ಇಡೀ ಜಗತ್ತಿಗೆ ಭಗವಾನ್ ಮಹಾ ವೀರರು ಎಂದು ಕುಂತು ನಾಥ ಜೈನ್ ಶ್ವೇತಾಂಬರ ದೇವಸ್ಥಾನ ಸಮಿತಿಯ ಅಧ್ಯಕ್ಷ ಬಿ ಕಿರಣ್ ಕುಮಾರ್ ಅವರು ಹೇಳಿದರು.

 ನಗರದ ಕುಂತುನಾಥ ಜೈನ್ ಶ್ವೇತಾಂಬರ ದೇವಸ್ಥಾನ ಆವರಣದಲ್ಲಿ ಭಗವಾನ್ ವರ್ಧಮಾನ ಮಹಾವೀರರ 2622ನೇ ಜಯಂತಿಯ  ಅಂಗವಾಗಿ ಅವರು ಮಾತನಾಡುತ್ತಾ  ಜೈನ್ ಧರ್ಮದ 24ನೇ ತೀರ್ಥಂಕರರಾದ ಮಹಾವೀರ ಅವರು ಅವರ ಜೀವನವು ತ್ಯಾಗ ಮತ್ತು ತಪಸ್ಸಿನಿಂದ ಕೂಡಿತ್ತು ಸೊಂಟವನ್ನು ಸಹ ಧರಿಸಿರಲಿಲ್ಲ ಹಿಂಸಾಚಾರ ಪ್ರಾಣಿಬಲಿ ಜಾತಿ ತಾರತಮ್ಯ ಸತ್ಯ ಅಹಿಂಸೆಯ ಜಗತ್ತಿಗೆ ಕಲಿಸಿದರು ಇಡೀ ಜಗತ್ತಿಗೆ ಅವರು ಉಪದೇಶ ಮಾಡಿದರು.

 ಅವರ ಆದರ್ಶ ಗುಣ ತತ್ವಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಂಡು ಪಾಲಿಸಬೇಕು ಎಂದರು ಜೈನ್ ದಿಗಂಬರ ಮತ್ತು ಶ್ವೇತಾಂಬರರು ಒಟ್ಟಾಗಿ ಈ ಹಬ್ಬ ಆಚರಿಸುತ್ತಾರೆ ಭಗವಾನ್ ಮಹಾವೀರರ ಆಶೀರ್ವಾದ ಸರ್ವರಿಗೂ  ಸಿಗಲೆಂದು ಅವರು ಆಶಿಸಿದರು ಸುಭಾಷ್, ಮನ್ಮಲ್, ಪ್ರದೀಪ್ ಕುಮಾರ್, ಕುಶಾಲ್ ಕುಮಾರ್, ಹೇಮಂತ್ ಕುಮಾರ್, ಸಂತೋಷ್, ಕಮಲೇಶ್, ಹರ್ಷದ್, ರಿಷದ್ , ಅಶೋಕ್ ಕುಮಾರ್, ನಗರಸಭಾ ಸದಸ್ಯ ವಿಕ್ರಂ, ಸಂಜಯ್ ಸಮುದಾಯದವರು ಉಪಸ್ಥಿತರಿದ್ದರು ಈ ಸಂದರ್ಭದಲ್ಲಿ ಸಾರ್ವಜನಿಕರಿಗೆ ಪ್ರಸಾದ ವಿತರಿಸಲಾಯಿತು ನಂತರ ನಗರದ ಸಕರ್ಾರಿ ಸಾರ್ವಜನಿಕ ಆಸ್ಪತ್ರೆ ಮೈದಾನದಲ್ಲಿ  ಸಾರ್ವಜನಿಕರಿಗೆ ಅನ್ನ ಸಂತರ್ಪಣೆ ಕಾರ್ಯಕ್ರಮ ಏರ್ಪಡಿಸಲಾಗಿತ್ತು 

ಸುದ್ದಿ ಓದಿ