ಜಿಲ್ಲಾಡಳಿತದಿಂದ ವಿವಿಧ ಮಹನೀಯರ ಜಯಂತಿ ಆಚರಣೆ
ಬಳ್ಳಾರಿ,ಆ.31: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರ ಪಾಲಿಕೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ಬ್ರಹ್ಮಶ್ರೀ ನಾರಾಯಣ ಗುರು ಜಯಂತಿಯನ್ನು ನಗರದ ಡಾ.ರಾಜ್ಕುಮಾರ್ ರಸ್ತೆಯ ಸಾಂಸ್ಕೃತಿಕ ಸಮುಚ್ಛಯ ಹೊಂಗಿರಣದಲ್ಲಿ ಗುರುವಾರ ಸರಳವಾಗಿ ಆಚರಿಸಲಾಯಿತು.
ಬಳ್ಳಾರಿ ನಗರ ಶಾಸಕ ನಾರಾ ಭರತ್ ರೆಡ್ಡಿ ಅವರು ಬ್ರಹ್ಮಶ್ರೀ ನಾರಾಯಣ ಗುರು ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ನಮನ ಸಲ್ಲಿಸಿ ಜಯಂತಿಯ ಶುಭಾಶಯ ತಿಳಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಬ್ರಹ್ಮಶ್ರೀ ನಾರಾಯಣ ಗುರುಗಳು ಪ್ರಾಚೀನ ಭಾರತದಲ್ಲಿ ಸಾಮಾಜಿಕ ಸುಧಾರಣೆಯಲ್ಲಿ ಹೆಚ್ಚು ಒತ್ತು ನೀಡಿದವರಾಗಿದ್ದರು ಎಂದು ಹೇಳಿದರು.
ಮಹಾನಗರ ಪಾಲಿಕೆ ಮೇಯರ್ ಡಿ.ತ್ರಿವೇಣಿ, ಅಪರ ಜಿಲ್ಲಾಧಿಕಾರಿ ಮೊಹಮ್ಮದ್ ಝುಬೇರಾ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಟಿ.ಹೊನ್ನುರ್ಪ ಸೇರಿದಂತೆ ಸಮಾಜದ ಮುಖಂಡರು ಹಾಗೂ ಕಚೇರಿಯ ಸಿಬ್ಬಂದಿ ಇದ್ದರು.
*ನುಲಿಯ ಚಂದಯ್ಯ ಜಯಂತಿ ಆಚರಣೆ:*
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರ ಪಾಲಿಕೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ನುಲಿಯ ಚಂದಯ್ಯ ಜಯಂತಿಯನ್ನು ನಗರದ ಡಾ.ರಾಜ್ಕುಮಾರ್ ರಸ್ತೆಯ ಸಾಂಸ್ಕೃತಿಕ ಸಮುಚ್ಛಯ ಹೊಂಗಿರಣದಲ್ಲಿ ಗುರುವಾರ ಸರಳವಾಗಿ ಆಚರಿಸಲಾಯಿತು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಟಿ.ಹೊನ್ನುರ್ಪ ಅವರು ನುಲಿಯ ಚಂದಯ್ಯ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಜಯಂತಿಯ ಶುಭಾಶಯ ತಿಳಿಸಿದರು. ಸಮಾಜದ ಮುಖಂಡರು ಹಾಗೂ ಕಚೇರಿಯ ಸಿಬ್ಬಂದಿ ಹಾಜರಿದ್ದರು.
--------
ಸೊಳ್ಳೆಗಳಿಂದ ಹರಡುವ ಕಾಯಿಲೆಗಳ ನಿಯಂತ್ರಣಕ್ಕೆ ಪ್ರತಿಯೊಬ್ಬರು ಜವಾಬ್ದಾರಿಯಿಂದ ಕಾರ್ಯನಿರ್ವಹಿಸಿ: ಡಿಹೆಚ್ಒ ಡಾ.ಯಲ್ಲಾ ರಮೇಶ್ ಬಾಬು
ಬಳ್ಳಾರಿ,ಆ.31: ಜೀವಕ್ಕೆ ಅಪಾಯ ಒದಗಿಸಬಹುದಾದ ಸೊಳ್ಳೆ ಕಚ್ಚುವಿಕೆಯಿಂದ ಬರುವ ಡೆಂಗ್ಯೂ, ಮಲೇರಿಯಾ ಸೇರಿದಂತೆ ಚಿಕಿನ್ಗುನ್ಯಾ, ಆನೆಕಾಲು, ಮೆದುಳು ಜ್ವರ ಮುಂತಾದವುಗಳನ್ನು ತಡೆಗಟ್ಟಲು ಸಾರ್ವಜನಿಕರಿಗೆ ನಿಂತ ನೀರಿನ ತಾಣಗಳ ಸೂಕ್ತ ನಿರ್ವಹಣೆ ಮತ್ತು ಪರಿಣಾಮಕಾರಿಯಾಗಿ ಕೈಗೊಳ್ಳಲು ಪ್ರತಿಯೊಬ್ಬರು ಮನಃ ಪೂರ್ವಕವಾಗಿ ಕಾರ್ಯನಿರ್ವಹಿಸಿ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಯಲ್ಲಾ ರಮೇಶ್ಬಾಬು ಅವರು ಸೂಚಿಸಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಂಯುಕ್ತಾಶ್ರಯದಲ್ಲಿ ಜಿಲ್ಲಾ ರೋಗವಾಹಕ ಆಶ್ರೀತ ರೋಗಗಳ ನಿಯಂತ್ರಣ ಘಟಕ ಇವರಿಂದ ಜಿಲ್ಲೆಯ ಆರೋಗ್ಯ ನೀರೀಕ್ಷಣಾಧಿಕಾರಿಗಳು ಮತ್ತು ಪ್ರಾಥಮಿಕ ಸುರಕ್ಷಾ ಅಧಿಕಾರಿಗಳಿಗೆ ಬುಧವಾರ ಹಮ್ಮಿಕೊಂಡಿದ್ದ ಒಂದು ದಿನದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಸಾಮಾನ್ಯವಾಗಿ ಮಳೆಗಾಲದ ಆರಂಭದಲ್ಲಿ ಕಂಡುಬರುತ್ತಿದ್ದ ಸೊಳ್ಳೆಗಳಿಂದ ಹರಡುವ ಕಾಯಿಲೆಗಳು ಪ್ರಸ್ತುತ ವರ್ಷ ಪೂರ್ತಿ ಕಂಡುಬರುತ್ತಿದ್ದು, ಇದು ಅತ್ಯಂತ ಅಪಾಯಕಾರಿ ಅಂಶವಾಗಿದೆ. ಈ ಹಿನ್ನಲೆಯಲ್ಲಿ ಸಾರ್ವಜನಿಕರು ತಮ್ಮ ನೀರು ಸಂಗ್ರಹಣೆಯ ವಿಧಾನಗಳ ನಿರ್ವಹಣೆಯನ್ನು ಜನತೆಗೆ ಅರ್ಥವಾಗುವ ರೀತಿಯಲ್ಲಿ ತಿಳಿಸುವ ಮೂಲಕ ಬದಲಾವಣೆ ತರಬೇಕಾಗಿದೆ ಎಂದು ತಿಳಿಸಿದರು.
ಪ್ರತಿ ಶನಿವಾರ ನೀರು ಸಂಗ್ರಹಗಳನ್ನು ಖಾಲಿ ಮಾಡಿಸುವ ಹಾಗೂ ಕನಿಷ್ಟ 2 ಗಂಟೆಗಳ ಒಣಗಿಸುವ ಪ್ರಕ್ರಿಯೆ ನಂತರ ನೀರು ತುಂಬಿಸಿ ಸರಿಯಾಗಿ ಮುಚ್ಚಳವನ್ನು ಮುಚ್ಚಿಸುವ ಕುರಿತು ತಿಳಿಸುವ ಜೊತೆಗೆ ಸೊಳ್ಳೆ ಉತ್ಪತ್ತಿ ತಾಣಗಳನ್ನು ನಿಯಂತ್ರಣ ಮಾಡುವ ಕಾರ್ಯ ಕೈಗೊಳ್ಳಬೇಕು ಎಂದರು.
ಕ್ಷೇತ್ರಮಟ್ಟದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಇಲಾಖೆಯ ಸಿಬ್ಬಂದಿ ವರ್ಗದವರು ಸೊಳ್ಳೆ ಮರಿಗಳನ್ನು (ಲಾರ್ವ) ಪ್ರಾತ್ಯಕ್ಷತೆಯನ್ನು ಕೈಗೊಳ್ಳುವ ಮೂಲಕ ಬಾಲಹುಳಗಳು ಎಂಬ ರೂಢಿ ಹೆಸರಿನಲ್ಲಿರುವ ಸೊಳ್ಳೆಯ ಮರಿಗಳನ್ನು ನಿಯಂತ್ರಣ ಮಾಡಲು ಸೂಕ್ರ ಕ್ರಿಯಾ ಯೋಜನೆ ರೂಪಿಸಿಕೊಳ್ಳಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಎನ್.ಬಸರೆಡ್ಡಿ, ಜಿಲ್ಲಾ ರೋಗವಾಹಕ ಆಶ್ರೀತ ರೋಗಗಳ ನಿಯಂತ್ರಣ ಅಧಿಕಾರಿ ಡಾ.ಅಬ್ದುಲ್ಲಾ, ಜಿಲ್ಲಾ ಕೀಟಶಾಸ್ತ್ರಜ್ಞೆ ನಂದಾಕಡಿ, ಎನ್.ವಿ.ಬಿ.ಡಿ.ಸಿ.ಪಿ ಸಲಹೆಗಾರರಾದ ಪ್ರತಾಪ್, ಹಿರಿಯ ಆರೋಗ್ಯ ನೀರೀಕ್ಷಣಾಧಿಕಾರಿ ವಿರುಪಾಕ್ಷಿ, ರವೀಂದ್ರ ಜಿನಗ ಸೇರಿದಂತೆ ಇತರೆ ಸಿಬ್ಬಂದಿಯವರು ಹಾಜರಿದ್ದರು.
--------
ಬಳ್ಳಾರಿ ಜಿಲ್ಲೆಯಲ್ಲಿ ಎಸ್ಸೆಸ್ಸೆಲ್ಸಿ ಫಲಿತಾಂಶ ಸುಧಾರಣೆಗೆ ವಿಶೇಷ ಒತ್ತು
10ನೇ ತರಗತಿ ಮಕ್ಕಳಿಗೆ ಸಹಾಯವಾಣಿ (ಫೋನ್-ಇನ್) ಕಾರ್ಯಕ್ರಮ
ಬಳ್ಳಾರಿ,ಆ.31: ಜಿಲ್ಲೆಯಲ್ಲಿ 2023-24ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ಪಾರದರ್ಶಕ ಪರೀಕ್ಷೆ/ನಕಲು ತಡೆಯುವ ಮೂಲಕ ಎಸ್ಸೆಸ್ಸೆಲ್ಸಿ ಫಲಿತಾಂಶ ಸುಧಾರಣೆಗೆ ಶಾಲಾ ಶಿಕ್ಷಣ ಇಲಾಖೆಯು ವಿಶೇಷ ಒತ್ತು ನೀಡಿದೆ. ಇದಕ್ಕಾಗಿ ವ್ಯಾಸಂಗ ಮಾಡುತ್ತಿರುವ 10ನೇ ತರಗತಿ ಮಕ್ಕಳಿಗೆ ಸಹಾಯವಾಣಿ (ಫೋನ್-ಇನ್) ಕಾರ್ಯಕ್ರಮ ಆರಂಭಿಸಲಾಗಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕಿ ಹನುಮಕ್ಕ ಅವರು ತಿಳಿಸಿದ್ದಾರೆ.
ವಿಷಯವಾರು ಕ್ಲಿಷ್ಟಕರವಾದ ಅಂಶಗಳ ಬಗ್ಗೆ ಇರುವ ಸಂದೇಹ, ಗೊಂದಲ ಹಾಗೂ ವಿಷಯದ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಲು ಸಹಾಯವಾಣಿ ಸ್ಥಾಪಿಸಲಾಗಿದೆ. ಸಹಾಯವಾಣಿ ಕೇಂದ್ರದಲ್ಲಿ ಪ್ರತಿ ವಿಷಯಕ್ಕೆ ಸಂಬಂಧಿಸಿದ ಸಂಪನ್ಮೂಲ ಶಿಕ್ಷಕರನ್ನು ನೇಮಿಸಲಾಗಿದೆ. ಸಹಾಯವಾಣಿಗೆ ಶಾಲಾ ವೇಳೆಯಲ್ಲಿ ಸಂಪರ್ಕಿಸಿದಲ್ಲಿ ವಿಷಯವಾರು ಶಿಕ್ಷಕರು ತಮ್ಮ ಸಂದೇಹಗಳನ್ನು ಬಗೆಹರಿಸಲಿದ್ದಾರೆ.
*ವಿಷಯವಾರು ಸಂಪನ್ಮೂಲ ಶಿಕ್ಷಕರು ಮತ್ತು ಅವರ ಮೊಬೈಲ್ ವಿವರ:*
ಇಂಗ್ಲಿಷ್ ವಿಷಯಕ್ಕೆ ಸಂಬಂಧಿಸಿದಂತೆ ಪ್ರತಿ ಸೋಮವಾರ ಶಾಲಾ ನಡೆಯುವ ವೇಳೆಯಲ್ಲಿ ಮಾಹಿತಿಗಾಗಿ ಬಳ್ಳಾರಿ ಬಾಪೂಜಿನಗರ ಸರ್ಕಾರಿ ಪ್ರೌಢಶಾಲೆಯ ಮಧುಸೂಧನ್ ಅವರ ಮೊ:8792134436, ಅಂದ್ರಾಳ್ ಸರ್ಕಾರಿ ಪ್ರೌಢಶಾಲೆಯ ವಿಜಯಭೂಷಣ ಜೋಶಿ ಅವರ ಮೊ:9844394840, ಬಳ್ಳಾರಿ ವಿಡಿಎಚ್ಎಲ್ ಬಿ.ಆರ್.ಮಹೇಶ ಅವರ ಮೊ:9448632895, ಮಿಲ್ಲರಪೇಟೆಯ ಸರ್ಕಾರಿ ಉರ್ದು ಪ್ರೌಢಶಾಲೆಯ ಅನಿತಾ ಮೊ:64364652124. ತಂಡದ ಮೇಲ್ವಿಚಾರಕರಾದ ಶಿಕ್ಷಣಾಧಿಕಾರಿ ಹಾಗೂ ಡಿ.ವೈ.ಪಿ.ಸಿ, ಎಸ್.ಎಸ್.ಕೆ ನೋಡಲ್ ಅಧಿಕಾರಿ ಇಂದ್ರಾಣಮ್ಮ ಮೊ.9740113925 ಇವರಿಗೆ ಸಂಪರ್ಕಿಸಬಹುದು.
ಗಣಿತ ವಿಷಯಕ್ಕೆ ಸಂಬಂಧಿಸಿದಂತೆ ಪ್ರತಿ ಮಂಗಳವಾರ ಶಾಲಾ ನಡೆಯುವ ವೇಳೆಯಲ್ಲಿ ಬಸಮ್ಮ ಅನುದಾನಿತ ಪ್ರೌಢಶಾಲೆಯ ಬಿ.ಎಂ.ನಾಗರಾಜಯ್ಯ ಮೊ:9986861964, ಡಿ.ಅಂತಾಪುರ ಸರ್ಕಾರಿ ಪ್ರೌಢಶಾಲೆಯ ಕೆ.ವಿ.ಆನಂದ ಮೊ:9886680134, ಹಿರಾಳ್ಕುಡಂ ಸರ್ಕಾರಿ ಉರ್ದು ಪ್ರೌಢಶಾಲೆಯ ಸೈಯದ್ ಇರ್ಫಾನ್ ಮೊ.9481047568, ಕುರುಗೋಡ ಬಾಲಕಿಯರ ಸರ್ಕಾರಿ ಪ್ರೌಢಶಾಲೆಯ ಅರುಣ್ ಮೊ.9844080610, ಕೊಳಗಲ್ ಸರ್ಕಾರಿ ಪ್ರೌಢಶಾಲೆಯ ಜಯರಾಜ್.ಕೆ.ಆರ್ ಮೊ.9845002181, ತಂಡದ ಮೇಲ್ವಿಚಾರಕ ಉಪನಿರ್ದೇಶಕರ ಕಚೇರಿಯ ಗಣಿತ ವಿಷಯ ಪರೀವೀಕ್ಷಕ ಎಂ.ಬಸವರಾಜ ಮೊ.7795353576 ಇವರಿಗೆ ಸಂಪರ್ಕಿಬಹುದು.
ಸಮಾಜ ವಿಜ್ಞಾನ ವಿಷಯಕ್ಕೆ ಸಂಬಂಧಿಸಿದಂತೆ ಪ್ರತಿ ಬುಧವಾರ ಎಸ್ಇಎಸ್ ಬಾಲಕೀಯರ ಪ್ರೌಢಶಾಲೆಯ ಕಲ್ಲಯ್ಯ ಹಿರೇಮಠ ಮೊ:9164516695, ಕುರುಗೋಡು ಸರ್ಕಾರಿ ಬಾಲಕೀಯರ ಪ್ರೌಢಶಾಲೆಯ ಶ್ರೀಕಾಂತ ಮೊ:9481436365, ಹಗರಿಫಾರಂ ಸರ್ಕಾರಿ ಪ್ರೌಢಶಾಲೆಯ ಹೆಚ್.ಈಶ್ವರ್ಪ ಮೊ:9449300605, ಜಾನೆಕುಂಟೆ ಸರ್ಕಾರಿ ಪ್ರೌಢಶಾಲೆಯ ರಾಜಶೇಖರ ಗೌಡ.ಹೆಚ್ ಮೊ.9481415847, ತೋರಣಗಲ್ಲು ಸರ್ಕಾರಿ ಪ್ರೌಢಶಾಲೆಯ ದೊಡ್ಡಬಸವ ಮೊ.9110228893, ಎಂ.ಸೂಗೂರು ಸರ್ಕಾರಿ ಪ್ರೌಢಶಾಲೆಯ ದೇವಪ್ಪ ಮೊ.998075610, ಮಿಲ್ಲರಪೇಟೆಯ ಸರ್ಕಾರಿ ಉರ್ದು ಪ್ರೌಢಶಾಲೆಯ ಜಮೇದಾರ್.ಆರ್.ಕೆ ಮೊ.9480993366 ತಂಡದ ಮೇಲ್ವಿಚಾರಕ ಉಪನಿರ್ದೇಶಕರ ಕಚೇರಿಯ ಸಮಾಜ ವಿಜ್ಞಾನ ವಿಷಯ ಪರೀವೀಕ್ಷಕ ಹೆಚ್.ವೀರೇಶಪ್ಪ ಮೊ.9945681455 ಗೆ ಸಂಪರ್ಕಿಸಬಹುದು.
ವಿಜ್ಞಾನ ವಿಷಯಕ್ಕೆ ಸಂಬಂಧಿಸಿದಂತೆ ಪ್ರತಿ ಗುರುವಾರ ಸಂಡೂರು ಛತ್ರಪತಿ ಶಿವಾಜಿ ವಿದ್ಯಾಮಂದಿರ ವಿಶ್ವನಾಥ.ಎಂ. ಮೊ. 8660768012, ಬಳ್ಳಾರಿಯ ಕಪಗಲ್ ರಸ್ತೆಯ ಪ್ರೌಢಶಾಲೆಯ ವಿಶ್ವನಾಥ ಮೊ:9591566856, ಹಗರಿಫಾರಂ ಸರ್ಕಾರಿ ಪ್ರೌಢಶಾಲೆಯ ಗಾದಿಲಿಂಗಪ್ಪ ಮೊ:9481435994, ಅನುದಾನಿತ ಉರ್ದು ಪ್ರೌಢಶಾಲೆಯ ವಾಯಿದಾ ಗಾಲಿಬ್ ಮೊ.9380565461, ದಮ್ಮೂರು ಸರ್ಕಾರಿ ಪ್ರೌಢಶಾಲೆಯ ಸುಮ ಮೊ.9663592157, ತಂಡದ ಮೇಲ್ವಿಚಾರಕ ಉಪನಿರ್ದೇಶಕರ ಕಚೇರಿಯ ಎಪಿಸಿ, ಎಸ್ಎಸ್ಕೆಯ ಹೆಚ್.ವಿ.ಶಿವಾಲಿಂಗಾರೆಡ್ಡಿ ಮೊ.9449448187 ಇವರಿಗೆ ಸಂಪರ್ಕಿಸಬಹುದು.
ಕನ್ನಡ ವಿಷಯಕ್ಕೆ ಸಂಬಂಧಿಸಿದಂತೆ ಪ್ರತಿ ಶುಕ್ರವಾರ ದೋಣಿಮಲೈ ಸರ್ಕಾರಿ ಪ್ರೌಢಶಾಲೆಯ ನಾಗರಾಜ ಮೊ.9902779033, ಎಂ.ಸೂಗುರು ಸರ್ಕಾರಿ ಪ್ರೌಢಶಾಲೆಯ ರವಿ.ಆರ್ ಮೊ.9880019171, ಕೋಳುರು ಸರ್ಕಾರಿ ಪ್ರೌಢಶಾಲೆಯ ಹುಲೆಪ್ಪ ಮೊ.9483480302, ಮಿಲ್ಲರಪೇಟೆ ಸರ್ಕಾರಿ ಉರ್ದು ಪ್ರೌಢಶಾಲೆಯ ಹನುಮಪ್ಪ ಮೊ.9008474366, ಬಳ್ಳಾರಿ ಕರ್ನಾಟಕ ಪಬ್ಲಿಕ್ ಶಾಲೆಯ ಹರಿಪ್ರಸಾದ್ ಮೊ.8722517436. ತಂಡದ ಮೇಲ್ವಿಚಾರಕ ಉಪನಿರ್ದೇಶಕರ ಕಚೇರಿಯ ಕನ್ನಡ ವಿಷಯದ ಪರೀವೀಕ್ಷಕ ಎ.ಕೆ.ಸತ್ಯನಾರಾಯಣ ಮೊ.9740738762 ಗೆ ಸಂಪರ್ಕಿಸಬಹುದು.
ಹಿಂದಿ ವಿಷಯಕ್ಕೆ ಸಂಬಂಧಿಸಿದಂತೆ ಪ್ರತಿ ಶನಿವಾರ ಕುಡಿತಿನಿ ಪ್ರೌಢಶಾಲೆಯ ಮೊಹ್ಮದ ಜಾಫರ್ ಸಾದಿಕ್ ಮೊ:9945721814, ರೇಡಿಯೋ ಪಾರ್ಕ ಸರ್ಕಾರಿ ಪ್ರೌಢಶಾಲೆಯ ಟಿ.ಲಕ್ಷ್ಮೀ ಮೊ:9480753806, ಬಂಡಿಹಟ್ಟಿ ಪ್ರೌಢಶಾಲೆಯ ರಾಮತುಳಸಿ ಮೊ:9880842333, ಬಳ್ಳಾರಿ ಎಸ್.ಆರ್.ಕಾಲೋನಿ ಸರಕಾರಿ ಪ್ರೌಢಶಾಲೆಯ ಮೆಹಬೂಬ್ ಬಾಷಾ ಮೊ:9739458747. ತಂಡದ ಮೇಲ್ವಿಚಾರಕ ಸರ್ಕಾರಿ ಪ್ರೌಢ ಶಾಲೆ ಸಿ.ಬಿ ಮುಖ್ಯಗುರುಗಳಾದ ಶಿವಕುಮಾರ ಅವರ ಮೊ.9916992857 ಗೆ ಸಂಪರ್ಕಿಸಬಹುದು.
ಮಾಹಿತಿಗಾಗಿ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರ ಕಚೇರಿಯ ದೂ.08392-268239 ಹಾಗೂ ಮೊ.9448999329 ಗೆ ಸಂಪರ್ಕಿಸಬಹುದು.
ವಿದ್ಯಾರ್ಥಿಗಳು ವಿಷಯಗಳ ಕುರಿತು ತಮಗಿರುವ ಸಂದೇಹಗಳ ಬಗ್ಗೆ ದೂರವಾಣಿ ಮೂಲಕ ಸಂಪರ್ಕಿಸಿ ಪರಿಹಾರ ಕಂಡುಕೊಳ್ಳಬೇಕು. ಹಾಗೂ ಎಸ್ಸೆಸ್ಸೆಲ್ಸಿ ಫಲಿತಾಂಶ ಉತ್ತಮವಾಗಿ ಬರಲು ಜಿಲ್ಲೆಯ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಪ್ರೌಢಶಾಲಾ ಮುಖ್ಯಶಿಕ್ಷಕರು, ಶಿಕ್ಷಕರುಗಳು ಸೇರಿದಂತೆ ಎಲ್ಲರು ಶ್ರಮಿಸಬೇಕು ಮತ್ತು ಸಹಕಾರವೂ ಅಗತ್ಯವಾಗಿದೆ ಎಂದು ಅವರು ತಿಳಿಸಿದ್ದಾರೆ.
------
ಗಾಯತ್ರಿಗೆಗೆ ಪಿಹೆಚ್ಡಿ ಪದವಿ ಪ್ರದಾನ
ಬಳ್ಳಾರಿ,ಆ.31: ಧಾರವಾಡದ ಮಹಿಳಾ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಅತಿಥಿ ಉಪನ್ಯಾಸಕಿ ಗಾಯತ್ರಿ ಚೆನ್ನವೀರಯ್ಯ ಕುಲಕರ್ಣಿ ಅವರಿಗೆ ಹಂಪಿ ಕನ್ನಡ ವಿಶ್ವವಿದ್ಯಾಲಯವು ಪಿಹೆಚ್ಡಿ ಪದವಿ ಪ್ರದಾನ ಮಾಡಿದೆ.
ಜೆಎಸ್ಎಸ್ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಡಾ.ಜೆ.ಎ ಹಡಗಲಿ ಅವರ ಮಾರ್ಗದರ್ಶನದಲ್ಲಿ ಗಾಯತ್ರಿ ಅವರು ಕನ್ನಡ ಸಾಹಿತ್ಯ ಅದ್ಯಯನ ವಿಭಾಗದಲ್ಲಿ "ಕನ್ನಡ ಚಲನಚಿತ್ರ ಗೀತೆಗಳಲ್ಲಿ ಮಹಿಳಾ ಪ್ರತಿನಿಧೀಕರಣ" ಎಂಬ ವಿಷಯದ ಕುರಿತು ಮಂಡಿಸಿದ ಮಹಾಪ್ರಬಂಧಕ್ಕೆ ಪಿಹೆಚ್ಡಿ ಪದವಿ ಪ್ರದಾನ ಮಾಡಲಾಗಿದೆ.
ಪ್ರಸ್ತುತ ಧಾರವಾಡದ ಸರಕಾರಿ ಮಹಿಳಾ ಪದವಿ ಕಾಲೇಜಿನಲ್ಲಿ ಅತಿಥಿ ಉಪನ್ಯಾಸಕಿಯಾಗಿರುವ ಗಾಯತ್ರಿ ಕುಲಕರ್ಣಿ ಅವರು ಮೂಲತಃ ವಿಜಯನಗರ ಜಿಲ್ಲೆ ಹೂವಿನಹಡಗಲಿ ತಾಲ್ಲೂಕಿನ ಮಾಗಳ ಗ್ರಾಮದವರಾಗಿದ್ದಾರೆ.