ಶಿವಶರಣ ಹಡಪದ ಅಪ್ಪಣ್ಣ ಜಯಂತ್ಸೋತ್ಸವ
ಲೋಕದರ್ಶನ ವರದಿ
ಕಂಪ್ಲಿ 24: ಪಟ್ಟಣದ ತಾಲೂಕು ಕಚೇರಿ ಮತ್ತು ಪುರಸಭೆ ಸೇರಿ ಸರ್ಕಾರಿ ಕಚೇರಿಗಳಲ್ಲಿ ಶನಿವಾರ ಶಿವಶರಣ ಹಡಪದ ಅಪ್ಪಣ್ಣ ಜಯಂತ್ಸೋತ್ಸವ ಜರುಗಿತು.
ಹಡಪದ ಅಪ್ಪಣ್ಣ ಸಮಾಜ ಸೇವಾ ಸಮಿತಿ ತಾಲೂಕು ಅಧ್ಯಕ್ಷ ಎಚ್.ಲಿಂಗೇಶ್ ಮಾತನಾಡಿ, ಹಡಪದ ಅಪ್ಪಣ್ಣ ಸಮಾಜದವರಿಗೆ ಪುರಸಭಾಡಳಿತ ಸಮುದಾಯ ಭವನಕ್ಕೆ ನಿವೇಶನ ನೀಡಿಮತ್ತು ಸಮಾಜದ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗೆ ಸೌಲಭ್ಯ ಒದಗಿಸುವಲ್ಲಿ ಪುರಸಭಾಡಳಿತ ಅಸಕ್ತಿತೋರಬೇಕು ಎಂದು ಒತ್ತಾಯಿಸಿದರು. ಪುರಸಭೆ ಅಧ್ಯಕ್ಷೆ ಶಾಂತಲಾ ವಿ.ವಿದ್ಯಾಧರ, ಸದಸ್ಯ ಎನ್.ರಾಮಾಂಜನೇಯಲು, ಹಡಪದ ಅಪ್ಪಣ್ಣ ಸಮಾಜ ಸೇವಾ ಸಮಿತಿ ತಾಲೂಕು ಪದಾಧಿಕಾರಿಗಳಾದ ಕಂದಕೂರು ಚಂದ್ರಶೇಖರ್, ಕುಕನೂರು ಅಶೋಕ್, ಎಚ್.ಚಂದ್ರಶೇಖರ್, ಕುಮಾರಸ್ವಾಮಿ, ಜಾಲಿಹಾಳ್ ಚಂದ್ರಶೇಖರ್, ಕಂದಕೂರು ಸಂಗಮೇಶ್, ಜಯಣ್ಣ, ಎಮ್ಮಿಗನೂರು ವೀರೇಶಪ್ಪ, ಉಮಾಪತಿ, ಪುರಸಭೆ ಮುಖ್ಯಾಧಿಕಾರಿ ಎನ್.ಶಿವಲಿಂಗಪ್ಪ ಮತ್ತು ಸಿಬ್ಬಂದಿ, ತಾಲೂಕು ಕಚೇರಿಯಲ್ಲಿ ಗ್ರೇಡ್ -2 ತಹಸೀಲ್ದಾರ್ ವೆಂಕಟೇಶ್ ಆಶ್ರಿತ್, ಆರ್ ಐ ಎ.ಗಣೇಶ್ ಸೇರಿ ಸಿಬ್ಬಂದಿಗಳಿದ್ದರು.