ಕೋವಿಡ್ ಮಾರ್ಗಸೂಚಿಗಳನ್ವಯ ಜಯಂತಿ ಆಚರಣೆ: ಮುನ್ನೊಳ್ಳಿ
ಶಿಗ್ಗಾವಿ 04: ಎಲ್ಲ ಸಮಾಜದ ಮುಖಂಡರ ಸಮ್ಮುಖದಲ್ಲಿ ಕೋವಿಡ್ ಮಾರ್ಗಸೂಚಿಗಳ ಅನುಸಾರವಾಗಿ ಬಾಬು ಜಗಜೀವನರಾಮ್ ಹಾಗೂ ಬಾಬ ಸಾಹೇಬ ಅಂಬೇಡ್ಕರರ ಜಯಂತಿಯನ್ನು ಆಚರಿಸಲಾಗುವದು ಎಂದು ತಹಶೀಲ್ದಾರ ಮಂಜುನಾಥ ಮುನ್ನೊಳ್ಳಿ ಹೇಳಿದರು.
ಶನಿವಾರ ತಹಶೀಲ್ದಾರ ಕಾರ್ಯಾಲಯದ ಸಭಾ ಭವನದಲ್ಲಿ ಹಮ್ಮಿಕೊಂಡ ಬಾಬು ಜಗಜೀವನರಾಮ್ ಹಾಗೂ ಬಾಬ ಸಾಹೇಬ ಅಂಬೇಡ್ಕರರ ಜಯಂತಿಯ ಪೂರ್ವ ಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಸರ್ಕಾರದ ಆದೇಶದ ಅನುಸಾರ ತಹಶೀಲ್ದಾರ ಕಾರ್ಯಾಲಯದ ಸಭಾಭವನದಲ್ಲಿ ಇದೇ ದಿ 5 ರಂದು ಬೆಳಗ್ಗೆ 10 ಗಂಟೆಗೆ ಬಾಬು ಜಗಜೀವನರಾವ್ ಅವರ ಜಯಂತಿಯನ್ನು ಹಾಗೂ 14 ರಂದು ಡಾ ಬಾಬಾ ಸಾಹೇಬ್ ಅಂಬೇಡ್ಕರರ ಜಯಂತಿಯನ್ನು ಆಚರಿಸಲಾಗುವದು ಅಂದು ಕೊವಿಡ್ ಎಲ್ಲ ನಿಯಮಗಳನ್ನು ಪಾಲಿಸಲು ಸಮಾಜದ ಭಾಂದವರು ಸಹಕರಿಸಬೇಕು ಮತ್ತು ಎಲ್ಲ ಸಮಾಜದ ಮುಖಂಡರು ಭಾಗವಹಿಸಲು ಮನವಿ ಮಾಡಿದರು.
ಪುರಸಭೆ ಅಧ್ಯಕ್ಷ ಶ್ರೀಕಾಂತ ಬುಳ್ಳಕ್ಕನವರ ಮಾತನಾಡಿ ಅಂಬೇಡ್ಕರ ಅವರ ಮೂರ್ತಿ ಸ್ಥಾಪನೆಗೆ ಈಗಾಗಲೇ ಪುರಸಭೆಯಿಂದ ಠರಾವು ಮಾಡಿ ಜಿಲ್ಲಾಧಿಕಾರಿಗಳಿಂದ ಅನುಮತಿ ಪಡೆಯಲಾಗಿದ್ದು ಸಮಾಜದ ಮುಖಂಡರು ಹಾಗೂ ಸಚಿವ ಬೊಮ್ಮಾಯಿವರು ಸೇರಿ ದಿನಾಂಕ ನಿಗದಿ ಮಾಡಬೇಕಿದೆ ಎಂಧರು.
ಭಾಜಪ ತಾಲೂಕಾ ಅಧ್ಯಕ್ಷ ಶಿವಾನಂದ ಮ್ಯಾಗೇರಿ ಮಾತನಾಡಿ ಒಗ್ಗಟ್ಟಿನಿಂದ ಅಚ್ಚುಕಟ್ಟಾಗಿ ಎಲ್ಲರೂ ಜವಾಬ್ದಾರಿಂದ ಜಯಂತಿಯನ್ನು ಆಚರಿಸೋಣ ಎಂದರು.
ನ್ಯಾಯವಾದಿ ಹನುಮಂತಪ್ಪ ಬಂಡಿವಡ್ಡರ ಮಾತನಾಡಿ ಸಂವಿಧಾನವನ್ನು ಪಾಲಿಸುವ ನ್ಯಾಯಾಲಯಗಳಲ್ಲಿ ಅಂಬೇಡ್ಕರ ಅವರ ಪೋಟೊ ಹಾಕದಿರುವದು ಖೇದಕರ ಸಂಗತಿಯಾಗಿದೆ, ಜಯಂತಿಯನ್ನು ಅದ್ದೂರಿಯಾಗಿ ಆಚರಿಸಲು ಅವಕಾಶ ನೀಡಬೇಕು ಎಂದರು.
ಮುಖಂಡ ಮಲ್ಲೇಶಪ್ಪ ಹರಿಜನ ಮಾತನಾಡಿ ಮೇರವಣಿಗೆಗೆ ಅವಕಾಶ ನೀಡಬೇಕು ಮತ್ತು ಅಧಿಕಾರಿಗಳು ನಿಷ್ಕಾಳಜಿ ತೊರದೆ ಎಲ್ಲರೂ ಸೇರಿ ಆಚರಿಸುಂತೆ ನೊಡಿಕೊಳ್ಳಬೇಕು ಎಂದರು. ಮುಖಂಡರಾದ ಕರೆಪ್ಪ ಕಟ್ಟಿಮನಿ, ಬಾಬಕ್ಕ ಬಳ್ಳಾರಿ, ಮಾತನಾಡಿದರು.
ಸಭೆಯಲ್ಲಿ ತಾಪಂ ಕಾರ್ಯನಿರ್ವಾಕ ಅಧಿಕಾರಿ ಪ್ರಶಾಂತ ತುರ್ಕಾಣಿ, ಸಮಾಜ ಕಲ್ಯಾಣ ಅಧಿಕಾರಿ ಸರಸ್ವತಿ ಗಜಕೋಶ, ಕ್ಷೇತ್ರ ಶಿಕ್ಷಣಾಧಿಕಾರಿ ಪಿ ಕೆ ಚಿಕ್ಕಮಠ, ಪುರಸಭೆ ಉಪಾಧ್ಯಕ್ಷ ಮಂಜುನಾಥ ಬ್ಯಾಹಟ್ಟಿ, ಬಂಕಾಪೂರ ಪುರಸಭೆ ಮುಖ್ಯಾಧಿಕಾರಿ ರೇಣುಕಾ ದೇಸಾಯಿ, ಮುಖಂಡರಾದ ಹನಮಂತಪ್ಪ ಮಾದರ, ಅಶೋಕ ಕಾಳೆ, ಸುರೇಶ ಹರಿಜನ, ಬಸವರಾಜ ಕಟ್ಟಿಮನಿ, ಯಲ್ಲಪ್ಪ ಮಾದರ, ನಿಲವ್ವ ಕಾಲವಾಡ ಸೇರಿದಂತೆ ಸಮಾಜದ ಮುಖಂಡರು, ಅಧಿಕಾರಿಗಳು ಇದ್ದರು.
ಚುನಾವಣಾ ಪ್ರಚಾರಗಳಿಗಿರದ ಕೋವಿಡ್ ಮಾರ್ಗಸೂಚಿ ಮಹಾನ್ ವ್ಯಕ್ತಿಗಳ ಜಯಂತಿಗಳಿಗೇಕೆ ?
ಈ ಮಹಾನ್ ವ್ಯಕ್ತಿಗಳ ಜಯಂತಿ ಗಮನಕ್ಕೆ ತೆಗೆದುಕೊಳ್ಳದೇ ತಹಶೀಲ್ದಾರರು ವಿಜೃಂಭಣೆಯಿಂದ ಜಯಂತಿ ಆಚರಿಸಲು ಅವಕಾಶ ನೀಡದಿರುವುದು ಎಷ್ಟು ಸರಿ ? ಎಂಬುದನ್ನು ಇಲ್ಲಿ ಪ್ರಶ್ನಿಸಲೇಕಾದ ವಿಷಯವಾಗಿದೆ, ಇಷ್ಟಕ್ಕೂ ಸಾವಿರಾರು ಜನರು ಸೇರಿ ಚುನಾವಣಾ ಪ್ರಚಾರ, ಧಾರ್ಮಿಕ ಕಾರ್ಯಗಳ ಜೊತೆಗೆ ವಿವಿಧ ಜಾತ್ರೆಗಳು ನಡೆಯುತ್ತಿದ್ದರೂ ಈ ಮಹಾನ್ ವ್ಯಕ್ತಿಗಳ ಜಯಂತಿಗಳಿಗೇಕೆ ಕೋವಿಡ್ ಮಾರ್ಗಸೂಚಿ ಕಾರಣ ಹೇಳಲಾಗುತ್ತಿದೆ ಎಂಬುದು ಮಾತ್ರ ತಿಳಿಯದಾಗಿದೆ.
ಹನಮಂತಪ್ಪ ಬಂಡಿವಡ್ಡರ
ನ್ಯಾಯವಾದಿ ಶಿಗ್ಗಾವಿ.