ಪುನೀತ್ ರಾಜಕುಮಾರ್ ಪುತ್ಥಳಿ ಅನಾವರಣಗೊಳಿಸಿದ ಜನಾರ್ಧನರೆಡ್ಡಿ
ಬಳ್ಳಾರಿ 27: ನಗರದಲ್ಲಿ ತಾಳೂರು ರಸ್ತೆಯ ಬಲ ಪಾರ್ಶ್ವದಲ್ಲಿನ ಕುರುವಳ್ಳಿ ಎನ್ಕ್ಲಪ್ ಉದ್ಯಾನವನದಲ್ಲಿ ನೂತನವಾಗಿ ನಿರ್ಮಿಸಿದ ವರನಟ ಡಾ. ರಾಜಕುಮಾರ್ ಅವರ ಕಿರಿಯ ಪುತ್ರ ಪುನೀತ್ ರಾಜಕುಮಾರ್ ಅವರ ಪುತ್ಥಳಿಯನ್ನು ಉದ್ಯಮಿ ಜಿ.ಜನಾರ್ಧನರೆಡ್ಡಿ ಅವರು ಅನಾವರಣಗೊಳಿಸಿದರು.
ಕುರುವಳ್ಳಿ ಅವರ ಸ್ಥಳದಲ್ಲಿ ಜಿಆರ್ ಇನ್ಯಾಸ್ಟಕ್ಟರ್ ಇವರು ಬೆಂಗಳೂರಿನ ಕುಶಲಕರ್ಮಿಗಳಿಂದ ನಿರ್ಮಾಣಗೊಂಡಿರುವ ಲಕ್ಷಾಂತರ ರೂ.ವೆಚ್ಚದ ನೈಜವಾದ ಪುನೀತ್ ಪುತ್ಥಳಿಯನ್ನು ರೆಡ್ಡಿ ಅನಾವರಣಗೊಳಿಸಿದರು.
ನಿನ್ನೆ ರಾತ್ರಿ ನಡೆದ ಈ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು ಕುರುವಳ್ಳಿ ಉದ್ಯಾವನ ತುಂಬಾ ಸುಂದರವಾಗಿದೆ. ನಾವು ಅಂದುಕೊಂಡ ರೀತಿಯಲ್ಲಿ ಬಳ್ಳಾರಿ ನಗರ ಅಭಿವೃದ್ಧಿಯಾಗುತ್ತಿದೆ. ಕಲಾ ಕ್ಷೇತ್ರಕ್ಕೆ ರಾಜಕುಮಾರ್ ಅವರ ಕೊಡುಗೆ ಅಪಾರವಾದುದು, ಅವರ ಪುತ್ರ್ರ ಪುನೀತ್ ರಾಜಕುಮಾರ್ ಕೂಡ ಕಲೆಯಲ್ಲಿ ಅದ್ಭುತವಾದ ಸಾಧನೆ ಮಾಡಿದ್ದಾರೆ. ನಮ್ಮ ಮಗ ಕೀರೀಟ ಪುನೀತ ರಾಜಕುಮಾರ್ ಅವರ ಬಳಿ ತರಬೇತಿ ಪಡೆದಿದ್ದು ನನಗೆ ಹೆಮ್ಮೆ ಎನಿಸುತ್ತಿದೆ. ನನ್ನ ಪುತ್ರ ಚಿತ್ರರಂಗಕ್ಕೆ ಬರಲು ಪುನೀತ್ ಅವರ ಪ್ರೇರಣೆ ಎಂದರು.
ನಾವು ಏನೇ ಮಾಡಿದರು ಜನರಿಗೆ ಒಳಿತಾಗಬೇಕು. ಈ ದಿಸೆಯಲ್ಲಿ ಪುನೀತ್ ರಾಜಕುಮಾರ್ ಜನರಿಗಾಗಿ ಶ್ರಮಿಸಿ ಜನಮಾನಸದಲ್ಲಿ ಬೇರೂರಿದ್ದಾರೆ. ಅವರಂತೆಯೇ ಆಂಧ್ರದ ಮುಖ್ಯಮಂತ್ರಿಯಾಗಿದ್ದ ವೈಎಸ್ ರಾಜಶೇಖರ್ ರೆಡ್ಡಿ ಅವರು ಕೂಡ ಜನಪ್ರಿಯ ಆಡಳಿತ ನೀಡುವ ಮೂಲಕ ಮನೆ ಮನೆಯ ಮಾತಾಗಿದ್ದರು. ಹೀಗಾಗಿ ಆಂಧ್ರ ತೆಲಂಗಾಣದಾದ್ಯಂತ ಇರುವ ಹಳ್ಳಿ ಮತ್ತು ಪಟ್ಟಣ ಪ್ರದೇಶಗಳಲ್ಲಿ ವೈಎಸ್ಆರ್ ಮತ್ಥಳಿ ನಿರ್ಮಾಣ ಮಾಡಿದ್ದಾರೆ. ನಾವೂ ಕೂಡ ಸಮಾಜದಲ್ಲಿ ಗುರುತಿಸಬೇಕಾದರೆ ನಿಸ್ವಾರ್ಥಭಾವದಿಂದ ಕೆಲಸ ಮಾಡಬೇಕೆಂದರು ಹೇಳಿದರು.
ನಗರ ಶಾಸಕರಾದ ಜಿ.ಸೋಮಶೇಖರ್ ರೆಡ್ಡಿ ಮಾತನಾಡಿ ಪುನೀತ್ ರಾಜಕುಮಾರ್ ಅವರು ಕೃಷಿಪರರಾಗಿದ್ದರು. ನಾನು ಕೆಎಂಎಫ್ ಅಧ್ಯಕ್ಷನಾಗಿದ್ದಾಗ ಪುನೀತ್ ರಾಜಕುಮಾರ್ ಅವರು ಜಾಹೀರಾತನ್ನು ಉಚಿತವಾಗಿ ನೀಡಿದ್ದರು. ಅವರ ಜಾಹೀರಾತು ಹಣವನ್ನು ರೈತರಿಗೆ ಸಮರ್ಿಸಿ ದೊಡ್ಡತನ ಮೆರೆದಿದ್ದರು. ಅವರ ಸರಳತೆ ಮತ್ತು ಸಹೃದಯತೆ ನಿಜಕ್ಕೂ ಎಲ್ಲರಿಗೂ ಮಾದರಿಯಾಗಿದೆ ಎಂದರು.
ಈ ಸಂದರ್ಭದಲ್ಲಿ ಪುನೀತ್ ರಾಜಕುಮಾರ್ ಪುಸ್ಥಳಿ ನಿರ್ಮಿಸಿದ್ದ ಶಿಲ್ಪಿಗಳನ್ನು ಸನ್ಮಾನಿಸಲಾಯಿತು. ಮಹಾನಗರ ಪಾಲಿಕೆ ಸದಸ್ಯರಾದ ಶ್ರೀನಿವಾಸ್ ಮೋತ್ಕರ್, ಗುಡಿಗಂಟಿ ಹನುಮಂತ, ಸಂಘಟಕರಾದ ಸುನಿಲ್ ಕುಮಾರ್, ನಾಗರಾಜ ಕುರುವಳ್ಳಿ, ಚಂದ್ರಶೇಖರ್ ಆಚಾರ್, ಪದ್ಮಾವತಿ ಸುಭಾಷ್ ಆಚಾರ್ಯ, ಮಂಜುನಾಥ್ ಇನ್ನಿತರರು ಇದ್ದರು.