ಮನರಂಜನೆ

ಅಪ್ಪು ಫ್ಯಾನ್ಸ್ ಕುತ್ತಿಗೆ ಮೇಲೆ ‘ಜೇಮ್ಸ್’ ಟ್ಯಾಟೂ: ಫೋಟೋ ವೈರಲ್…!

ಅಪ್ಪು ಫ್ಯಾನ್ಸ್ ಕುತ್ತಿಗೆ ಮೇಲೆ ‘ಜೇಮ್ಸ್’ ಟ್ಯಾಟೂ: ಫೋಟೋ ವೈರಲ್…!

ಬೆಂಗಳೂರು: ಮಾರ್ಚ್ 10: ಸ್ಯಾಂಡಲ್ ವುಡ್ ನಟ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ದೈಹಿಕವಾಗಿ ನಮ್ಮನ್ನೆಲ್ಲಾ ಅಗಲಿದ್ದರೂ ಅಪ್ಪು ಅಭಿಮಾನಿಗಳ ಮನಸ್ಸಿನಲ್ಲಿ ಎಂದಿಗೂ ಜೀವಂತ.

ಪುನೀತ್ ರಾಜ್‌ಕುಮಾರ್ ಅಭಿನಯದ ಕೊನೆಯ ಚಿತ್ರ ‘ಜೇಮ್ಸ್’ ಬಗ್ಗೆ ಸಿನಿಪ್ರಿಯರಿಗೆ ಸಖತ್ ನಿರೀಕ್ಷೆ ಇದೆ. ಇನ್ನು ಅಭಿಮಾನಿಗಳ ಪಾಲಿಗೆ ‘ಜೇಮ್ಸ್’ ಎಂದರೆ ಬರೀ ಸಿನಿಮಾ ಆಗಿ ಉಳಿದಿಲ್ಲ. ಬದಲಿಗೆ ಅವರ ಭಾವನೆಯಾಗಿ ಬದಲಾಗಿದೆ.

ಮಾರ್ಚ್ 12ರಂದು ಅಪ್ಪು ಜನ್ಮದಿನ. ಅಂದೇ ‘ಜೇಮ್ಸ್’ ಚಿತ್ರ ಬಿಡುಗಡೆಯಾಗುತ್ತಿದ್ದು, ಈ ಸಿನಿಮಾವನ್ನು ಅದ್ದೂರಿಯಾಗಿ ಬರಮಾಡಿಕೊಳ್ಳಲು ಪುನೀತ್ ಅಭಿಮಾನಿಗಳು ರಾಜ್ಯಾದ್ಯಂತ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.

ಪವರ್ ಸ್ಟಾರ್ ಅಭಿನಯದ ಕೊನೆಯ ಚಿತ್ರಕ್ಕೆ ಭರ್ಜರಿ ಓಪನಿಂಗ್ ಸಿಗಲಿದ್ದು, ಸಿನಿಮಾ ರಿಲೀಸ್ ಆಗುವುದಕ್ಕಿಂತ ಹತ್ತಾರು ದಿನಗಳಿಗೂ ಮುನ್ನವೇ ಚಿತ್ರಮಂದಿರಗಳ ಮುಂಭಾಗದಲ್ಲಿ ಪುನೀತ್ ರಾಜ್‌ಕುಮಾರ್ ಅವರ ಕಟೌಟ್‌ಗಳು ರಾರಾಜಿಸುತ್ತಿವೆ. ಅದರ ಜೊತೆಗೆ ಕೆಲ ಅಭಿಮಾನಿಗಳು ‘ಜೇಮ್ಸ್’ ಎಂದು ಟ್ಯಾಟೂ ಹಾಕಿಸಿಕೊಂಡು, ಅಪ್ಪು ಮೇಲಿರುವ ತಮ್ಮ ಅಭಿಮಾನವನ್ನು ವ್ಯಕ್ತಪಡಿಸಿದ್ದಾರೆ. ಈ ಫೋಟೋಗಳು ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗ್ತಿವೆ.

ಸುದ್ದಿ ಓದಿ