ಎಬಿಡಿ ಫೌಂಡೇಶನ್ದಿಂದ ಜಗದ್ಗುರುಗಳಿಗೆ ಸನ್ಮಾನ
ತಾಳಿಕೋಟಿ 12: ಲೋಕಕಲ್ಯಾಣ ಹಾಗೂ ಧರ್ಮ ಜಾಗೃತಿಗಾಗಿ ಯಡೂರದಿಂದ ಶ್ರೀಶೈಲದವರೆಗೆ ಪಾದಯಾತ್ರೆ ಕೈಗೊಂಡಿರುವ ಶ್ರೀಶೈಲ ಪೀಠದ ಜಗದ್ಗುರುಗಳಾದ ಡಾಽ ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯರನ್ನು ಎಬಿಡಿ ಫೌಂಡೇಶನ್ ವತಿಯಿಂದ ಗೌರವ ಸಮರೆ್ಣ ಸಲ್ಲಿಸಲಾಯಿತು.
ಪಾದಯಾತ್ರೆ ನಿಮಿತ್ಯ ಬ. ಸಾಲವಾಡಗಿ ಗ್ರಾಮದಲ್ಲಿ ಜರುಗಿದ ಧರ್ಮಸಭೆ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಲು ಆಗಮಿಸಿದ ಸಂದರ್ಭದಲ್ಲಿ ಶ್ರೀಗಳಿಗೆ ಈ ಗೌರವ ಸಮರ್ಪಣೆ ಮಾಡಲಾಯಿತು.
ಎಬಿಡಿ ಫೌಂಡೇಶನ್ನ ಸಂತೋಷಗೌಡ ದೊಡಮನಿ ಅವರಿಗೆ ಆಶೀರ್ವಾದ ನೀಡಿದ ಶ್ರೀಗಳು ಮುಖಂಡ ಆನಂದಗೌಡ ದೊಡಮನಿ ಅವರು ಧರ್ಮಸಭೆಯಲ್ಲಿ ಪಾಲ್ಗೊಂಡ ಭಕ್ತಾಧಿಗಳಿಗೆ ವಿಶೇಷ ಪ್ರಸಾದ ವ್ಯವಸ್ಥೆ ಮಾಡಿಸಿರುವುದನ್ನು ಶ್ಲಾಘಿಸಿ ಅವರು ಎಬಿಡಿ ಫೌಂಡೇಶನ್ ಮೂಲಕ ನಡೆಸುತ್ತಿರುವ ಸಮಾಜ ಸೇವಾ ಕಾರ್ಯಗಳು ಹೀಗೆಯೇ ನಿರಂತರ ನಡೆಯುತ್ತಿರಲೆಂದು ಹಾರೈಸಿದರು.
ಈ ಸಮಯದಲ್ಲಿ ಗುಂಡಕನಾಳದ ಪ.ಪೂ. ಗುರುಲಿಂಗಯ್ಯ ಮಹಾಸ್ವಾಮಿಗಳು, ಕೊಡೇಕಲ್ಲ ದುರದುಂಡೇಶ್ವರ ಮಠದ ಪ.ಪೂ.ಶಿವಕುಮಾರ ಮಹಾಸ್ವಾಮಿಗಳು ಹಾಗೂ ಎಬಿಡಿ ಫೌಂಡೇಶನ್ದ ಎಲ್ಲ ಪಧಾಧಿಕಾರಿಗಳು ಇದ್ದರು.