ಚಿಕ್ಕೋಡಿ

ಜೆಪಿಲ್ ಕ್ರಿಕೆಟ್ ಪಂದ್ಯಾವಳಿ: ಬಹುಮಾನ ವಿತರಣೆ

ಜೆಪಿಲ್ ಕ್ರಿಕೆಟ್ ಪಂದ್ಯಾವಳಿ: ಬಹುಮಾನ ವಿತರಣೆ

ಚಿಕ್ಕೋಡಿ 19: ನಿಪ್ಪಾಣಿ ತಾಲೂಕಿನ ಬೆನಾಡಿ ಮತ್ತು ಕೋಡ್ನಿ ಗ್ರಾಮದಲ್ಲಿ ಬಸವಜ್ಯೋತಿ ಯೂಥ ಫೌಂಡೇಶನ ವತಿಯಿಂದ ಆಯೋಜಿಸಲಾದ ಜೊಲ್ಲೆ ಪ್ರೀಮಿಯರ ಲೀಗ ಕ್ರೀಕೆಟ ಪಂದ್ಯಾವಳಿಯಲ್ಲಿ ವಿಜೇತರಾದ ತಂಡಗಳಿಗೆ ಬಸವಜ್ಯೋತಿ ಯೂಥ ಫೌಂಡೇಶನ ಅಧ್ಯಕ್ಷ ಬಸವಪ್ರಸಾದ ಜೊಲ್ಲೆ ಯವರು ವಿತರಣೆ ಮಾಡಿದರು.

ಪಂದ್ಯಾವಳಿಯಲ್ಲಿ ಪ್ರಥಮ ಬಹುಮಾನವನ್ನು ಕಿಂಗ್ಸ 11 ಬೆನಾಡಿ ತಂಡಕ್ಕೆ 25,000 ಮತ್ತು ಟ್ರೋಫಿ, ಎರಡನೇಯ ಬಹುಮಾನ ಸನರೈಸರ್ಸ ಬೆನಾಡಿ ತಂಡಕ್ಕೆ 15,000 ಮತ್ತು ಟ್ರೋಪಿ, ಮೂರನೇ ಬಹುಮಾನ ಬೆನಾಡಿ ಸೂಪರ ಕಿಂಗ್ಸ ತಂಡಕ್ಕೆ 5,000 ಮತ್ತು ಟ್ರೋಪಿ ಹಾಗೂ ಕೋಡ್ನಿ ಗ್ರಾಮದಲ್ಲಿ ಪ್ರಥಮ ಬಹುಮಾನವನ್ನು ಎಸ್.ಕೆ ಸ್ಪೋರ್ಟ್ಸ ತಂಡಕ್ಕೆ 25,000 ಮತ್ತು ಟ್ರೋಪಿ, ಎರಡನೇಯ ಬಹುಮಾನ ಎಸ್.ಬಿ. ಸ್ಪೋರ್ಟ್ಸ ತಂಡಕ್ಕೆ 15,000 ಮತ್ತು ಟ್ರೋಪಿ, ಮೂರನೇ ಬಹುಮಾನ ಯಂಗ ಸ್ಟಾರ ತಂಡಕ್ಕೆ ಟ್ರೋಪಿಯನ್ನು ತನ್ನದಾಗಿಸಿಕೊಂಡವು.

ಬಸವಪ್ರಸಾದ ಜೊಲ್ಲೆ ಮಾತನಾಡಿ ಜೊಲ್ಲೆ ಪ್ರೀಮಿಯರ ಲೀಗ ಈಗಾಗಲೇ ಅನೇಕ ತಂಡಗಳು ಭಾಗವಹಿಸಿವೆ. ಈ ಹಾಫಪೀಚ್ ಕ್ರೀಕೆಟ ಟೂರ್ನಿ ಇನ್ನು 1 ತಿಂಗಳು ಮಟ್ಟಿಗೆ ತಾಲೂಕಿನ ವಿವಿಧೆಡೆ ನಡೆಯಲಿವೆ. ಕ್ರಿಡೆಗಳಲ್ಲಿ ತೊಡಗಿಕೊಳ್ಳುವುದರಿಂದ ಆಟಗಾರರಲ್ಲಿ ಸ್ಪರ್ಧಾತ್ಮಕ ಸ್ಪೂರ್ತಿ ಹಾಗೂ ನಾಯಕತ್ವದ ಗುಣ ಬೆಳೆಯಲು ಸಾಧ್ಯ. ಸೋಲೆ ಗೆಲುವಿನ ಸೋಪಾನ ಎಂದು ಸ್ಪರ್ಧಾಳುಗಳು ಗುರಿ ಸಾಧನೆಯತ್ತ ಮುನ್ನುಗ್ಗಬೇಕು ಎಂದರು.

ಬಿಜೆಪಿ ಗ್ರಾಮಿಣ ಅಧ್ಯಕ್ಷ ಪವನ ಪಾಟೀಲ, ರಮೇಶ ಪಾಟೀಲ, ರಾವಸಾಹೇಬ ಜನವಾಡೆ, ಪಾಂಡು ಪಾಟೀಲ, ಬಾಳು ಜಾನಕರ, ಅರುಣ ಜಾವೇದ, ರಾಜು ದಿವಟೆ, ಅನಂತ ಕೇಸ್ತೆ ಆಟಗಾರರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

ಸುದ್ದಿ ಓದಿ