ರಾಷ್ಟ್ರೀಯ

4ಜಿ ಡೌನ್‌ಲೋಡ್‌ ವೇಗದಲ್ಲಿ ಜಿಯೋಗೆ ಮತ್ತೊಮ್ಮೆ ಮೊದಲನೇ ಸ್ಥಾನ

4ಜಿ ಡೌನ್‌ಲೋಡ್‌ ವೇಗದಲ್ಲಿ ಜಿಯೋಗೆ ಮತ್ತೊಮ್ಮೆ ಮೊದಲನೇ ಸ್ಥಾನ

ನವದೆಹಲಿ, ಡಿಸೆಂಬರ್ 17 : ರಿಲಯನ್ಸ್ ಜಿಯೋ ಸೆಕೆಂಡಿಗೆ 20.8 ಮೆಗಾಬಿಟ್ (ಎಮ್‌ ಬಿಪಿಎಸ್) ಡೌನ್‌ಲೋಡ್ ವೇಗದ ಸೇವೆಯನ್ನು ನೀಡುವ ಮೂಲಕ 4ಜಿ ಡೌನ್‌ಲೋಡ್‌ ವೇಗದ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದುಕೊಂಡಿದೆ. ಜಿಯೋ ತನ್ನ ಹತ್ತಿರದ ಪ್ರತಿಸ್ಪರ್ಧಿ ವೊಡಾಫೋನ್ ಗಿಂತಲೂ ಡಬಲ್ ಡೌನ್‌ಲೋಡ್ ವೇಗವನ್ನು ಹೊಂದಿದೆ. ವೊಡಾಫೋನ್ ಮತ್ತು ಐಡಿಯಾ ಸೆಲ್ಯುಲಾರ್ ತಮ್ಮ ಮೊಬೈಲ್ ವ್ಯವಹಾರವನ್ನು ವೊಡಾಫೋನ್ ಐಡಿಯಾ ಲಿಮಿಟೆಡ್ ಆಗಿ ವಿಲೀನಗೊಳಿಸಿದರೂ, ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಆಫ್ ಇಂಡಿಯಾ (ಟ್ರಾಯ್) ಇನ್ನೂ ಎರಡೂ ಘಟಕಗಳ ಪ್ರತ್ಯೇಕ ವೇಗ ಡೇಟಾವನ್ನು ಬಿಡುಗಡೆ ಮಾಡುತ್ತಿದೆ.

ಡಿಸೆಂಬರ್ 10 ರಂದು ಟ್ರಾಯ್‌ ಬಿಡುಗಡೆಗೊಳಿಸಿದ ಮಾಹಿತಿಯ ಪ್ರಕಾರ  ನವೆಂಬರ್‌ನಲ್ಲಿ  ವೊಡಾಫೋನ್ 9.8 ಎಮ್‌ ಬಿಪಿಎಸ್ ಡೌನ್‌ ಲೋಡ್ ವೇಗವನ್ನುದಾಖಲಿಸಿದೆ. ಐಡಿಯಾ ಮತ್ತು ಭಾರ್ತಿ ಏರ್‌ಟೆಲ್ ಕ್ರಮವಾಗಿ 8.8 ಎಮ್‌ ಬಿಪಿಎಸ್ ಮತ್ತು 8 ಎಮ್‌ ಬಿಪಿಎಸ್ ಡೌನ್‌ ಲೋಡ್ ವೇಗವನ್ನು ಹೊಂದಿದೆ ಎನ್ನಲಾಗಿದೆ.ಅಪ್‌ ಲೋಡ್ ವಿಭಾಗದಲ್ಲಿ ವೊಡಾಫೋನ್ 6.5 ಎಮ್‌ಬಿಪಿಎಸ್ ವೇಗದೊಂದಿಗೆ ಅಗ್ರಸ್ಥಾನದಲ್ಲಿದೆ. ಐಡಿಯಾ ನಂತರ 5.8 ಎಮ್‌ ಬಿಪಿಎಸ್, ಏರ್‌ ಟೆಲ್ 4 ಎಮ್‌ ಬಿಪಿಎಸ್ ಮತ್ತು ಜಿಯೋ 3.7 ಎಮ್‌ ಬಿಪಿಎಸ್ ಅಪ್‌ ಲೋಡ್ ವೇಗವನ್ನು ಹೊಂದಿದೆ. ನವೆಂಬರ್‌ನಲ್ಲಿ 6.5 ಎಮ್‌ ಬಿಪಿಎಸ್  ಅಪ್‌ ಲೋಡ್  ವೇಗದ ಸೇವೆಯನ್ನು ನೀಡಿದ ವೊಡಾಫೋನ್ ಈ ವಿಭಾಗದಲ್ಲಿ ಇತರರಿಗಿಂತ ಮುಂದಿದೆ ಎಂದು ಟೆಲಿಕಾಂ ನಿಯಂತ್ರಕ ಟ್ರಾಯ್ ತನ್ನ ವರದಿಯಲ್ಲಿ ತಿಳಿಸಿದೆ.

 ಡೌನ್‌ ಲೋಡ್ ವೇಗವು ಗ್ರಾಹಕರಿಗೆ ವಿಡಿಯೋ ನೋಡಲು, ಆನ್‌ ಲೈನ್ ಗೇಮ್ ಆಡಲು ಮತ್ತು ವಿಡಿಯೋ ಮತ್ತು ಆಡಿಯೋ ಗಳನ್ನು ಡೌನ್‌ಲೋಡ್‌ ಮಾಡಲು ಸಹಾಯ ಮಾಡುತ್ತದೆ. ಅಪ್‌ ಲೋಡ್ ವೇಗವು ಚಿತ್ರಗಳು, ವಿಡಿಯೋ ಇತ್ಯಾದಿಗಳನ್ನು ಕಳುಹಿಸಲು ಅಥವಾ ಹಂಚಿಕೊಳ್ಳಲು ಸಹಾಯ ಮಾಡುತ್ತದೆ. ನೈಜ ಸಮಯದ ಆಧಾರದ ಮೇಲೆ ತನ್ನ ಮೈಸ್ಪೀಡ್ ಅಪ್ಲಿಕೇಶನ್‌ನ ಸಹಾಯದಿಂದ ಭಾರತದಾದ್ಯಂತ ಸಂಗ್ರಹಿಸುವ ಡೇಟಾದ ಆಧಾರದ ಮೇಲೆ ಸರಾಸರಿ ವೇಗವನ್ನು ಟ್ರಾಯ್ ಲೆಕ್ಕಾಚಾರ ಮಾಡುತ್ತದೆ ಎಂದು ಪ್ರಕಟಣೆ ತಿಳಿಸಿದೆ.

ಸುದ್ದಿ ಓದಿ