ಹಗರಿಬೊಮ್ಮನಹಳ್ಳಿ

ಜೆಸ್ಕಾಂ ಪ್ರಭಾರಿ ಸೆಕ್ಷನ್ ಆಫಿಸರ್ ಲೋಕಾಯುಕ್ತ ಬಲೆಗೆ

ಜೆಸ್ಕಾಂ ಪ್ರಭಾರಿ ಸೆಕ್ಷನ್ ಆಫಿಸರ್ ಲೋಕಾಯುಕ್ತ ಬಲೆಗೆ

ಹಗರಿಬೊಮ್ಮನಹಳ್ಳಿ.ಅ.28 : ಪಟ್ಟಣದ ಜೆಸ್ಕಾಂ ಇಲಾಖೆಯ ಪ್ರಭಾರಿ ಸೆಕ್ಷನ್ ಆಫಿಸರ್ ಹೆಚ್.ಪಕ್ಕೀರಪ್ಪ  ಶುಕ್ರವಾರ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.

ತಾಲೂಕಿನ ಬಂಡಿಹಳ್ಳಿ ಗ್ರಾಮದ ದಾದಾಪೀರ್ ಎಂಬುವವರು ಕಳೆದ 15 ದಿನಗಳ ಹಿಂದೆ ತಮ್ಮ ಹೊಲದಲ್ಲಿ ಟಿಸಿ ಸುಟ್ಟು ಹೋಗಿದೆ ಬದಲಾವಣೆ ಮಾಡುವಂತೆ ಅಜರ್ಿ ನೀಡಿದ್ದು ಇದಕ್ಕೆ ಇಲ್ಲಿನ ಸೆಕ್ಷನ್ ಆಫಿಸರ್ 15ಸಾವಿರ ರೂಗಳಿಗೆ ಬೇಡಿಕೆ ಇಟ್ಟಿದ್ದು, ಕೊನೆಯದಾಗಿ 6ಸಾವಿರ ರೂಗಳನ್ನು ನೀಡುವಂತೆ ತಿಳಿಸಿದ್ದಾರೆ. ಮೊದಲಿಗೆ 2ಸಾವಿರ ರೂಗಳನ್ನು ನೀಡಿದ್ದು ಉಳಿದ 4ಸಾವಿರ ರೂಗಳನ್ನು ನೀಡಲು ಒಪ್ಪದೇ ಲೋಕಾಯುಕ್ತ ಕಛೇರಿಗೆ ದೂರು ನೀಡಿದ್ದು ಟ್ರ್ಯಾಪ್ನಲ್ಲಿ ಹಣ ಪಡೆದಿದ್ದು ಖಚಿತವಾಗಿದ್ದು, ಎಸ್ಪಿ ಪುರುಷೋತ್ತಮ  ಪಿ.ಎ ಅವರ ನೇತೃತ್ವದಲ್ಲಿ ದಾಳಿ ನಡೆಸಿ ಪ್ರಭಾರಿ ಸೆಕ್ಷನ್ ಆಫಿಸರ್ರನ್ನು ವಶಕ್ಕೆ ಪಡೆಯಲಾಗಿದೆ ಎಂದು ಡಿಎಸ್ಪಿ ಅಯ್ಯನ ಗೌಡ ಪಾಟೀಲ್ ತಿಳಿಸಿದ್ದಾರೆ.

ದಾಳಿ ವೇಳೆ ಲೋಕಾಯುಕ್ತ ಪೋಲೀಸ್ ಇನ್ಸ್ಪೆಕ್ಟರ್ ರಾಜೇಶ್ ಲಮಾಣಿ, ಸುರೇಶ್ ಬಾಬು ಪವಾರ್, ಹೋಸಪೇಟೆ ಬಳ್ಳಾರಿ ಲೋಕಾಯುಕ್ತ ಸಿಬ್ಬಂದಿಗಳಾದ ಅಯುಬ್, ಗೋವಿಂದರಾಜ್, ಶರತ್ಬಾಬು, ರೇಣುಕಪ್ಪ, ಹನುಮಂತಪ್ಪ ಇದ್ದರು.

 

ಸುದ್ದಿ ಓದಿ