ಜೆಡಿಎಸ್ ಜನಪರ ಕಾರ್ಯಗಳಿಂದಲೇ ಗೆಲುವು ಸಾಧಿಸಲಿದೆ : ಎನ್ ಎಂ ನಬಿ
ಹರಿಬೊಮ್ಮನಹಳ್ಳಿ.ಫೆ.16 : ಜೆಡಿಎಸ್ ಪಕ್ಷವು ನೀಡಿದ ಜನಪರ ಯೋಜನೆಗಳಿಂದ ಪಕ್ಷಕ್ಕೆ ರಾಜ್ಯದ ಜನತೆ ಗೆಲುವು ಸಾಧಿಸಲಿಕ್ಕೆ ಕೈ ಜೋಡಿಸಲಿದ್ದರೆ ಎಂದು ಜೆಡಿಎಸ್ ಪಕ್ಷದ ರಾಜ್ಯ ಕಾರ್ಯಾಧ್ಯಕ್ಷ ಮಾಜಿ ಸಚಿವ ಎನ್ಎಂ.ನಬಿ ವಿಶ್ವಾಸ ವ್ಯಕ್ತಪಡಿಸಿದರು.
ಪಟ್ಟಣದ ಗಾಳೆಮ್ಮ ದೇವಸ್ಥಾದಿಂದ ಜೆಡಿಎಸ್ ಪಕ್ಷದ ಪರ ಮಾಡುತ್ತಿರುವ ಕಾಲ್ನಡಿಗೆ ಪ್ರಚಾರ ಜಾಥಾಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. 18 ತಿಂಗಳ ಅಧಿಕಾರ ನಡೆಸಿದ ಸಂದರ್ಭದಲ್ಲಿ ಕುಮಾಸ್ವಾಮಿಯವರ ಮನೆಗೆ ಯಡಿಯೂರ್ಪನವರೇ ಬಂದು ಉಪ ಮುಖ್ಯಮಂತ್ರಿಯನ್ನಾಗಿ ಮಾಡಿದರೆ ಸಾಕು ಎಂದಿದ್ದರು. ತದನಂತರದಲ್ಲಿ ಅವರ ವಿರುದ್ದವೇ ತಿರುಗಿ ಬಿದ್ದರು ಎಂದು ಯಡಿಯೂರ್ಪನವರನ್ನು ಟಕಿಸಿದರು. ಇದು ಯಾರ ಬಲದಿಂದಲ್ಲ ದೇವರ ಕೃಪೆ ಎಂದರು, ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ಸಾಲ ಮನ್ನಾ, ಗ್ರಾಮ ವಾಸ್ತವ್ಯ ಮಕ್ಕಳಿಗೆ ಸೈಕಲ್ ವಿತರಣೆಯಂತಹ ಅನೇಕ ಜನಪರ ಯೋಜನೆಗಳನ್ನು ವಿರೋಧಿಗಳು ತಮಾಷೆ ಮಾಡಿದ್ದರು. ಆದರೂ ಅದಕ್ಕೆ ತಲೆಕೆಡಿಸಿಕೊಳ್ಳದೇ ಜನ ಮೆಚ್ಚುವಂತಹ ಆಡಳಿತ ನೀಡಿದರು, ಅವರು ನೀಡಿದ ಆಡಳಿತವನ್ನು ಜನರು ಮರೆತಿಲ್ಲ 2023 ರಲ್ಲಿ ಮತ್ತೆ ಜೆಡಿಎಸ್ ಅಧಿಕಾರಕ್ಕೆ ತಂದೇ ತರುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಹಬೊಹಳ್ಳಿ ಕ್ಷೇತ್ರಕ್ಕೆ ನಿವೃತ್ತ ಆರ್ಟಿಓ. ಪರಮೇಶ್ವರ್ಪನವರೇ ಅಧಿಕೃತ ಅಭ್ಯರ್ಥಿಯಾಗಲಿದ್ದಾರೆ ಇಷ್ಟರಲ್ಲಿಯೇ ಪಟ್ಟಿ ಹೊರಬರಲಿದೆ ಅವರಿಗೆ ಕ್ಷೇತ್ರದ ಜನ ಆಶೀರ್ವಾದ ಮಾಡಿ ಶಾಸಕರನ್ನಾಗಿ ಮಾಡಬೇಕು ಎಂದು ವಿನಂತಿಸಿದರು.
ಟಿಕೆಟ್ ಆಕಾಂಕ್ಷಿ ಎಲ್ ಪರಮೇಶ್ವರ್ಪ ಮಾತನಾಡಿ ನಾನು ಪಕ್ಷೇತರ ಅಭ್ಯರ್ಥಿಯಾಗಿ ನಿಂತಾಗ ನನಗೆ 17 ಸಾವಿರಕ್ಕೂ ಹೆಚ್ಚು ಮತ ನೀಡಿದ್ದೀರಿ. ಕೆಲವರು ಮಾಡಿದ ಮೋಸದಿಂದಾಗಿ ನನಗೆ ಅನ್ಯಾಯ ಆಯಿತು, ಈಗ ನಾನು ಜೆಡಿಎಸ್ ಪಕ್ಷದ ಅಧಿಕೃತ ಅಭ್ಯರ್ಥಿಯಾಗಲು ಶ್ರಮಿಸುತ್ತಿರುವ ಕಾರ್ಯಾಧ್ಯಕ್ಷ ಹಾಗು ಮಾಜಿ ಸಚಿವ ಎಂಎನ್.ನಬಿಯವರು, ಕ್ಷೇತ್ರದ ಜೆಡಿಎಸ್ ಮುಖಂಡರುಗಳು ಹಾಗೂ ಕಾರ್ಯಕರ್ತರಿಗೂ ಅಭಿನಂದಿಸುತ್ತೇನೆ. ಮುಂಬರುವ ದಿನಗಳಲ್ಲಿ ನನ್ನ ಬೆಂಬಲವಾಗಿ ನಿಂತು ಚುನಾವಣೆಯಲ್ಲಿ ನನಗೆ ಸಹಕರಿಸಿ ಹಗರಿಬೊಮ್ಮನಹಳ್ಳಿ ಕ್ಷೇತ್ರವನ್ನು ಸರ್ವಾಂಗೀಣ ಅಭಿವೃದ್ದಿಯತ್ತ ಕೊಂಡೊಯ್ಯುದಾಗಿ ತಿಳಿಸಿದರು.
ಈ ಸಂಧರ್ಭದಲ್ಲಿ ಜೆಡಿಎಸ್ ಕ್ಷೇತ್ರಾಧ್ಯಕ್ಷ ವೈ ಮಲ್ಲಿಕಾರ್ಜುನ, ಪಕ್ಷದ ರಾಜ್ಯ ವಕ್ತಾರರಾದ ನೂರ್ ಅಹಮ್ಮದ್, ಜಿಲಾಧ್ಯಕ್ಷ ಕೆ.ಕೊಟ್ರೇಶ, ಕೊಟ್ಟೂರು ಕಾರ್ಯಕಾರಿ ಮಂಡಳಿ ಸದಸ್ಯ ಹೆಚ್.ಎಂ.ಕೊಟ್ರಯ್ಯ, ಕೊಟ್ಟೂರು ಬ್ಲಾಕ್ ಅಧ್ಯಕ್ಷ ಅಂಬಳಿ ಸೋಮಣ್ಣ, ಮರಿಯಮ್ಮನಹಳ್ಳಿ ಬ್ಲಾಕ್ ಅಧ್ಯಕ್ಷ ಮುಕುಂದ, ಹಬೊಹಳ್ಳಿ ನಗರ ಘಟಕಾಧ್ಯಕ್ಷ ಡಿಶ್ ಪಾಂಡುರಂಗ ನಾಯ್ಕ, ಹಿಂದುಳಿದ ಘಟಕದ ಕೊಲ್ಕಾರ್ ಕುಮಾರಸ್ವಾಮಿ, ಎಸ್ಟಿ ಘಟಕದ ಪಕೀರ್ಪ, ಎಸ್ಸಿ ಘಟಕದ ಪಿ.ಎಚ್.ಎಸ್.ಪರಮೇಶ, ಅಲ್ಪಸಂಖ್ಯಾತ ಘಟಕದ ಜಾಕಿರ್, ಮಹಮ್ಮದ್ ಇಸ್ಮಾಯಿಲ್, ಹುಸೇನ್ ಭಾಷ, ಚೆನ್ನಬಸಪ್ಪ ಸೇರಿದಂತೆ ಜೆಡಿಎಸ್ ಪಕ್ಷದ ಈ ಕ್ಷೇತ್ರದ ಅಭ್ಯರ್ಥಿ ಎಲ್.ಪರಮೇಶ್ವರ ಅಭಿಮಾನಿ ಬಳಗ ಮತ್ತು ಜೆಡಿಎಸ್ ಮುಖಂಡರು, ಕಾರ್ಯಕರ್ತರು ಭಾಗವಹಿಸಿದ್ದರು.