30ನೇ ವಾರ್ಡಿನಲ್ಲಿ ಜೆಡಿಎಸ್ ಅಭ್ಯರ್ಥಿ ದೊಡ್ಡ ತಿಪ್ಪಯ್ಯ ಬಿರುಸಿನ ಪ್ರಚಾರ
ಬಳ್ಳಾರಿ 20: ಮಹಾನಗರ ಪಾಲಿಕೆಯ ಚುನಾವಣೆಯು ಇದೇ ಏಪ್ರಿಲ್ 27ರಂದು ನಡೆಯಲಿದ್ದು, ಜಾತ್ಯತೀತ ಜನತಾದಳ ಪಕ್ಷದ ಅಭ್ಯರ್ಥಿಯಾದ ಬಿ.ಎಂ.ದೊಡ್ಡತಿಪ್ಪಯ್ಯ ಅವರು ಬಿರುಸಿನ ಚುನಾವಣಾ ಪ್ರಚಾರ ನಡೆಸಿದರು. ರಾಜ್ಯದಲ್ಲಿ ಜೆಡಿಎಸ್ ಪಕ್ಷವು ದಿನ ದಲಿತರ, ಹಿಂದುಳಿದ ಮತ್ತು ಅಲ್ಪಸಂಖ್ಯಾತರಿಗೆ ಅನೇಕ ಕಾರ್ಯಕ್ರಮಗಳನ್ನು ನೀಡಿದ್ದು, ಜನಪವಾಗಿರುವ ಜೆಡಿಎಸ್ ಪಕ್ಷಕ್ಕೆ ಮತನೀಡಬೇಕೆಂದು ಅಭ್ಯರ್ಥಿ ಬಿ.ಎಂ.ದೊಡ್ಡತಿಪ್ಪಯ್ಯ ಅವರು ಮತದಾರರಲ್ಲಿ ಮನೆ ಮನೆಗೆ ತೆರಳಿ ಮನವಿ ಮಾಡಿಕೊಂಡರು. ರಾಮನಗರ, ವಟ್ಟಪ್ಪಗೇರಿ, ಮೋರ್ಗಲ್ಲಿ, ಆಜಾದ್ ನಗರ ಪ್ರದೇಶಗಳಲ್ಲಿ ತೆರಳಿ ತಮ್ಮನ್ನು ಗೆಲ್ಲಿಸಿದಲ್ಲಿ 30ನೇ ವಾರ್ಡ್ ಪ್ರದೇಶಕ್ಕೆ ಅಗತ್ಯವಿರುವ ಮೂಲಭೂತ ಸೌಕರ್ಯ, ಕುಡಿಯುವ ನೀರು ಸೇರಿದಂತೆ ಪಾಲಿಕೆಯ ವ್ಯಾಪ್ತಿಯಿಂದ ಬರುವ ಯೋಜನೆಗಳನ್ನು ವಾರ್ಡ್ಗೆ ತಲುಪಿಸಲು ಪ್ರಯತ್ನಿಸುತ್ತೇನೆ ಎಂದು ಭರವಸೆ ನೀಡಿದರು. ಈ ಚುನಾವಣಾ ಪ್ರಚಾರದಲ್ಲಿ ಜೆಡಿಎಸ್ ಪಕ್ಷದ ರಾಜ್ಯ ಉಪಾಧ್ಯಕ್ಷ ಮುನ್ನಾಭಾಯಿ, ಜೆಡಿಎಸ್ ಪಕ್ಷದ ಯುವ ಮುಖಂಡ ವಿಜಯಕುಮಾರ್, ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಘಟಕದ ಮಹೇಶ್ ಕುರುವಳ್ಳಿ, ಪ್ರಧಾನ ಕಾರ್ಯದರ್ಶಿ ಜಿ.ವಿಶ್ವನಾಥ್, ಜೆಡಿಎಸ್ ಪರಿಶಿಷ್ಟ ಜಾತಿ ಘಟಕದ ಜಿಲ್ಲಾ ಅಧ್ಯಕ್ಷ ಕೊರ್ಲಗುಂದಿ ಪಂಪಾಪತಿ, ಆಲಂಬಾಷ ಮುಂತಾದವರು ಭಾಗವಹಿಸಿದ್ದರು.