ಹಗರಿಬೊಮ್ಮನಹಳ್ಳಿ

ಜೆಡಿಎಸ್ ಅಭ್ಯರ್ಥಿ ಪರಮೇಶ್ವರ ನಾಮಪತ್ರ ಸಲ್ಲಿಕೆ

ಜೆಡಿಎಸ್ ಅಭ್ಯರ್ಥಿ ಪರಮೇಶ್ವರ ನಾಮಪತ್ರ ಸಲ್ಲಿಕೆ

ಲೋಕದರ್ಶನ ವರದಿ 

ಹಗರಿಬೊಮ್ಮನಹಳ್ಳಿ 18: ಜೆಡಿಎಸ್ ಪಕ್ಷದ ಅಧಿಕೃತ ಅಭ್ಯರ್ಥಿ ಎಲ್‌. ಪರಮೇಶ್ವರ ಅವರು ಜೆಡಿಎಸ್ ಪಕ್ಷದ ಬಿ ಫಾರಂನೊಂದಿಗೆ ಇಂದು ಅಧಿಕೃತವಾಗಿ ಚುನಾವಣಾಧಿಕಾರಿ ತೇಜ್ ಆನಂದ ರೆಡ್ಡಿ ಅವರಿಗೆ ನಾಮಪತ್ರ ಸಲ್ಲಿಸಿದರು. 

   ಜೆಡಿಎಸ್ ಪಕ್ಷದ ವರಿಷ್ಠರ ತೀರ್ಮಾನಕ್ಕೆ ಬಧ್ಧವಾಗಿದ್ದು ಅವರ ಆದೇಶದಂತೆ ನಾನು ಇಂದು ನಾಮಪತ್ರ ಸಲ್ಲಿಸಿದ್ದೆನೆ,  ಬುಧವಾರ  ರಂದು ಬೆಳಿಗ್ಗೆ 11 ರಿಂದ 11.59 ಒಳಗಾಗಿ ಮತ್ತೊಂದು ಬಾರಿ ನಾಮಪತ್ರ ಸಲ್ಲಿಸುವೆ ಜೆಡಿಎಸ್ ಪಕ್ಷದ ಪದಾಧಿಕಾರಿಗಳು, ನಿಷ್ಠಾವಂತ ಕಾರ್ಯಕರ್ತರು ನಾಮಪತ್ರ ಸಲ್ಲಿಕೆ ವೇಳೆ ಎಲ್ಲರೂ ಈಶ್ವರ ದೇವಸ್ಥಾನದ ಬಳಿ ಆಗಮಿಸಿ ಬಸವೇಶ್ವರ ಪುತ್ಥಳಿವರೆಗೆ ಕಾಲ್ನಡಿಯಲ್ಲಿ ತೆರಳಿ ನಾಮಪತ್ರ ಸಲ್ಲಿಸಲಾಗುವುದು ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಾಲೂಕಾಧ್ಯಕ್ಷ ವೈ.ಮಲ್ಲಿಕಾರ್ಜುನ ತಿಳಿಸಿದ್ದಾರೆ. 


ಸುದ್ದಿ ಓದಿ