‘ಪಾರದರ್ಶಕತೆಯಿಂದ ಅಧ್ಯಯನ ಮಾಡಿ ಸರಕಾರಕ್ಕೆ ಒಪ್ಪಿಸಲಾಗುವುದು’
ಲೋಕದರ್ಶನ ವರದಿ
ಹಗರಿಬೊಮ್ಮನಹಳ್ಳಿ 12: ಸರ್ಕಾರದ ಆದೇಶದಂತೆ ಹಿಂದುಳಿದ ವರ್ಗಗಳ ಅಧ್ಯಯನವನ್ನು ಪಾರದರ್ಶಕತಯಿಂದ ಮಾಡಿ ಸರಕಾರಕ್ಕೆ ಒಪ್ಪಿಸಲಾಗುವುದು ಎಂದು ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗಡೆ ಹೇಳಿದರು.
ತಾಲೂಕಿನ ಕಿತ್ನೂರು ಗ್ರಾಮಕ್ಕೆ ಆಯೋಗದ ತಂಡ ಭೇಟಿ ನೀಡಿದ್ದು ನಡುವಿನ ತಂಬ್ರಹಳ್ಳಿ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಗ್ರಾಮಸ್ಥರು ತಾವು ನೀಡಿದ ಮನವಿಯಲ್ಲಿ ತಮ್ಮ ಪ್ರಸ್ತುತ ಸ್ಥಿತಿಗತಿಯ ಬಗ್ಗೆ ಹೇಳಿಕೊಂಡಿದ್ದಾರೆ. ಪ್ರಮುಖವಾಗಿ ಶೈಕ್ಷಣಿಕ, ಸಾಮಾಜಿಕವಾಗಿ ಸಮಾಜದ ಸ್ಥಿತಿಗತಿಗಳನ್ನು ಅಧ್ಯಯನ ಮಾಡುವ ಮಾನದಂಡವಾಗಿದೆ,ಇತರೆ ಸಮಾಜ ಸೇರಿದಂತೆ ಪಂಚಮಸಾಲಿ ಸಮಾಜವನ್ನು ಸಮೀಕ್ಷೆ ಮಾಡಲಾಗುತ್ತಿದೆ ಎಂದರು.
ಕಿತ್ನೂರು ಗ್ರಾಮದ ಪಂಚಮಸಾಲಿ ಸಮಾಜದ ಮುಖಂಡರು ಮಾತನಾಡಿ ಸಮಾಜದ ಜನತೆ ಕೂಲಿ, ಕಟ್ಟಡ ಕಾರ್ಮಿಕ ಕೆಲಸ, ಹೈನುಗಾರಿಕೆ,ಕೃಷಿ ಜೀವನ ಅವಲಂಬಿತರಾಗಿ ಜೀವನ ನಡೆಸುತ್ತಿದ್ದೆವೆ, ಕೂಲಿ ಕೆಲಸ ಅರಸಿ ಸಮಾಜದ ಅನೇಕ ಕುಟುಂಬಗಳು ವಲಸೆ ಹೋಗುತ್ತವೆ, ಪಂಚಮಸಾಲಿ ಸಮಾಜ ಆರ್ಥಿಕವಾಗಿ ಅತ್ಯಂತ ಹಿಂದುಳಿದ ಸಮಾಜವಾಗಿದೆ.ವಿವಿಧ ಸೌಲಭ್ಯಗಳಿಂದ ವಂಚಿತರಾಗಿದ್ದೇವೆ. ಸಮಾಜಕ್ಕೆ 2ಎ ಮೀಸಲಾತಿ ನೀಡಿ, ಶೇ50ರಷ್ಟು ವಿದ್ಯಾವಂತರು ಸರಕಾರಿ ಉದ್ಯೋಗ ಪಡೆಯುವಂತೆ ಸರಕಾರ ಮುಂದಾಗಬೇಕಿದೆ ಎಂದರು.
ಹಿಂದುಳಿದ ವರ್ಗಗಳ ಶಾಶ್ವತ ಆಯೋಗ ತಂಡದ ಸದಸ್ಯರಾದ ಕಲ್ಯಾಣ ಕುಮಾರ, ಟಿ.ಎಸ್.ರಾಜಶೇಖರ, ಕೆ.ಟಿ.ಸುವರ್ಣ, ಶಾರದಾನಾಯ್ಕ, ಪಂಚಮಸಾಲಿ ಸಮಾಜದ ಮುಖಂಡರಾದ ಅಕ್ಕಿ ತೋಟೇಶ್, ಬಾವಿ ಬೆಟ್ಟಪ್ಪ, ಭದ್ರವಾಡಿ ಚಂದ್ರಶೇಖರ, ಅಕ್ಕಿ ಶಿವಕುಮಾರ, ಜೆ.ಬಿ.ಶರಣಪ್ಪ, ಪಟ್ಟಣಶೆಟ್ಟಿ ಸುರೇಶ, ಬಸವರಾಜ ಗೊಂಡಬಾಳ, ಚಂದ್ರಶೇಖರ ಪಾಟೀಲ್, ಗೌರಜ್ಜನವರ ಬಸವರಾಜಪ್ಪ, ಮಂಜುನಾಥಗೌಡ, ಮೋರಿಗೇರಿ ವಿಶ್ವನಾಥ, ಪೋಟೋ ವೀರೇಶ್, ವೈ.ಮಲ್ಲಿಕಾರ್ಜುನ, ಶಿವರುದ್ರಗೌಡ, ಮಂಗಳಾ ಬಸವರಾಜ್, ಗ್ರಾ.ಪಂ.ಸದಸ್ಯರಾದ ಮೈಲಾರ ಶಿವಕುಮಾರ, ಬಸಲಿಂಗನಗೌಡ, ಆನೇಕಲ್ ದೊಡ್ಡಬಸಪ್ಪ, ಬಸಮ್ಮ, ಗೌರಜ್ಜನವರ ಗೀರೀಶ್, ಸೊಬಟಿ ಹರೀಶ್, ಬಾಳಿಕಾಯಿ ಚಿದಾನಂದಪ್ಪ, ಮಂಜುನಾಥ ಪಾಟೀಲ್, ಅಕ್ಕಿ ಕೊಟ್ರುಬಸಪ್ಪ, ಆನೇಕಲ್ ಶಾಂತಪ್ಪ ಇತರರಿದ್ದರು.