ಭಾರತೀಯ ಸಂಸ್ಕೃತಿ ಉಳಿಸಿ ಬೆಳೆಸುವ ಜವಾಬ್ದಾರಿ ನಮ್ಮದ್ದು :ಎಂ ಬಿ ಪಾಟೀಲ
It is our responsibility to preserve and develop Indian culture: M.B. Patil
ಇಂಡಿ 30: ವಿಜಯಪುರ ನಗರದ ಬಸವೇಶ್ವರ ನಗರ, ಹಾಗೂ ಶಾರದಾ ಬಡಾವಣೆಯಲ್ಲಿ ನಡೆಯುವ ಶ್ರೀ ಅನ್ನಪೂರ್ಣೇಶ್ವರಿ ದೇವಸ್ಥಾನ ಸೇವಾ ಸಮಿತಿ ಅಡಿಯಲ್ಲಿ ನಡೆಯುವ ನಾಡದೇವಿ ಉತ್ಸವ ಕಾರ್ಯಕ್ರಮಕ್ಕೆ ಕರ್ನಾಟಕ ರಾಜ್ಯ ಸರಕಾರದ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲಭೂತ ಸೌಕರ್ಯ ಹಾಗೂ ವಿಜಯಪುರ ಜಿಲ್ಲೆಯ ಉಸ್ತುವಾರಿ ಸಚಿವರಾದ ಸನ್ಮಾನ್ಯ ಎಮ್. ಬಿ. ಪಾಟೀಲ ಅವರು ಆಗಮಿಸಿ ಮಾತೆ ದುರ್ಗಾ ಪರಮೇಶ್ವರಿಯ ಆಶೀರ್ವಾದ ಪಡೆದು, ಜಾನಪದ ಜಾತ್ರೆಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಭಾರತೀಯ ಸಂಸ್ಕೃತಿ ಉಳಿಸಿ ಬೆಳೆಸುವ ಜವಾಬ್ದಾರಿ ಪ್ರತಿಯೊಬ್ಬ ಭಾರತೀಯ ನಾಗರೀಕನ ಕರ್ತವ್ಯವೆಂದು ಹೇಳಿದರು, ದಿವ್ಯ ಸಾನಿಧ್ಯ ವಹಿಸಿರುವ ಮನಗೂಳಿ ಹಿರೇಮಠದ ಅಭಿನವ ಸಂಗನಬಸವ ಶಿವಾಚಾರ್ಯ ಮಹಾಸ್ವಾಮಿಗಳು ಮುಂದೊಂದು ದಿನ ಈ ದೇಶಕ್ಕೆ ಅನ್ನ ನೀಡುವ ರೈತನ ಮಕ್ಕಳಿಗೆ ಹುಡಿಕಿ ಕನ್ಯಾ ಕೊಡುವ ಸಂದರ್ಭ ಬರಲಿದೆ.
ಹೀಗಾಗಿ ರೈತ ಹೀರೊ ಆಗುವ ಸಂದರ್ಭ ಒದಗಿ ಬರಲಿದೆ ಎಂದು ಮಾರ್ಮಿಕವಾಗಿ ಆಶೀರ್ವಾಚನ ನೀಡಿದರು, ಈ ಸಂದರ್ಭದಲ್ಲಿ, ತಿಕೋಟಾ ತಾಲೂಕು ಗ್ಯಾರಂಟಿ ಯೋಜನಾ ಸಮಿತಿಯ ಸದಸ್ಯರಾದ ಗೌರಿಶಂಕರ ಹಿರೇಮಠ (ಹೊನವಾಡ), ಹಿರಿಯರಾದ ಶ್ರೀ ಚಿದಾನಂದಯ್ಯ ಹಿರೇಮಠ, ಜಿಲ್ಲಾ ಬಂಜಾರ ಸಮಿತಿಯ ಅಧ್ಯಕ್ಷರಾದ ರಾಜು ಜಾಧವ ಹಾಗೂ ದೇವಸ್ಥಾನ ಸಮಿತಿಯ ಅಧ್ಯಕ್ಷರಾದ ಗಂಗಾಧರ ನಿರ್ವಾಣಶೆಟ್ಟಿ, ಗೌರವಧ್ಯಕ್ಷರಾದ ಒಂಪ್ರಕಾಶ ಗಿರಾಗಾಂವಕರ, ಉಪಾಧ್ಯಕ್ಷರಾದ ವೀರನಗೌಡ ಪಾಟೀಲ, ಗೌರವ ಕಾರ್ಯದರ್ಶಿಗಳಾದ ಬಿ. ಎಸ್. ಅಗಸಬಾಳ, ಕಾರ್ಯದರ್ಶಿಗಳಾದ ಸದಾನಂದ ಹಿರೇಮಠ, ಖಜಾಂಚಿಗಳಾದ ಶ್ರೀ ಈರಣ್ಣ ಕೋರಿ, ಹಾಗೂ ಗಂಗಾಧರ ಬಾಗೇವಾಡಿ, ನಾರಾಯಣ ತೆಳಗಡೆ, ಮುತ್ತು ಗುತ್ಯಾಳ, ಬಸವರಾಜ ಅನಂತಪುರ, ಬಸನಗೌಡ ಬಿರಾದಾರ, ಬಸವರಾಜ ಯಲಿಗಾರ್, ಚಂದ್ರಶೇಖರ ಸಿಂಧೂರ, ಗಂಗಯ್ಯ ಚಿನಕಾಳಿಮಠ, ಸಂತೋಷ್ ಮೆಂಡೆಗಾರ್, ಶಶಿಧರ್ ನಾಗಶೆಟ್ಟಿ, ಸಾಹೇಬಗೌಡ ಬಿರಾದಾರ, ಶಿವಲಿಂಗ ಹಂಗನಳ್ಳಿ,ನೀಲಕಂಠ ಸಾಯಗಾಂವ, ಶಿವಾನಂದ ಕೊಂಡಗುಳಿ, ಈರಣ್ಣ ಅಮರಣ್ಣವರ, ಜಯಸಿಂಗ ಹಜೇರಿ, ಮಲ್ಲಿಕಾರ್ಜುನ ಕಪಾಳೆ, ಹಾಗೂ ಸಪ್ತ ಬಡಾವಣೆಯ ನಾಗರಿಕರು, ತಾಯಂದಿರರು ಉಸ್ಥಿತರಿದ್ದರು.
ಪುನರ್ ಅಭಿವೃದ್ಧಿಗೊಂಡ ಚೆನ್ನೈ ಪಾರ್ಕ್ ಅಮೃತ್ ರೈಲು ನಿಲ್ದಾಣವನ್ನು ಜುಲೈ 17ರಂದು ಉದ್ಘಾಟಿಸಲಿರುವ ಪ್ರಧಾನಿ ಮೋದಿ
ಅನಾಮಧೇಯ ಶವ ಪತ್ತೆ: ಮಹಿಳೆ ಕೊಲೆ ಪ್ರಕರಣ ಭೇದಿಸಿದ ಸಂಕೇಶ್ವರ ಪೊಲೀಸರು : ಆರೋಪಿ ಬಂಧನ
ಶಿವಕುಮಾರ್–ಸಿದ್ದರಾಮಯ್ಯ ಚರ್ಚೆ; ಕರ್ನಾಟಕ ಸಂಪುಟ ವಿಸ್ತರಣೆ ಕುರಿತ ಊಹಾಪೋಹಗಳಿಗೆ ಮತ್ತಷ್ಟು ಬಲ
ಶ್ರೀವಾರಿ ದರ್ಶನ, ವಸತಿ ಹಾಗೂ ಸೇವೆಗಳ ಬುಕ್ಕಿಂಗ್ಗೆ ಅಧಿಕೃತ ಟಿಟಿಡಿ ವೆಬ್ಸೈಟ್ನ್ನೇ ಬಳಸುವಂತೆ ಭಕ್ತರಿಗೆ ಟಿಟಿಡಿ ಮನವಿ
ಗಿಲ್ ಗಾಯದ ಆತಂಕದ ನಡುವೆ ಭಾರತಕ್ಕೆ ಏಕದಿನ ಸರಣಿ ಗೆಲ್ಲುವ ಅವಕಾಶ
ಜಿಎಸ್ಟಿ ಇಳಿಕೆ, ಸುಲಭ ಹಣಕಾಸು ನೆರವಿನಿಂದ ಆಟೋ ಉದ್ಯಮದ ಪ್ರಮುಖ ವಿಭಾಗಗಳಲ್ಲಿ ದಾಖಲೆಯ ಮೊದಲ ತ್ರೈಮಾಸಿಕ ಮಾರಾಟ 