ಸರ್ಕಾರ ಹೋರಾಟದ ಚಡಿ ಬೀಸಿದಾಗ ಮಾತ್ರ ಸೌಲಭ್ಯ ಹಾಗೂ ಬೇಡಿಕೆ ಪಡೆದುಕೊಳ್ಳಲು ಸಾಧ್ಯ. ಹೆಚ್.ಜಿ.ಉಮೇಶ
ಲೋಕದರ್ಶನ ವರದಿ
ಕಂಪ್ಲಿ 25 : ರಾಜ್ಯವನ್ನಾಳುತ್ತಿರುವ ಸರ್ಕಾರಕ್ಕೆ ಕಾರ್ಮಿಕರ ಸಂಕಷ್ಟ ಗೊತ್ತಾಗುತ್ತಿಲ್ಲ. ಇದರಿಂದ ಕಾರ್ಮಿಕರ ಬದುಕು ದುಸ್ತರವಾಗಿದೆ ಎಂದು ಕರ್ನಾಟಕ ರಾಜ್ಯ ಕಟ್ಟಡ ಕಟ್ಟುವ ಮತ್ತು ಕಲ್ಲುಒಡೆಯುವ ಕ್ವಾರಿ ಕಾರ್ಮಿಕರ ಫೆಡರೇಶನ್ ರಾಜ್ಯಾಧ್ಯಕ್ಷ ಹೆಚ್.ಜಿ.ಉಮೇಶ ಹೇಳಿದರು. ಪಟ್ಟಣದಲ್ಲಿ ಜಿಲ್ಲಾ ಮತ್ತು ತಾಲೂಕು ಘಟಕದಿಂದ ಬುಧವಾರ ಆಯೋಜಿಸಿದ್ದ ಪ್ರಥಮ ಕಂಪ್ಲಿ ತಾಲೂಕು ಸಮ್ಮೇಳನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕಾರ್ಮಿಕರು ಸೌಲಭ್ಯಗಳು ಸಿಗತ್ತಿಲ್ಲ ಬೃಹತ್ ಮಟ್ಟದಲ್ಲಿ ಸಂಘಟನೆ ಹೋರಾಟದ ಮೂಲಕ ಸರ್ಕಾರಕ್ಕೆ ಹಕ್ಕೋತ್ತಾಯ ಮಾಡಬೇಕಾಗಿದೆ.
ಹೋರಾಟದ ಚಡಿ ಬೀಸಿದಾಗ ಮಾತ್ರ ಸೌಲಭ್ಯಗಳನ್ನು ಹಾಗೂ ಬಹು ಬೇಡಿಕೆಗಳನ್ನು ಪಡೆದುಕೊಳ್ಳಲು ಸಾಧ್ಯ. ವೈದ್ಯಕೀಯ ಚಿಕಿತ್ಸೆಯಲ್ಲಿ ಅನ್ಯಾಯವಾಗುತ್ತಿದೆ. ದುಡಿದು ತಿನ್ನುವ ಕಾರ್ಮಿಕರ ಬದಲು ಕಷ್ಟಪಡದ ಕಾರ್ಮಿಕರು ಸೌಲಭ್ಯಗಳನ್ನು ಪಡೆದುಕೊಳ್ಳುತ್ತಿರುವುದು ವಿಪರ್ಯಾಸದ ಸಂಗತಿಯಾಗಿದೆ. ಆದ್ದರಿಂದ ಎಲ್ಲಾ ಕಾರ್ಮಿಕರು ಒಗ್ಗೂಡಿ, ಬಲಿಷ್ಠ ಸಂಘಟನೆಯೊಂದಿಗೆ ಬೀದಿ ಬೀದಿಗೆ ಇಳಿದು ಹೋರಾಟ ಮಾಡಿದಾಗ ಸರ್ಕಾರ ನಮ್ಮ ಬೇಡಿಕೆಗಳಿಗೆ ಸ್ಪಂದಿಸಲಿದೆ ಎಂದರು. ತಾಲೂಕು ಅಧ್ಯಕ್ಷ ಎನ್.ರಾಜಾಭಕ್ಷಿ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿ, ಕಟ್ಟಡ ಕಟ್ಟುವ ಮತ್ತು ಕಲ್ಲು ಒಡೆಯುವ ಕಾರ್ಮಿಕರಿಗೆ ಸೌಲಭ್ಯಗಳು ಅಗತ್ಯವಾಗಿವೆ.
2008ರಲ್ಲಿ ದಾವಣಗೆರೆಯಲ್ಲಿ ನಡೆದ ದೊಡ್ಡ ಮಟ್ಟದ ಹೋರಾಟ ಮಾಡಿದಾಗ ಒಂದು ಕೋಟಿ ಅನುದಾನ ನೀಡಿದ್ದರು. ಕಾರ್ಮಿಕರ ಬಗ್ಗೆ ಕಿಂಚಿತ್ತು ಕಾಳಜಿ ಇಲ್ಲ. ಆದ್ದರಿಂದ ಸರ್ಕಾರಕ್ಕೆ ಬಿಸಿ ಮುಟ್ಟಿಸಬೇಕಾದರೆ, ದೊಡ್ಡ ಮಟ್ಟದ ಹೋರಾಟದಿಂದ ಮಾತ್ರ ಸಾಧ ಎಂದರು ಸಂದರ್ಭದಲ್ಲಿ ರಾಜ್ಯ ಕಾರ್ಯದರ್ಶಿ ಎ.ಎಲ್.ತಿಮ್ಮಣ್ಣ, ಮುಖಂಡರಾದ ಹುಲುಗಪ್ಪ, ತಾಲೂಕು ಗೌರವಾಧ್ಯಕ್ಷ ಬಿ.ಅಬ್ದುಲ್ ನವಾಜ್, ಉಪಾಧ್ಯಕ್ಷರಾದ ಕೃಷ್ಣಪ್ಪ ಮೆಟ್ರಿ, ಶರಣ, ನಾಗಸುಬ್ಬಣ್ಣ, ಪ್ರಧಾನ ಕಾರ್ಯದರ್ಶಿ ಸುಂಕಪ್ಪ, ಸಹ ಕಾರ್ಯದರ್ಶಿ ರಾಘವೇಂದ್ರ, ಸದಸ್ಯರಾದ ಶಿವರಾಜ, ವಿರುಪಾಕ್ಷಿ, ಮೆಟ್ರಿ ಹನುಮಂತಪ್ಪ, ಗಂಗಮ್ಮ, ಜ್ಯೋತೆಮ್ಮ, ಸೇರಿದಂತೆ ಇತರರು ಇದ್ದರು.