ವಿದ್ಯಾರ್ಥಿಗಳು ನಿದ್ರೆಗೆಟ್ಟು ಓದುವುದು ಸೂಕ್ತವಲ್ಲ
ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ತರಬೇತಿ ಶಿಬಿರದಲ್ಲಿ ಮನಶ್ಯಾಸ್ತ್ರಜ್ಞ ಎ.ಎಲ್.ವಿನಯ್
ಕಂಪ್ಲಿ 16: ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳು ಏಕಾಗ್ರತೆಯೊಂದಿಗೆ ಅಧ್ಯಯನ ಮಾಡಿದ್ದಾಗ ಪರೀಕ್ಷೆಗಳನ್ನು ಸುಲಭವಾಗಿ ಎದುರಿಸಬಹುದು ಎಂದು ಇಲ್ಲಿನ ಪಿಐ ಸುರೇಶ್ ಎಚ್.ತಳವಾರ್ ಹೇಳಿದರು.
ಪಟ್ಟಣದ ಗುರುಮಠದಲ್ಲಿ ಹೊಸಪೇಟೆಯ ಟಿಎಂಎಇಎಸ್ ಅಕಾಡೆಮಿ ಆಫ್ ಸೈನ್ಸ್ ಅಂಡ್ ಕಾಮರ್ಸ್ ವಸತಿ ಪಿಯು ಕಾಲೇಜು ಮತ್ತು ಕಂಪ್ಲಿಯ ಡಾ.ಅಬ್ದುಲ್ಕಲಾಮ್ ಟ್ರಸ್ಟ್ಗಳ ಸಹಯೋಗದಲ್ಲಿ ಬುಧವಾರ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ತರಬೇತಿ ಶಿಬಿರಕ್ಕೆ ಚಾಲನೆ ನೀಡಿ, ಪ್ರತಿಯೊಬ್ಬ ವಿದ್ಯಾರ್ಥಿಗಳು ವ್ಯಕ್ತಿತ್ವ ವಿಕಸನದೊಂದಿಗೆ ಪರಿಪೂರ್ಣ ಜೀವನ ರೂಪಿಸಿಕೊಳ್ಳಲು ಸಾಧ್ಯ ಸಮಾಜದಲ್ಲಿ ಶಿಕ್ಷಣಕ್ಕೆ ಉನ್ನತ ಸ್ಥಾನವಿದೆ ತೀವ್ರ ಒತ್ತಡದಿಂದ ಅಧ್ಯಯನ ಮಾಡಬೇಡಿ ವಿದ್ಯಾರ್ಥಿಗಳಲ್ಲಿ ರಕ್ತದೊತ್ತಡ, ಮಧುಮೇಹ ಕಾಣಿಸಿಕೊಳ್ಳುತ್ತಿರುವುದು ಆತಂಕಕಾರಿಯಾಗಿದೆ. ಕೇವಲ ಅಂಕಗಳಿಕೆಯಿಂದ ಪರಿಪೂರ್ಣ ಜೀವನ ರೂಪುಗೊಳ್ಳುವುದಿಲ್ಲ.. ವಿದ್ಯಾರ್ಥಿಗಳು ದುಶ್ಚಟಗಳಿಂದ ದೂರವಿರುವಂತೆ, ತಂದೆತಾಯಿಗಳನ್ನು ಗೌರವಿಸುವಂತೆ ಸಲಹೆ ನೀಡಿದರು. ಡಾ.ಅಬ್ದುಲ್ಕಲಾಮ್ ಟ್ರಸ್ಟ್ ಸಮಾಜದಲ್ಲಿ ಉತ್ತಮ ಸೇವೆ ಸಲ್ಲಿಸಿದೆ ಎಂದರು ಬೆಂಗಳೂರಿನ ಮನಶ್ಯಾಸ್ತ್ರಜ್ಞ ತರಬೇತುದಾರ ಎ.ಎಲ್.ವಿನಯ್ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ತರಬೇತಿ ನೀಡಿ, ಏಕಾಗ್ರತೆಯೊಂದಿಗೆ ಅಧ್ಯಯನ ಮಾಡಬೇಕು. ನಿದ್ರೆಗೆಟ್ಟು ಓದುವುದು ಸೂಕ್ತವಲ್ಲ. ಒತ್ತಡರಹಿತ ಅಧ್ಯಯನದಿಂದ ಸ್ಮರಣಶಕ್ತಿಯನ್ನು ಗಳಿಸಬಹುದು ಸೇರಿ ಗುಣಾತ್ಮಕ ಶಿಕ್ಷಣದೊಂದಿಗೆ ಹೆಚ್ಚು ಅಂಕಗಳಿಕೆಗೆ ನಾನಾ ಸಲಹೆಗಳನ್ನು ನೀಡಿದರು.
ಹೊಸಪೇಟೆಯ ಟಿಎಂಎಇಎಸ್ ಅಕಾಡೆಮಿ ಮುಖ್ಯಸ್ಥ ಎಸ್.ಆರ್.ನಾಗರಾಜ್ ಅಧ್ಯಕ್ಷತೆವಹಿಸಿದ್ದರು. ಡಾ.ಎಪಿಜೆ ಅಬ್ದುಲ್ಕಲಾಮ್ ಟ್ರಸ್ಟ್ ಅಧ್ಯಕ್ಷ ಎಂ.ಎಸ್.ಮುನ್ನಾ, ಜೆವಿಸಿ ಪಿಯು ಕಾಲೇಜು ಪ್ರಾಚಾರ್ಯ ಶಿವನಗೌಡಪಾಟೀಲ್, ಪ್ರಮುಖರಾದ ಬಡಿಗೇರ್ ಜಿಲಾನ್ಸಾಬ್, ವಿ.ಎಸ್.ದಯಾನಂದ್ ಕುಮಾರ್, ಷಣ್ಮುಖಪ್ಪ ಚಿತ್ರಗಾರ್, ಟಿ.ಎಂ.ಬಸವರಾಜ್, ಉಗಾದಿ ಶಿವರಾಜ್, ಸಂತೋಷ್ ಕೊಟ್ರ್ಪ ಸೋಗಿ, ಜಯಲಕ್ಷ್ಮಿ, ಜಿ.ವೀರೇಶ್, ರೇಣುಕಾರಾಧ್ಯ, ಜಿ.ಹನುಮಂತಪ್ಪ, ಎಚ್.ಸಿ.ರಾಮಕೃಷ್ಣ ಸೇರಿ ಇತರರಿದ್ದರು.