ಬಳ್ಳಾರಿ

ಉತ್ತಮ ಸಮಾಜಕ್ಕಾಗಿ ಕೆಲಸ ಮಾಡುವುದು ಎಲ್ಲರ ಜವಾಬ್ದಾರಿ

ಉತ್ತಮ ಸಮಾಜಕ್ಕಾಗಿ ಕೆಲಸ ಮಾಡುವುದು ಎಲ್ಲರ ಜವಾಬ್ದಾರಿ

ಬಳ್ಳಾರಿ 23: ಬಸವನದುರ್ಗಾ ಗ್ರಾಮದಲ್ಲಿ ಹಾಗೂ ದಿನಂಕ  ಹೊಸಪೇಟೆಯ ಬಾಸ್ಕೇಟ್‍ಬಾಲ್ ಕ್ರೀಡಾಂಗಣ, ಮುನ್ಸಿಪಲ್ ಕಾಲೇಜು ಮೈದಾನ ಮತ್ತು ಟಿಎಮ್‍ಇಎ ಐಟಿಐ ಕಾಲೇಜಿನಲ್ಲಿ ಎಐಡಿವೈಓ ಯುವಜನ ಸಂಘಟನೆ ವತಿಯಿಂದ ಸ್ವಾತಂತ್ರ್ಯ ಸಂಗ್ರಾಮದ ರಾಜಿರಹಿತ ಹೋರಾಟಗಾರ ನೇತಾಜಿ ಸುಭಾಷ್ ಚಂದ್ರ ಬೋಸ್ 125ನೇ ಜನ್ಮದಿನಾಚರಣೆ ಆಚರಿಸಲಾಯಿತು.

ನೇತಾಜಿ ಸುಭಾಷ ಚಂದ್ರ ಬೋಸ್ ರವರ ಭಾವಚಿತ್ರಕ್ಕೆ ಡಾ.ಮಲ್ಲಿಕಾರ್ಜುನ ಕೆಂಚರೆಡ್ಡಿ ಮಾಲಾರ್ಪಣೆ ಮಾಡಿ ಮಾತನಾಡಿ, ನಮ್ಮ ಸಮಾಜದಲ್ಲಿ ಹಲವಾರು ದೋಷಗಳಿವೆ. ಅರ್ಥಮಾಡಿಕೊಂಡು ಸರಿಯಾದ ಚಿಕಿತ್ಸೆ ನೀಡಬೇಕು ಹಾಗೂ ಒಳ್ಳೆಯ ಸಮಾಜಕ್ಕಾಗಿ ಕೆಲಸಮಾಡುವುದು ಎಲ್ಲರ ಜವಾಬ್ದಾರಿ. ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ವಿಚಾರಗಳ ಆಧಾರದ ಮೇಲೆ ಸಮಾಜ ಬದಲಾವಣೆಯ ಕೆಲಸಗಳು ನಡೆಯಬೇಕಿದೆ ಎಂದರು.

ಎ.ಐ.ಡಿ.ಎಸ್.ಓ ನ ಅಖಿಲ ಭಾರತ ಉಪಾಧ್ಯಕ್ಷ ಡಾ. ಪ್ರಮೋದ್ ಮಾತನಾಡಿದರು. ಎಐಡಿವೈಓನ ಕಲ್ಮೇಶ್ ಗುದಿಗೇನವರ್, ಹುಲುಗಪ್ಪ, ಬಾóಷಾ ಬೆನಕಾಪುರ, ಪ್ರಕಾಶ್‍ನಾಯಕ್ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಗ್ರಾಮದ ನಾಗರೀಕರು, ನಗರದಲ್ಲಿ ಬಾಯುವಿಹಾರಕ್ಕೆ ಬಂದವರು, ಕ್ರೀಡಾಂಗಣದ ಆಟಗಾರರು, ಹಿರಿಯರು, ಕಾಲೇಜಿನಲ್ಲಿನ ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು

ಸುದ್ದಿ ಓದಿ