ಮಧ್ಯವ್ಯಸನ ಹೋಗಲಾಡಿಸುವುದು ಎಲ್ಲರ ಜವಾಬ್ದಾರಿ: ಅನಿರುದ್ಧ ಶ್ರವಣ್
ಲೋಕದರ್ಶನ ವರದಿ
ಬಳ್ಳಾರಿ 22: ಮದ್ಯವ್ಯಸನ್ನಕ್ಕಿಡಾದ ವ್ಯಕ್ತಿಯು ವ್ಯಕ್ತಿಗತವಾಗಿ ಹಾಳಾಗುವುದಲ್ಲದೇ ಸಾಮಾಜಿಕ ಮತ್ತು ಕೌಟುಂಬಿಕ ಜೀವನವನ್ನು ಹಾಳು ಮಾಡಿಕೋಳ್ಳುತ್ತಿದ್ದು ಇಂತ ವ್ಯಸನಿಗಳ ರಕ್ಷಣೆಗಾಗಿ ಧರ್ಮಸ್ಥಳ ಸಂಸ್ಥೆ ಶಿಬಿರಗಳನ್ನು ಆಯೋಜಿಸಿ ಪುನಃಪರಿವರ್ತನೆಯಂತ ಮಹಾತ್ವಾಕಾರ್ಯ ಮಾಡುತ್ತಿರುವುದು ಅತ್ಯಂತ ಶ್ಲಾಘನೀಯ ಕೆಲಸವೆಂದು ವಿಜಯ ನಗರ ಜಿಲ್ಲಾಧಿಕಾರಿ ಅನಿರುದ್ಧ ಶ್ರವಣ್ ಮೆಚ್ಚುಗೆ ವ್ಯಕ್ತ ಪಡಿಸಿದರು
ನಗರದ ರೈತಭವನದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆ ವಿವಿಧ ಸಂಘಟನೆಗಳೊಂದಿಗೆ ಜೊತೆ ಸೇರಿ 8ದಿನಗಳ ಕಾಲ ಅಯೋಜಿಸಿದ್ದ ಮದ್ಯವರ್ಜನ ಶಿಬಿರದ ಸಮರೋಪ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು ಮದ್ಯ ತ್ಯಜಿಸಲು ವ್ಯಕ್ತಿಯ ಸಂಕಲ್ಪ ಶಕ್ತಿ ಪ್ರಮುಖ ಪಾತ್ರ ವಹಿಸಲಿದ್ದು ಅದರಿಂದಾಗುವ ದುಷ್ಪಾರಿಣಾಮಗಳ ಅರಿವನ್ನು ಪಡೆದು ದೃಢ ಸಂಕಲ್ಪ ಮಾಡುವ ಮೂಲಕ ವ್ಯಸನ ತ್ಯಜಿಸಲು ಪಣತೊಡಬೇಕೆಂದು ಕರೆ ನೀಡಿದರು. ದಿವ್ಯ ಸಾನಿದ್ಯವನ್ನು ವಹಿಸಿದು ಪೂರ್ಣನಂದ ಭಾರತಿ ಸ್ವಾಮಿಗಳು ಮನುಷ್ಯ ಜನ್ಮ ಅನೇಕ ಪುಣ್ಯಗಳಿಂದ ಪ್ರಾಪ್ತಿವಾಗುವಂತದ್ದು ಅದನ್ನ ಅನಗತ್ಯವಾದ ವ್ಯಸನಗಳಿಗೆ ತೊಡಗಿಸಿಕೊಂಡು ಹಾಳು ಮಾಡಿಕೊಳ್ಳುವುದು ಬುದ್ದಿವಂತರ ಲಕ್ಷಣವಾಗಬಾರದು ಅದರಿಂದ ಹೊರಬಂದು ಉತ್ತಮ ಜೀವನ ನಡೆಸಲು ಇಂತ ಶಿಬಿರಗಳನ್ನು ದಾರೀದೀಪವಾಗಿ ಬಳಸಿಕೊಳ್ಳುವಂತೆ ಅಶಿರ್ವಚನ ನೀಡಿದರು.
ಮುಖ್ಯ ಅಥಿತಿಗಳಾಗಿ ಪಾಲ್ಗೂಂಡಿದ್ದ ಪೋಲೀಸ್ ವರಿಷ್ಠಾಧಿಕಾರಿಗಳಾದ ಡಾ.ಕೆ ಅರುಣ್ ರವರು ಮದ್ಯಪಾನ ಸಮಾಜದಲ್ಲಿರುವ ಅನೇಕ ಅಪರಾಧಗಳಿಗೆ ಪ್ರೇರಣೆಯಾಗಿದೆ ವ್ಯಸನದಿಂದ ದೂರ ಉಳಿದು ನೇಮ್ಮದಿ ಶಾಂತಿಯ ಜೀವನದೊಂದಿಗೆ ಕಾನೂನು ವ್ಯವಸ್ಥೆ ಕಾಪಾಡುವಲ್ಲಿ ಇಂತ ಶಿಬಿರಗಳು ಪ್ರೇರಣೆಯಾಗಿರುದಾಗಿ ತಿಳಿಸಿದರು.
ಕಲ್ಯಾಣ ಕರ್ನಾಟಕ ಪ್ರಾದೇಶಿಕ ವಿಭಾಗದ ಪ್ರಾದೇಶಿಕ ನಿರ್ದೇಶಕರಾದ ಪೂರುಷೊತ್ತಮ ಪಿ ಕೆ ರವರು ಜನ ಸಮುದಾಯ ಅಭಿವೃದ್ಧಿಯ ದೃಷ್ಠಿಯಿಂದ ಸರ್ಕಾರ ಮತ್ತು ಸಂಘ ಸಂಸ್ಥೆಗಳು ಹಮ್ಮಿಕೊಂಡಿರುವ ಅನೇಕ ಕಾರ್ಯಕ್ರಮಗಳ ಸಾರ್ಥಕತೆ ಪಡೆಯಲು ಜನರಲ್ಲಿರುವ ವ್ಯಸನ ದೂರ ಮಾಡುವ ಅಗತ್ಯವನ್ನು ಪೂಜ್ಯರು ಮದ್ಯವರ್ಜನದಂತ ಕಾರ್ಯಕ್ರಮವನ್ನು ಪರಿಚಯಿಸಿ ಪ್ರೋತ್ಸಹಿಸುತ್ತಿರುವುದಾಗಿ ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾ ಜನಜಾಗೃತಿ ವೇದಿಕೆ ಅದ್ಯಕ್ಷತೆಯನ್ನು ನಟರಾಜ ಬಾದಮಿ ರವರು ವಹಿಸಿದ್ದರು ವೇದಿಕೆಯ ಉಪಾಧ್ಯಕ್ಷ ವಿ ಪರುಶುರಾಮ. ಜಿಲ್ಲಾ ನಿರ್ದೇಶಕರಾದ ಚಿದಾನಂದ ಕೆ. ಯೋಜನಾಧಿಕಾರಿ ರಾಘವೇಂದ್ರ, ಮಾಧವ ನಾಯಕ್ , ಸಿಬಿರಾಧಿಕಾರಿಗಳಾದ ದೇವಿ ಪ್ರಸಾದ್ ಪ್ರಸಿಲ್ಲಾ ಮತ್ತು ವೇದಿಕೆಯ ಸದಸ್ಯರುಗಳಾದ ಯು. ವೆಂಕಟೇಶ್ ಪೂಜಾ. ಶೀತಾ ಸಂಕರ್ ವ್ಯವಸ್ಥಾಪಕ ಸಮಿತಿ ಸದಸ್ಯರಾದ ಹುಲಿಗೆಮ್ಮ ಮತ್ತು ಸರಸ್ವತಿ ಉಪಸ್ಥಿತರಿದ್ದರು