ಬಳ್ಳಾರಿ

ವೈವಿಧ್ಯಮಯ ಸಂಸ್ಕೃತಿ, ಪರಂಪರೆ ಕಾಪಾಡುವುದು ಪ್ರತಿಯೊಬ್ಬ ಕರ್ತವ್ಯ: ಎ.ಅಬ್ದುಲ್‌ನಬಿ

ವೈವಿಧ್ಯಮಯ ಸಂಸ್ಕೃತಿ, ಪರಂಪರೆ ಕಾಪಾಡುವುದು ಪ್ರತಿಯೊಬ್ಬ ಕರ್ತವ್ಯ: ಎ.ಅಬ್ದುಲ್‌ನಬಿ

ಲೋಕದರ್ಶನ ವರದಿ 

ಸಿರುಗುಪ್ಪ 01: ನಮ್ಮ  ವೈವಿಧ್ಯಮಯ ಸಂಸ್ಕೃತಿ ಮತ್ತು ಪರಂಪರೆಯನ್ನು ಗೌರವಿಸುವುದು ಮತ್ತು ಕಾಪಾಡುವುದು ಪ್ರತಿಯೊಬ್ಬ ಭಾರತೀಯನ ಸಂವಿಧಾನ ಬದ್ಧ ಮೂಲಭೂತ ಕರ್ತವ್ಯ ಸರ್ವರಿಗೂ ಕನ್ನಡ ರಾಜ್ಯೋತ್ಸವದ  ಶುಭಾಶಯಗಳು ಎಂದು ಕರ್ನಾಟಕ ರಾಜ್ಯ ವಯಸ್ಕರ ಶಿಕ್ಷಣ ಕೇಂದ್ರ ಸಮಿತಿ ಸಾಕ್ಷರತಾ ಮಿಷನ್ ಪ್ರಾಧಿಕಾರ ರಾಜ್ಯ ಸಂಪನ್ಮೂಲ ಕೇಂದ್ರದ ಸದಸ್ಯ ಎ.ಅಬ್ದುಲ್ ನಬಿ ಹೇಳಿದರು. 


ಸಿರುಗುಪ್ಪ 6ನೇ ವಿಭಾಗದ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಕರ್ನಾಟಕ ಸರ್ಕಾರ 75ನೇ ಸ್ವಾತಂತ್ರ್ಯದ ಅಮೃತ ಮಹೋತ್ಸವ 66ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ  ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಧ್ವಜ ವಂದನೆ ಸ್ವೀಕರಿಸಿ ಅವರು ಮಾತನಾಡುತ್ತಾ ಕನ್ನಡ ಭಾಷೆ ಕಲಿಯಲು ಸುಲಭ ಕನ್ನಡ ಭಾಷೆ ಮಾತನಾಡಲು ಸರಳ ಕನ್ನಡದ ಲಿಪಿ ನೋಡಲು ಅಂದ ಕನ್ನಡದ ಮಾತು ಕೇಳಲು ಚೆಂದ ಕನ್ನಡ ಭಾಷೆಯ ಅಭಿವ್ಯಕ್ತಿ ಪ್ರಖರ ಮಾತ್ರವಲ್ಲ ನಿಖರ ಕೂಡ ಭಾಷಾ ಲೋಕದಲ್ಲಿ ಕನ್ನಡಕ್ಕೆ ವಿಶೇಷ ಸ್ಥಾನವಿದೆ ನಾವೆಲ್ಲರೂ ಭಾಗ್ಯವಂತರು ಎಂದು ಅಬ್ದುಲ್ ನಬಿ ಹೇಳಿದರು.ಶಾಲಾ ಮುಖ್ಯ ಗುರುಗಳಾದ ಮುಹಮ್ಮದ್ ಅಲಿ ಬಾಗವಾನ್ ಅವರು ಮಾತನಾಡಿ ಕನ್ನಡ ಉರ್ದು ಇಂಗ್ಲಿಷ್ ಹಿಂದಿ ತೆಲುಗು ಯಾವುದೇ ಭಾಷೆಯಿರಲಿ ನಾವು ಗೌರವ ನೀಡಬೇಕು ಆದರೆ ಕನ್ನಡವನ್ನು ಪ್ರತಿಯೊಬ್ಬರು ಕಲಿತು ಮಾತನಾಡಬೇಕು ಎಂದರು. 


ಸಿರುಗುಪ್ಪ ನಗರಸಭಾ ಆವರಣದಲ್ಲಿ ನಗರಸಭೆ  ಅಧ್ಯಕ್ಷೆ ಗುಲ್ಜಾರ್ ಬೇಗಂ ಅವರು ಕರ್ನಾಟಕ ರಾಜ್ಯೋತ್ಸವದ 66ನೇ ರಾಷ್ಟ್ರ ಧ್ವಜಾ ರೋಹಣ ನೆರವೇರಿಸಿದರು. ನಗರಸಭಾ ಪೌರಾಯುಕ್ತ ರಾಘವೇಂದ್ರ ಗುರು ಅವರು ಕನ್ನಡದ ಪ್ರತಿಜ್ಞಾ ವಿಧಿ ಸಂಕಲ್ಪವನ್ನು ಬೋಧಿಸಿದರು. ಕನ್ನಡದ 4ಹಾಡುಗಳನ್ನು ಹಾಡಿ ಸಲಾಯಿತು ಮತ್ತು  ಸಮಾಜ ಸುಧಾರಕ ಎ .ಅಬ್ದುಲ್ ನಬಿ ಸೇರಿದಂತೆ ಕನ್ನಡ ರಾಜ್ಯೋತ್ಸವದ ಬಗ್ಗೆ ಹಾಡುಗಳನ್ನು ಹಾಡಿ ಸಭೆಗೆ ಶೋಭೆ ತಂದರು. ನಗರಸಭಾ ಸದಸ್ಯ ಚಿದಾನಂದರಾಯುಡು ನಾಗರಾಜ ಮಲ್ಲಿಕಾರ್ಜುನ ಸೇರಿದಂತೆ ಎಲ್ಲಾ ಸದಸ್ಯರು ಸಿಬ್ಬಂದಿ ವರ್ಗದವರು ಅಧಿಕಾರಿಗಳು ಹಾಜರಿದ್ದರು. 


ಶಾಸಕ ಎಂ. ಎಸ್‌. ಸೋಮಲಿಂಗಪ್ಪ ಅವರು ಮಾತನಾಡಿದರು ಕ್ಷೇತ್ರ ಶಿಕ್ಷಣಾಧಿಕಾರಿ ಪಿ ಡಿ.ಭಜಂತ್ರಿ ಅವರು ಮುಖ್ಯ ಭಾಷಣಕಾರರಾಗಿದ್ದರು. ಶಾಲಾ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು ಸಿಪಿಐ ಟಿ.ಆರ್‌. ಪವಾರ್, ಪಿಎಸ್ ಐ .ಕೆ.ರಂಗಯ್ಯ, ಸಹಾಯಕ ಕೃಷಿ ನಿರ್ದೇಶಕ  ಎನ್‌. ನಜೀರ್ ಅಹ್ಮದ್, ತೋಟಗಾರಿಕೆ ಹಿರಿಯ ಸಹಾಯಕ ನಿರ್ದೇಶಕ ವಿಶ್ವನಾಥ ಗೌಡ, ತಾಲ್ಲೂಕು ಸಮಾಜ ಕಲ್ಯಾಣ ಅಧಿಕಾರಿ ಎಂ. ಸಿದ್ದಯ್ಯ, ಬಿಸಿಎಂ ಅಧಿಕಾರಿ ಕೆ. ಗಾದಿಲಿಂಗಪ್ಪ, ಸಿಡಿಪಿಒ  ಜಲಾಲಪ್ಪ,   ಕನ್ನಡ ವಿವಿಧ ಸಂಘಗಳ ಪದಾಧಿಕಾರಿಗಳು ಸಾಕ್ಷರತಾ ಸದಸ್ಯ ಎ .ಅಬ್ದುಲ್ ನಬಿ ,ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನಾಗರಾಜ ಸ್ವಾಮಿ, ಬೀರಳ್ಳಿ, ರಾಮರೆಡ್ಡಿ, ಸಾಕ್ಷರತಾ ಸಂಯೋಜಕ ವಿರುಪಾಕ್ಷ  ಮತ್ತಿತರರು ಇದ್ದರ. 


ಸುದ್ದಿ ಓದಿ