ಶಿಗ್ಗಾವ್

ತ್ಯಾಗದಲ್ಲಿರುವ ಆತ್ಮ ವಿಶ್ವಾಸದ ಶಕ್ತಿ ಭೋಗದಲ್ಲಿ ಕಾಣಲು ಸಾಧ್ಯವಿಲ್ಲ

ತ್ಯಾಗದಲ್ಲಿರುವ ಆತ್ಮ ವಿಶ್ವಾಸದ ಶಕ್ತಿ ಭೋಗದಲ್ಲಿ ಕಾಣಲು ಸಾಧ್ಯವಿಲ್ಲ

ಕಾಶಿ ಡಾ. ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳು ಹೇಳಿಕೆ: ಸಾಮೂಹಿಕ ಇಷ್ಟಲಿಂಗ ಮಹಾಪೂಜೆ 

ಶಿಗ್ಗಾವಿ 24: ತ್ಯಾಗದಲ್ಲಿರುವ ಆತ್ಮ ವಿಶ್ವಾಸದ ಶಕ್ತಿ ಭೋಗದಲ್ಲಿ ಕಾಣಲು ಸಾಧ್ಯವಿಲ್ಲ. ಅಂತಹದೊಂದು ಶಕ್ತಿ ತ್ಯಾಗಕ್ಕಿದೆ. ಈ ನಿಟ್ಟಿನಲ್ಲಿ ಕಾಶಿ ಪೀಠದ ಉತ್ತರಾಧಿಕಾರಿ ಸ್ಥಾನ ತ್ಯಾಗ ಮಾಡಿದ ಬೆಂಗಳೂರಿನ ವಿಭೂತಿಮಠದ ಶ್ರೀಗಳವರಿಂದ ಹೊಟಗಿಮಠದ ಡಾ.ಮಲ್ಲಿಕಾರ್ಜುನ ಶಿವಾಚಾರ್ಯರಿಗೆ ಉತ್ತರಾಧಿಕಾರಿಯಾಗುವ ಯೋಗ ಕೂಡಿ ಬಂದಿದಿ ಎಂದು ಕಾಶೀ ಡಾ. ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳು ಹೇಳಿದರು. 

ತಾಲೂಕಿನ  ಬಿಸನಹಳ್ಳಿ ಗ್ರಾಮದ ಶ್ರೀಜಗದ್ಗುರು ಪಂಚಾಚಾರ್ಯ ವೇದ, ಆಗಮ, ಸಂಸ್ಕೃತ, ಸಂಗೀತ ಮತ್ತು ಯೋಗ ಪಾಠಶಾಲೆ ಆವರಣದಲ್ಲಿ ನಡೆದ ಸಾಮೂಹಿಕ ಇಷ್ಟಲಿಂಗ ಮಹಾಪೂಜೆ, ಸಿದ್ಧಾಂತ ಶಿಖಾಮಣಿ ಆಧ್ಯಾತ್ಮಿಕ ಆರ್ಶೀವಚನ ಕಾರ್ಯಕ್ರಮದ ಸಾನಿಧ್ಯ ವಹಿಸಿ ಆರ್ಶೀವಚನ ನೀಡಿದರು. 

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ಯ ಸಚಿವ ಕೆ.ಎಸ್‌.ಈಶ್ವರ​‍್ಪ, ಮಾತನಾಡಿ, ಜ್ಞಾನ ಸಿಂಹಾಸನಾಧಿಶ್ವರ ಶ್ರೀ ಕಾಶೀ ಜಗದ್ಗುರುಗಳವರು ಸಮಾಜದ ಜಾಗೃತಿ, ಒಳಿತಿಗಾಗಿ ತಮ್ಮ ದೇಹವನ್ನು ಶ್ರೀಗಂಧದ ಕೊರಡಿನ ಹಾಗೆಯೇ ಸವಿದಿದ್ದಾರೆ. ಇದರ ಪರಿಣಾಮ ಭಾರತ ದೇಶ ಆಧ್ಯಾತ್ಮಕತೆಯಲ್ಲಿ ವಿಶ್ವಕ್ಕೆ ಮಾದರಿಯಾಗಿದೆ. ಮೂವರು ಜಗದ್ಗುರುಗಳವರ ಧಿವ್ಯ ಸಾನಿಧ್ಯದಲ್ಲಿ  ನಡೆಯುತ್ತಿರುವ ಈ ಧರ್ಮಸಭೆ  ತ್ರೀವೇಣಿ ಸಂಗಮವಾಗಿದೆ. ಆದಷ್ಟು ಬೇಗ ಪಂಚ ಪೀಠಗಳ ಜಗದ್ಗುರುಗಳು ಒಂದಾಗಿ ವಿಶ್ವಾಧ್ಯಂತ ಧರ್ಮ ಜ್ಯೋತಿಯನ್ನು ಬೆಳಗಿಸುವಂತಾಗಲಿ ಎಂದು ಹೇಳಿದರಲ್ಲದೇ, ಪ್ರಧಾನಿ ಮೋದಿಜಿಯವರ ನೇತೃತ್ಬದಲ್ಲಿ ಬಿಜೆಪಿ ಸರಕಾರ ಆರ್ಥಿಕತೆಯಿಂದ ಸದೃಡವಾಗಿದ್ದು, 115 ರಾಷ್ಟ್ರಗಳಿಂದ ಪಡೆದ ಎಲ್ಲ ಸಾಲವನ್ನು ತೀರಿಸಿ ಭಾರತ ದೇಶವೇ ಇಗ 20 ರಾಷ್ಟ್ರಗಳಿಗೆ ಸಾಲ ನೀಡಿದೆ ಎಂದು ಹೇಳಿದರು.  

ಶ್ರೀಶೈಲ್ ಪೀಠದ ಜಗದ್ಗುರು ಡಾ.ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯರು ಆರ್ಶೀವಚನ ನೀಡಿ, ಸಿದ್ಧಾಂತ ಶಿಖಾಮಣಿ ಗ್ರಂಥವನ್ನು ರಾಷ್ಟ್ರ, ಅಂತರಾಷ್ಟ್ರ ಮಟ್ಟದಲ್ಲಿ ವಿವಿಧ ಭಾಷೆಗಳಲ್ಲಿ ಪರಿಚಯಸಿದ ಕೀರ್ತಿ ಕಾಶೀ ಜಗದ್ಗುರುಗಳಿಗೆ ಸಲ್ಲುತ್ತದೆ. ಸುವರ್ಣಕ್ಕೆ ಸುಗಂಧವಿಟ್ಟಂತೆ ಬಿಸನಹಳ್ಳಿ ಗ್ರಾಮದ ಆಧ್ಯಾತ್ಮಿಕ ಮಣ್ಣಿನಲ್ಲಿ ನಡೆಯವ ಧರ್ಮ ಸಭೆಯಲ್ಲಿ ಜಂಗಮವಾಡಿ ಕಾಶಿ ಪೀಠದ ಮುಂದಿನ ಉತ್ತರಾಧಿಕಾರಿಗಳೆಂದು ಸೊಲ್ಲಾಪುರ ಹೊಟಗಿಯ ಡಾ.ಮಲ್ಲಿಕಾರ್ಜುನ ಶಿವಾಚಾರ್ಯರ ಹೆಸರು ಘೋಷಣೆ ಮಾಡಿರುವುದು ಬಿಸನಳ್ಳಿ ಗ್ರಾಮಕ್ಕೆ ಹೊಸ ಇತಿಹಾಸವನ್ನು ತಂದು ಕೋಡಲಿದೆ ಎಂದು ಹೇಳಿದರು. 

ಉಜ್ಜಯನಿ ಸದ್ಧರ್ಮ ಪೀಠದ ಜ.ಸಿದ್ಧಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಆರ್ಶೀವಚನ ನೀಡಿ, 

ವಿದೇಶಗಳಲ್ಲಿಯೂ ವೀರಶೈವ ಪರಂಪರೆಯನ್ನು ಪರಿಚಯಿಸಿದ ಕೀರ್ತಿ ಡಾ.ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳವರಿಗೆ ಸಲ್ಲುತ್ತದೆ. ಜಾತಿ, ಮತ, ಪಂಥಗಳನ್ನು ಮರೆತು ಸರ್ವ ಸಮೂದಾಯದ ಭಕ್ತರನ್ನು ಸಮನಾಗಿ ಕಂಡು ಜಗದ್ಗುರು ಎಂಬ ಪದಕ್ಕೆ ಅರ್ಥ ಕಲ್ಪಿಸಿದವರು ಕಾಶಿ ಶ್ರೀಗಳವರು ಎಂದು ಹೇಳಿದರು. 

ಅರಳೆಲೆಮಠದ ರೇವಣಸಿದೇಶ್ವರ ಶ್ರೀಗಳು ಅಧ್ಯಕ್ಷತೆ ವಹಿಸಿದ್ದರು. ಸೋಲ್ಹಾಪುರದ ಶಿದ್ಧರಾಮ ಸ್ವಾಮೀಜಿ, ಮದ್ದರಕಿ ಹಿರೇಮಠದ ಶ್ರೀಗಳು, ಬೃಹನ್‌ಮಠದ ಪಂಚಾಕ್ಷರಿ ಸ್ವಾಮೀಜಿ, ಗಂಜೀಗಟ್ಟಿ ವೈಜನಾಥ ಶ್ರೀಗಳು, ಹೋತನಹಳ್ಳಿ ಶಂಭುಲಿಂಗ ಶ್ರೀಗಳು, ಮಣಕಟ್ಟಿ ವಿಶ್ವರಾಧ್ಯ ಶ್ರೀಗಳು ಆರ್ಶೀವಚನ ನೀಡಿದರು.  

ಶಂಭಣ್ಣ ಮಾಮ್ಲೇಪಟ್ಟಣಶೆಟ್ಟರ, ಸಂಗಪ್ಪ ಮೊರಬದ, ಶಂಭುಲಿಂಗಪ್ಪ ಆಜೂರು, ವಿರೇಶ ಆಜೂರು, ಗುರುಪಾದಯ್ಯ ಸಾಲಿಮಠ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ ಸೇರಿದಂತೆ ಇತರ ಮಠಾಧೀಶರು ಗಣ್ಯರು ಇದ್ದರು. ಡಾ.ಶಿವುಕುಮಾರ ಶಿವೂರು, ಮಹಾ ದೇವಪ್ಪ ಕಳ್ಳೀಮನಿ ಮತ್ತಿತರರು ಉಪಸ್ಥಿತರಿದ್ದರು. ಶಿಕ್ಷಕಿ ಗಂಗೂಬಾಯಿ ದೇಸಾಯಿ ನಿರೂಪಿಸಿದರು. 


ಸುದ್ದಿ ಓದಿ