ಬಳ್ಳಾರಿ

ಕಾರ್ಮಿಕರಿಗೆ ಗುರುತಿನ ಚೀಟಿ ವಿತರಣೆ

ಕಾರ್ಮಿಕರಿಗೆ ಗುರುತಿನ ಚೀಟಿ ವಿತರಣೆ

ಬಳ್ಳಾರಿ04: ಜಿಲ್ಲೆಯಾದ್ಯಂತ ಸುಮಾರು 5000ಕ್ಕೂ ಹೆಚ್ಚು ಕಾರ್ಮಿಕರಿದ್ದು, ಅವರೆಲ್ಲರಿಗೂ ಆಯಾ ತಾಲ್ಲೂಕು ಮಟ್ಟದಲ್ಲಿ ಅಸಂಘಟಿತ ಕಾರ್ಮಿಕರಿಗೆ ಗುರುತಿನ ಚೀಟಿಗಳನ್ನು ವಿತರಿಸಲಾಗುವುದು ಎಂದರು. ಇದರ ಉಪಯೋಗವನ್ನು ಎಲ್ಲಾ ತಾಲ್ಲೂಕುಗಳ ಅಧ್ಯಕ್ಷರುಗಳು ಕಾರ್ಮಿಕ ಆಯುಕ್ತರನ್ನು ಭೇಟಿ ನೀಡಿ ವಿತರಿಸುವ ಕಾರ್ಯ ಮಾಡಬೇಕೆಂದು ಸವಿತಾ ಸಮಾಜದ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಹೆಚ್.ತಿಪ್ಪಣ್ಣ ಹೇಳಿದರು.ಬಳ್ಳಾರಿ ಕಾರ್ಮಿಕ ಇಲಾಖೆಯ ವತಿಯಿಂದ ಅಂಬೇಡ್ಕರ್ ಕಾರ್ಮಿಕ ಸಹಾಯ ಹಸ್ತ ಯೋಜನೆಯಡಿಯಲ್ಲಿ ನೋಂದಾಯಿತ ಫಲಾನುಭವಿಗಳಿಗೆ ಬಳ್ಳಾರಿ ತಾಲೂಕು ಸವಿತಾ ಸಮಾಜದವರಿಂದ ಅಸಂಘಟಿತ ಕಾರ್ಮಿಕರಿಗೆ ಸುಮಾರು 500 ಗುರುತಿನ ಚೀಟಿಗಳನ್ನು ಬುಧವಾರ ಸಂಜೆ ವಿತರಿಸಲಾಯಿತು. 

ಈ ಸಂದರ್ಭದಲ್ಲಿ ಬಳ್ಳಾರಿ ತಾಲೂಕು ಸವಿತಾ ಸಮಾಜದ ಅಧ್ಯಕ್ಷ ಆರ್.ಶೇಖಣ್ಣ ಅವರು ಮಾತನಾಡುತ್ತು, ತಾಲೂಕು ಸವಿತಾ ಸಮಾಜದ ವತಿಯಿಂದ ಅಸಂಘಟಿತ ಕಾರ್ಮಿಕರಿಗೆ ಗುರುತಿನ ಚೀಟಿಗಳನ್ನು ವಿತರಿಸುತ್ತಿರುವುದು ಸಂತಸದ ವಿಷಯವಾಗಿದೆ. ಇದೇರೀತಿ ಪ್ರತಿವರ್ಷ ನೋಂದಾಯಿ ಸರ್ವ ಕಾರ್ಮಿಕರಿಗೆ ಗುರುತಿನಿ ಚೀಟಿಗಳನ್ನು ವಿತರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಕಾರ್ಮಿಕ ಅಧಿಕಾರಿ ಚಂದ್ರಶೇಖರ ಐಲಿ, ಅಲ್ತಾಫ್, ಲೇಬರ್ ಇನ್ಸ್‍ಪೆಕ್ಟರ್ ರಾಜೇಶ್, ರವಿದಾಸ್ ಹಾಗೂ ಅಸಂಘಟಿತ ಕಾರ್ಮಿಕ ಇಲಾಖೆಯ ವಿಭಾಗೀಯ ಅಧಿಕಾರಿ ನಾಗರಾಜ್, ಬಸವರಾಜ್ ಅವರನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಸವಿತಾ ಸಮಾಜದ ಮುಖಂಡ ಜಾನಕಿರಾಮ್, ಸಣ್ಣಗೊಂಡ್ಲ ರಾಕೇಶ್, ಮಹೇಶ್, ಸೋಮು, ಶರಣಪ್ಪ, ಗೋವಿಂದ್ ಸೇರಿದಂತೆ ಹಲವಾರು ಉಪಸ್ಥಿತರಿದ್ದರು.

ಸುದ್ದಿ ಓದಿ