ಹಗರಿಬೊಮ್ಮನಹಳ್ಳಿ

ದಾಖಲೆ ಸರಿಯಿದ್ದರೇ, ಭೂಮಿ ಹಿಂತಿರುಗಿಸಿದ್ದಾದರೂ ಏಕೆ ?: ವಕೀಲ ಕನಕೇರಿ

ದಾಖಲೆ ಸರಿಯಿದ್ದರೇ, ಭೂಮಿ ಹಿಂತಿರುಗಿಸಿದ್ದಾದರೂ ಏಕೆ ?: ವಕೀಲ  ಕನಕೇರಿ

ಲೋಕದರ್ಶನ ವರದಿ 

ಹಗರಿಬೊಮ್ಮನಹಳ್ಳಿ : ತಾಲೂಕಿನ ಕೇಶವರಾಯನಬಂಡಿ ಗ್ರಾಮದಲ್ಲಿ ಕ್ಷೇತ್ರದ ಶಾಸಕ ಎಸ್‌.ಭೀಮಾನಾಯ್ಕರ ಪತ್ನಿ ಗೀತಾಬಾಯಿ ಭೀಮಾನಾಯ್ಕ ಖರೀದಿಸಿದ ಭೂಮಿ ಯಾವುದೇ ತಕರಾರಿಲ್ಲ ಎಂದು ಅದಕ್ಕಾಗಿ ಖರಿದಿಸಲು ಹೇಳಿದ್ದೇನೆ ಎಂದು ಪತ್ರಿಕಾಗೋಷ್ಠಿಯಲ್ಲಿ ಅವರ ಪರ ವಕೀಲರಾದ ಬಿ.ವಿ. ಶೀವಯೋಗಿ ಅವರೇ ಮತ್ತೇಕೆ ಭೂಮಿಯನ್ನು ಹಿಂತಿರುಗಿಸಿದ್ದೀರಿ ಎಂದು ವಕೀಲ ಕನಕೇರಿ ಅಶೋಕ್ ಪ್ರಶ್ನಿಸಿದರು.  

ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿ ಗೀತಾಬಾಯಿ ಭೀಮಾನಾಯ್ಕರವರ ವಕೀಲರು ಈ ಪ್ರಕರಣದ ಬಗ್ಗೆ ಸಂಪೂರ್ಣ ಮಾಹಿತಿ ಪಡೆಯಬೇಕಿತ್ತು, ಜೊತೆಗೆ ಈ ಭೂಮಿ ಖರೀದಿ ಮಾಡುವಂತೆ ಕಾನೂನು ಸಲಹೆ ನೀಡಿದ್ದೇನೆ ಎಂದು ಹೇಳಿರುವುದು ಸೂಕ್ತವಲ್ಲ. ಯಾವುದೇ ವಕೀಲರಾಗಲಿ ವಿವಾದಿತ ಜಮೀನಿನ ಪ್ರಕರಣ ಕೈಗೆತ್ತಿಕೊಂಡಾಗ ಅದರ ಮದರ್ ಡೀಡ್‌ನ್ನು ತಿಳಿದುಕೊಳ್ಳಬೇಕಾಗುತ್ತದೆ. ಪಹಣಿ ಎಂಬುದನ್ನು ಕರ್ನಾಟಕ ರಾಜ್ಯ ಸರ್ಕಾರ ಜಾರಿಗೆ ತಂದಿದ್ದೇ 1968ರಲ್ಲಿ ಹಾಗಾಗಿ ಕೇವಲ ಪಹಣಿ ಮೇಲೆ ಕೊಂಡುಕೊಳ್ಳುವುದು ಮತ್ತು ಪರಬಾರೆ ಮಾಡುವುದು ಎರಡೂ ಕಾನೂನುಬದ್ಧವಲ್ಲ. ಆದ್ದರಿಂದ ವಕೀಲ ಶಿವಯೋಗಿಯವರದ್ದು ಕೇವಲ ರಾಜಕೀಯ ಪ್ರೇರಿತ ಹೇಳಿಕೆಯೇ ಹೊರತು ಅದು ಕಾನೂನು ಬದ್ಧವಲ್ಲ.  

ನ್ಯಾಯಾಲಯದಲ್ಲಿ ವಾದ ಮಾಡಲು ನಮಗೆ 1926ರ ಡಾಕ್ಯುಮೆಂಟ್ ತಳಹದಿಯಾಗಿದೆ. ಈ ವಿವಾದಿತ ಜಮೀನನ್ನು 03.12.1968 ರಲ್ಲಿ ವೆಂಕಯ್ಯ ಎಂಬುವವರು ತಳವಾರ ಕಡ್ಲಬಾಳಪ್ಪ, ಹೊನ್ನಪ್ಪ, ದುರ್ಗಪ್ಪ ಎಂಬುವವರಿಂದ ಖರೀದಿ ಮಾಡಿರುತ್ತಾರೆ. ಅದನ್ನು ಅವರು ಉಳಿಗಾಯಿ ಕಡ್ಲಪ್ಪ ಎಂಬುವವರಿಗೆ 1972ರಲ್ಲಿ ಸರ್ವೆ ನಂ. 144ಜೆ-1.25 ಸೆಂಟ್ಸ್‌, ಸರ್ವೆ ನಂ. 145ಎಬಿಸಿ-4.25 ಸೆಂಟ್ಸ್‌, ಸರ್ವೆ ನಂ. 147ಸಿ/2ಡಿ-2.43 ಸೆಂಟ್ಸ್‌ ಒಟ್ಟಾರೆ 7.98 ಸೆಂಟ್ಸ್‌ ಜಮೀನನ್ನು “ಶ್ರೀ ದುರ್ಗಾ ಸೇವಾ ಸಮಷ್ಠಿ” ವ್ಯವಸಾಯ ಕೇಂದ್ರದ ಮ್ಯಾನೇಜಿಂಗ್ ಪಾರ್ಟನರ್ ಜಿ.ವೆಂಕಯ್ಯ ನಮ್ಮ ಕಕ್ಷಿದಾರರಾದ ಉಳಿಗಾಯಿ ಕಡ್ಲೆಪ್ಪಗೆ ಮಾರಿರುತ್ತಾರೆ. ಕೇಂದ್ರದ ಸೂರ್ಯನಾರಾಯಣ ದುರ್ಲಾಬ ಪಡೆದುಕೊಳ್ಳುತ್ತಾರೆ. ಜಿ.ವೆಂಕಯ್ಯ ಮತ್ತು ಸೋಮಪ್ಪ ಹೆಸರಿನಲ್ಲಿ ಪಹಣಿ ಇದ್ದು ಪವರ್ ಆಫ್ ಅಟಾರ್ನಿ ಬರೆಸಿಕೊಂಡು ರಿಜಿಸ್ಟಾರ್ ಮಾಡಿಸದೇ ಪಹಣಿಯ ಮೂಲಕ 2013ರಲ್ಲಿ ಧರ್ಮಪತ್ನಿ ಪದ್ಮಜಾ ಮತ್ತು ಅತ್ತೆ ಸಾವಿತ್ರಿಗೆ ಮಾರಾಟ ಮಾಡುತ್ತಾರೆ. ನಂತರ ಮೂಲ ವಾರಸುದಾರರಲ್ಲೊಬ್ಬ ಸೋಮಪ್ಪ ಭೂಮಿ ಮಾರಾಟ ಮಾಡಿಲ್ಲ ಎಂದು ನ್ಯಾಯಾಲಯದಲ್ಲಿ ದಾವೆ ಹೂಡುತ್ತಾರೆ. ಅಂದಿನಿಂದ ಇಂದಿನವರೆಗೆ ನನ್ನ ಕಕ್ಷಿದಾರ ಉಳಿಗಾಯಿ ಕಡೆಪ್ಪನವರ ಪರ ಪ್ರಕರಣ ನಡೆಸುತ್ತಾ ಬಂದಿದ್ದೇನೆ.  

2019ರಲ್ಲಿ ಇಲ್ಲಿಯ ನ್ಯಾಯಾಲಯ ಈ ಜಮೀನಿಗೆ ಸಂಬಂಧ ಪಟ್ಟಂತೆ ಮೂಲ ದಾಖಲಾತಿಗಳನ್ನು ಪ್ರಸ್ತುತ ಪಡಿಸುವಂತೆ ಕೇಳಿದ್ದರಿಂದ 30 ದಿನದ ಒಳಗಾಗಿ ನಾವು ಅಮೂಲಾಗ್ರ ದಾಖಲಾತಿ ಸಮೇತ ಮತ್ತೆ ಕೇಸ್‌ನ್ನು ಮುಂದುವರಿಸುತ್ತಾ ಬಂದಿದ್ದೇವೆ. ನಾವು ನ್ಯಾಯ ಪಡೆದುಕೊಳ್ಳಲು ಸುಪ್ರೀಂ ಕೋರ್ಟ್‌ವರೆಗೂ ನಮಗೆ ಅವಕಾಶವಿದೆ. 2012ರಿಂದ ಈ ಕಾನೂನು ಹೋರಾಟ ನಡೆಯುತ್ತಿದೆ. ಗೀತಾಬಾಯಿ ಭೀಮಾನಾಯ್ಕ್‌ ಪರ ವಕೀಲರು ಈ ಮದ್ಯೆ ವಕಾಲತ್ತು ಮಾಡುತ್ತಿರುವುದರಿಂದ ಅವರಿಗೆ ಇದರ ಬಗ್ಗೆ ಪೂರ್ಣ ಮಾಹಿತಿ ಇಲ್ಲ ಎಂದು ತಿಳಿದುಕೊಳ್ಳಬೇಕಾಗುತ್ತದೆ.ದಾಖಲೆಗಳು ಸರಿಯಿದ್ದರೇ ಕಾನೂನು ಪ್ರಕಾರ ಹೋರಾಟ ಮಾಡಬೇಕಿತ್ತು,ಭುಮು ಹಿಂತಿರುಗಿಸಿದ್ದೇಕೆ ಎಂದು ಪ್ರಶ್ನಿಸಿದರು. 

ಈ ಸಂದರ್ಭದಲ್ಲಿ ಹುಳಿಗಾಯಿ ಹನುಂಮತಪ್ಪ, ಚನ್ನಮ್ಮ, ಹೇಮಂತ್, ಗವಿಸಿದ್ದಪ್ಪ, ವಕೀಲ ಛತ್ರ​‍್ಪ ಉಪಸ್ಥಿತರಿದ್ದರು. 


ಸುದ್ದಿ ಓದಿ