ಇಂಗಳಿ ಕೃಷಿ ಪತ್ತಿನ ಸಂಘದಲ್ಲಿ ಅವ್ಯವಹಾರ ಸಂಗಮೆ ಆರೋಪ
ಚಿಕ್ಕೋಡಿ, ಆಗುಸ್ಟ್ 24: ತಾಲೂಕಿನ ಇಂಗಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ ಸಂಸ್ಥೆಯ ಸಿಬ್ಬಂದಿಗಳು ಕಾನೂನು ಬಾಹಿರವಾಗಿ ಅಂದಾಜು 2.40 ಕೋಟಿ ರೂ ಅವ್ಯವಹಾರ ಮಾಡಿದ್ದು. ಸರಕಾರ ಕೂಡಲೇ ತನಿಖೆ ಮಾಡಿ ಸಂಸ್ಥೆಯನ್ನು ಉಳಿಸಬೇಕು ಎಂದು ಪಿಕೆಪಿಎಸ್ ಹಾಲಿ ಉಪಾಧ್ಯಕ್ಷ ಭಿಮು ಸಂಗಮೆ ಆರೋಪಿಸಿದರು.
ಸೋಮವಾರ ಇಂಗಳಿ ಗ್ರಾಮದಲ್ಲಿ ಸುದ್ದಿಗೋಷ್ಡಿಯಲ್ಲಿ ಈ ವಿಷಯ ತಿಳಿಸಿದ ಅವರು.
ಕಳೆದ ಜನೇವರಿ ತಿಂಗಳಲ್ಲಿ ಪಿಕೆಪಿಎಸ್ ಗೆ ಹೊಸ ಆಡಳಿತ ಮಂಡಳಿ ರಚನೆಯಾಗಿದೆ. ಸಂಸ್ಥೆಯ ಆಡಳಿತ ಮಂಡಳಿ ನಿರ್ಣಯ ಗಾಳಿಗೆ ತೂರಿ ಸಂಸ್ಥೆಯ ಸುಮಾರು 11 ಸಿಬ್ಬಂದಿಗಳು ಸಹಕಾರಿ ಸಂಘದ ಬೈಲಾ ಪ್ರಕಾರ ಸಿಬ್ಬಂದಿ ವರ್ಗ ಸಾಲ ಪಡೆಯುವಂತಿಲ್ಲ ,ಆದರೆ ಸಹಕಾರಿ ಸಂಘದ ಎಲ್ಲ ನಿಯಮಗಳನ್ನು ಉಲಂಘನೆ ಮಾಡಿ ಸಾಲ ಪಡೆದು ಕೋಟ್ಯಾಂತರ ಅವ್ಯವಹಾರ ಮಾಡಿದ್ದಾರೆ. ಇದನ್ನು ತನಿಖೆ ಮಾಡಬೇಕೆಂದು ಸಹಕಾರ ಸಂಘಗಳ ಅಧಿಕಾರಿಗೆ ದೂರು ನೀಡಿದರು . ಆದರೆ ಚಿಕ್ಕೋಡಿ ಸಹಕಾರಿ ಸಂಘದ ನಿಬಂಧಕರು ನಿರ್ಲಕ್ಷ್ಯ ವಹಿಸಿದ್ದು , ರೈತರಿಗೆ ಸಿಗಬೇಕಾದ ಸಾಲ ಸೌಲಭ್ಯಗಳನ್ನ
ಸಂಸ್ಥೆಯ ಸಿಬ್ಬಂದಿಗಳು ತಮ್ಮ ಕುಟುಂಬ ಸದಸ್ಯರ ಮೇಲೆ ಖೋಟ್ಟಿ ದಾಖಲೆ ಸೃಷ್ಟಿಸಿ ಕಿಸಾನ ಕ್ರೆಡಿಟ್ ಸಾಲ ಪಡೆದುಕೊಂಡು ರೈತರಿಗೆ ವಂಚನೆ ಮಾಡಿದ್ದಾರೆ ಎಂದು ಆರೋಪಿಸಿದರು.
ಈ ಸಂದರ್ಭದಲ್ಲಿ ಡಾ.ಅಜೀತ ಚಿಗರೆ.ರಾಜು ಪವಾರ. ಹೂವಣ್ಣಾ ಚೌಗಲೆ.ಸುನೀಲ ಪಾಟೋಳೆ.ರಾಜು ಮಾನೆ.ಸುಭಾಷ ಘೋಸರವಾಡೆ.ಬಸಪ್ಪ ಕಾಂಬಳೆ ಇದ್ದರು.