ಸ್ವಾತಂತ್ರ್ಯ ಸಂಗ್ರಾಮದ ಮೇರು ವ್ಯಕ್ತಿ ನೇತಾಜಿ: ಈರಣ್ಣ
ಬಳ್ಳಾರಿ 23: ನಗರದ ಸಿಟಿ, ಮುನಿಸಿಪಾಲ್ ಕಾಲೇಜುಗಳಲ್ಲಿ ಮತ್ತು ಕೋರ್ಲಗುಂದಿ, ಮೋಕ ಶಾಲಾ ಕಾಲೇಜುಗಳ ಎಐಡಿಎಸ್ಓ ವತಿಯಿಂದ ನೇತಾಜಿ ಸುಭಾಷ್ಚಂದ್ರ ಭೋಸ್ರವರ 125ನೇ ಜನ್ಮ ದಿನಾಚರಣೆ ಆಚರಿಸಲಾಯಿತು.
ತಾಲೂಕಿನ ಕೊರ್ಲಗುಂದಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಕಾರ್ಯಕ್ರಮದ ಉದ್ದೇಶಿಸಿ ಎಐಡಿಎಸ್ಓ ಜಿಲ್ಲಾ ಸೆಕ್ರೇಟೇರಿಯಟ್ ಸದಸ್ಯ ಕೆ. ಈರಣ್ಣ ಮಾತಾನಾಡಿ, ನೇತಾಜಿ ಸುಭಾಷ್ಚಂದ್ರ ಭೋಸ್ ಅನ್ಯಾಯ ದಬ್ಬಾಳಿಕೆ ವಿರುದ್ಧ ಹೋರಾಟದ ಸಂಕೇತವಾಗಿದ್ದಾರೆ. ಜಪಾನ್ ದೇಶದಲ್ಲಿ ಐ.ಎನ್.ಎ. ಸೈನ್ಯ ಕಟ್ಟಿ ಬ್ರಿಟೀಷರ ವಿರುದ್ಧ ಹೋರಾಡಿದರು. ಬರೀ ಸ್ವಾತಂತ್ರ್ಯ ಬಂದರೆ ಸಾಲದು ಸಮಾಜವಾದಿ ಭಾರತ ನಿರ್ಮಿಸುವುದು ನೇತಾಜಿಯ ಕನಸಾಗಿತ್ತು ಎಂದು ಹೇಳಿದರು.
ಬಳ್ಳಾರಿಯ ಸಿಟಿ ಕಾಲೇಜುನ ಪ್ರಾಂಶುಪಾಲರಿಂದ ನೇತಾಜಿ ಅವರ ಭಾವಚಿತ್ರಕ್ಕೆ ಮಾಲರ್ಪಣೆ ಮಾಡಿದರು. ಎಐಡಿಎಸ್ಓ ಜಿಲ್ಲಾ ಸೆಕ್ರೇಟೇರಿಯಟ್ ಸದಸ್ಯರಾದ ಶಾಂತಿ. ಎಂ ಮಾತನಾಡಿದರು.
ಮುನ್ಸಿಪಾಲ್ ಕಾಲೇಜುನಲ್ಲಿ ಕೂಡ ಕಾರ್ಯಕ್ರಮ ಮಾಡಲಾಯಿತು. ಮತ್ತು ಮುನ್ಸಿಪಾಲ್ ಶಾಲೆಯಲ್ಲಿ ಕಾರ್ಯಕ್ರಮ ಮಾಡಲಾಯಿತು. ಕಾರ್ಯಕ್ರಮಗಳ ಅಧ್ಯಕ್ಷತೆಯನ್ನು ಸಿದ್ದು, ಉಮಾ ವಹಿಸಿದ್ದರು, ಈ ಸಂದರ್ಭದಲ್ಲಿ ಶಾಲಾ ಕಾಲೇಜಿನ ನೂರಾರು ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಈ ಕಾರ್ಯಕ್ರಮದ ಸಂದರ್ಭದಲ್ಲಿ ನೇತಾಜಿ ಸುಭಾಷ್ಚಂದ್ರ ಭೋಸ್ ಅವರ 125ನೇ ಜನ್ಮ ದಿನದ ಹಿನ್ನಲೆಯಲ್ಲಿ 23ಜನವರಿ 2021ರಿಂದ 23ಜನವರಿ 2022ರ ವರೆಗೂ ವರ್ಷಾಚರಣೆ ಆಚರಿಸಲಾಗುತ್ತಿದ್ದು, ಜಿಲ್ಲೆಯಾದ್ಯಂತ ನೂರಾರು ಕಾರ್ಯಕ್ರಮಗಳನ್ನು ಸಂಘಟಿಸಲಾಗುವುದು ಎಂದು ಎಐಡಿಎಸ್ಓ ಜಿಲ್ಲಾ ಅದ್ಯಕ್ಷರು ಸುರೇಶ್.ಜಿ, ಜಿಲ್ಲಾ ಕಾರ್ಯದರ್ಶಿ ರವಿಕಿರಣ್.ಜೆ.ಪಿ ಹೇಳಿದರು.