55ನೇ ಕಲ್ಚರಲ್ ಫೆಸ್ಟ್‌ ಮತ್ತು ಕಲ್ಚರಲ್ ಎಕ್ಸ್ಚೇಂಜ್ ಕಾರ್ಯಕ್ರಮದಲ್ಲಿ ಅಂತಾರಾಷ್ಟ್ರೀಯ ಗೌರವ

 55ನೇ ಕಲ್ಚರಲ್ ಫೆಸ್ಟ್‌ ಮತ್ತು ಕಲ್ಚರಲ್ ಎಕ್ಸ್ಚೇಂಜ್ ಕಾರ್ಯಕ್ರಮದಲ್ಲಿ ಅಂತಾರಾಷ್ಟ್ರೀಯ ಗೌರವ  International honor at the 55th Cultural Fest and Cultural Exchange program

                                                    ದುಬೈನಲ್ಲಿ ಲಕ್ಷ್ಮಣ ಸುವರ್ಣ ಅವರಿಗೆ ‘ಗೋಲ್ಡನ್ ಐಕಾನಿಕ್‌’ ಪ್ರಶಸ್ತಿ  

ಬೆಂಗಳೂರು 0 2: ಖ್ಯಾತ ಸಂಗೀತ ನಿರ್ದೇಶಕರಾದ ಬೆಂಗಳೂರಿನ ಶ್ರೀ ಲಕ್ಷ್ಮಣ ಸುವರ್ಣ ಅವರಿಗೆ ಇದೇ ಜುಲೈ 26ರಂದು ದುಬೈನಲ್ಲಿ ನಡೆದ 55ನೇ ಕಲ್ಚರಲ್ ಫೆಸ್ಟ್‌ ಹಾಗೂ ಕಲ್ಚರಲ್ ಎಕ್ಸ್ಚೇಂಜ್ ಕಾರ್ಯಕ್ರಮದಲ್ಲಿ ‘ಗೋಲ್ಡನ್ ಐಕಾನಿಕ್‌’ ಪ್ರಶಸ್ತಿ ನೀಡಿ ಗೌರವಿಸಲಾಯಿತು.  ಸಂಗೀತ ಕ್ಷೇತ್ರದಲ್ಲಿ ಹಲವು ವರ್ಷಗಳಿಂದ ಸಲ್ಲಿಸುತ್ತಿರುವ ವಿಶಿಷ್ಟ ಸೇವೆಯನ್ನು ಗುರುತಿಸಿ ಈ ಪ್ರತಿಷ್ಠಿತ ಪ್ರಶಸ್ತಿಗೆ ಅವರನ್ನು ಆಯ್ಕೆ ಮಾಡಲಾಗಿತ್ತು.  

ಲಕ್ಷ್ಮಣ ಸುವರ್ಣ ಅವರು ಈಗಾಗಲೇ ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ, ಕೆಂಪೇಗೌಡ ಪ್ರಶಸ್ತಿ ಸೇರಿದಂತೆ ನೂರಾರು ಪ್ರಶಸ್ತಿಗಳನ್ನು ತಮ್ಮ ಮುಡಿಗೇರಿಸಿಕೊಂಡಿದ್ದಾರೆ.  ದುಬೈನಲ್ಲಿ ಅಂತರರಾಷ್ಟ್ರೀಯ ಮಟ್ಟದ ಈ ಗೌರವ ಲಭಿಸಿರುವ ಹಿನ್ನೆಲೆಯಲ್ಲಿ ವಿಕೆಎಂ ಕಲಾವಿದರ ಸಂಘಟನೆ, ಸಂಗೀತ ಕ್ಷೇತ್ರದ ಗಣ್ಯರು ಹಾಗೂ ಅವರ ಅಭಿಮಾನಿಗಳು ಲಕ್ಷ್ಮಣ ಸುವರ್ಣ ಅವರನ್ನು ಅಭಿನಂದಿಸಿ ಶುಭ ಹಾರೈಸಿದ್ದಾರೆ.