ವಿಜಯಪುರ

ಕೇಂದ್ರ ಕಾರಾಗೃಹದಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆ

ಕೇಂದ್ರ ಕಾರಾಗೃಹದಲ್ಲಿ  ಅಂತರಾಷ್ಟ್ರೀಯ ಯೋಗ ದಿನಾಚರಣೆ

ಲೋಕದರ್ಶನ ವರದಿ 

  ವಿಜಯಪುರ  22:   ಕಾರಾಗೃಹವು ಕೇವಲ ಬಂದಿಗಳ ಕೇಂದ್ರವಲ್ಲ, ಇದೊಂದು ಸುಧಾರಣಾ ಕೇಂದ್ರವಾಗಿದೆ ಎಂದು ಕಾರಾಗೃಹದ ಅಧೀಕ್ಷಕರಾದ ಮಲ್ಲಿಕಾರ್ಜುನ ಎಸ್‌. ಮಾಳಿ ಅವರು ಹೇಳಿದರು.ಅವರು ನಗರದ ಕೇಂದ್ರ ಕಾರಾಗೃಹದಲ್ಲಿ ಆಯೋಜಿಸಲಾಗಿದ್ದ  ಅಂತರಾಷ್ಟ್ರೀಯ ಯೋಗ ದಿನಾಚಾರಣೆಯ ಅಂಗವಾಗಿ  ಯೋಗ ತರಬೇತಿ  ಸಪ್ತಾಹ ಕಾರ್ಯಕ್ರಮದಲ್ಲಿ   ಮಾತನಾಡಿದರು. ಬಂದಿಗಳಲ್ಲಿ ಪರಿವರ್ತನೆ ತರುವ ಪರಿವರ್ತನಾ ನಿಲಯವೂ ಆಗಿದೆ. ದೈನಂದಿನ ಯೋಗಾಭ್ಯಾಸವು ಬಂದಿಗಳ ಪುನರ್ವಸತಿ ಹಾಗೂ ವ್ಯಕ್ತಿತ್ವ ವಿಕಸನಕ್ಕೆ ಅತ್ಯಂತ ಸಹಕಾರಿಯಾಗಿದ್ದು, ಪ್ರತಿಯೊಬ್ಬರೂ ನಿಯಮಿತವಾಗಿ ಯೋಗಾಭ್ಯಾಸವನ್ನು ರೂಢಿಸಿಕೊಳ್ಳಬೇಕು.  ಮುಂಬರುವ ದಿನಗಳಲ್ಲಿ ಕಾರಾಗೃಹದಲ್ಲಿ ನಿರಂತರವಾಗಿ ಯೋಗಾಭ್ಯಾಸ ಕಾರ್ಯಕ್ರಮಗಳು ಹಮ್ಮಿಕೊಳ್ಳಲಾಗುವುದು. ಕಾರಾಗೃಹದ ಬಂದಿಗಳನ್ನು ಉತ್ತಮ ನಾಗರೀಕರಾಗಿ ಸಮಾಜದ ಮುಖ್ಯ ವಾಹಿನಿಗೆ ಕಳುಹಿಸಲು ಶ್ರಮಿಸುವುದಾಗಿ ಹೇಳಿದರು. 


ಸುದ್ದಿ ಓದಿ