ಅಂತರಾಷ್ಟ್ರೀಯ ಯೋಗ ದಿನಾಚರಣೆ
ಬಳ್ಳಾರಿ 21: ಬಳ್ಳಾರಿಯ ನೆಹರು ಯುವ ಕೇಂದ್ರವು ಎಸ್.ಜಿ.ಟಿ ವಿದ್ಯಾಸಂಸ್ಥೆಯ ಆವರಣದಲ್ಲಿ ದಿ. 21ರಂದು ಈ ವರ್ಷದ ಧ್ಯೇಯ ವಾಕ್ಯವಾದ ಮನೆಯಲ್ಲಿ ಯೋಗ ಮತ್ತು ಕುಟುಂಬದೊಂದಿಗೆ ಯೋಗ ಎಂಬ ಆಧಾರದಲ್ಲಿ ಸಾಂಖೇತಿಕವಾಗಿ ಎಸ್.ಜಿ.ಟಿ ಕುಟುಂಬದೊಂದಿಗೆ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಆಚರಿಸಲಾಯಿತು. ನೆಹರು ಯುವ ಕೇಂದ್ರದ ಸಮನ್ವಯ ಅಧಿಕಾರಿಗಳಾದ ಮಂಟು ಪತ್ತಾರ್ ಮತ್ತು ಹುಲುಗಪ್ಪರವರು ಎಸ್.ಜಿ.ಟಿ ಕುಟುಂಬದ ಸದಸ್ಯರುಗಳಾದ ರುದ್ರ್ಪ, ನಾಗರಾಜ್, ಮಂಜುಳ, ಸೌಮ್ಯ, ತಿಪ್ಪೇರುದ್ರ, ಶಿವಶಂಕರ್, ಅಮರೇಷ್ ರೊಂದಿಗೆ ಆಚರಿಸಿಕೊಂಡರು.
ನಾಗರಾಜ್ ರವರು ಯೋಗದ ಬಗ್ಗೆ ತಿಳಿಸುತ್ತಾ ಕೋವಿಡ್19ರ ಸಂದರ್ಭದಲ್ಲಿ ರೋಗನಿರೋದಕ ಶಕ್ತಿಯನ್ನು ಯೋಗ ನೀಡುತ್ತದೆ ಎಂದು ತಿಳಿಸಿದರು. ವ್ಯಾಸರ ಆದಿಯಾಗಿ ಭಾರತದಲ್ಲಿ ಅವತರಿಸಿದ ಗುರು ಪರಂಪರೆ ಮತ್ತು ಋಷಿಮುನಿಗಳ ತಪಸ್ಸಿನ ಫಲವಾಗಿ ಬಂದ ಯೋಗ ವಿದ್ಯೆಯು ಎಂದು ಜಗತ್ತಿನಾದ್ಯಂತ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿಜಿಯವರು 2015ರಂದು ಪ್ರಾರಂಭಿಸಿದ ಅಂತರಾಷ್ಟ್ರೀಯ ಯೋಗ ದಿನಾಚರಣೆಯಿಂದಾಗಿ ಬೆಳಕನ್ನು ಕಂಡು ಮಾನವ ಜನಾಂಗ ಆರೋಗ್ಯದಿಂದ ಮತ್ತು ಶಾಂತಿಯಿಂದ ಸಂತೋಷವಾಗಿ ಬದುಕುವ ಮಾರ್ಗದರ್ಶನವನ್ನು ನೀಡಿದೆ, ಈ ಸಂದರ್ಭದಲ್ಲಿ ನಮ್ಮ ಎಲ್ಲಾ ಗುರು ಪರಂಪರೆ ಮತ್ತು ಋಷಿಮುನಿಗಳಿಗೆ ಮತ್ತೊಮ್ಮೆ ನೆನೆದು ವಂದಿಸಬೇಕಾಗಿದೆ ಮತ್ತು ಈ ವಿದ್ಯೆಯ ಪುನರುಜ್ಜೀವನ ವಾಗಬೇಕಾಗಿದೆ. ಮನುಷ್ಯನಲ್ಲಿ ಅಡಗಿರುವ ಚೈತನ್ಯ ವಿಶ್ವದ ಚೈತನ್ಯದೊಂದಿಗೆ ಸೇರಬೇಕೆಂಬ ಯೋಗ ತತ್ವ ಪ್ರಪಂಚದ ಸ್ವಾಸ್ತಕ್ಕೆ ಕಾರಣವಾಗಲಿದೆ ಮತ್ತು ಮುಂದಿನ ವರ್ಷವಾದರು ಸಾರ್ವಜನಿಕವಾಗಿ ಮುಕ್ತವಾಗಿ ಆಚರಿಸುವಂತಾಗಲಿ ಎಂದು ತಿಳಿಸಿದರು.