ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ
ಬಳ್ಳಾರಿ 06: ಭವಿಷ್ಯದ ಕೋವಿಡ್ 19 ನಿಯಂತ್ರಣದಲ್ಲಿ ಮಹಿಳಾ ನಾಯಕತ್ವ’ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ 2021ರ ಈ ಘೋಷಣೆಯನ್ನು ಬಲಗೊಳಿಸಲು ಎಫ್.ಪಿ.ಎ.ಆಯ್ ಬಳ್ಳಾರಿ ಶಾಖೆಯು ಕೊರೊನಾ ನಿಯಂತ್ರಣದಲ್ಲಿ ಪರಿಣಾಮಕಾರಿ ಕಾರ್ಯ ನಿರ್ವಹಿಸಿದ ಜಿಲ್ಲೆಯ ಪ್ರಮುಖ ಮಹಿಳಾ ಅಧಿಕಾರಿಗಳಿಗೆ ದಿ.6ರಂದು ಸನ್ಮಾನ ಸಮಾರಂಭ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದಲ್ಲಿ ನಂದಿನಿ ಕೆ.ಆರ್, ಪ್ರೀತಿ ಗಲ್ಹೋತ್, ಡಾ.ಇಂದ್ರಾಣಿ, ಡಾ.ಮರಿಂiಢiಂಬಿ, ಡಾ.ವಿಜಯಲಕ್ಷ್ಮಿ, ನಿವೃತ್ತ ಎಫ್.ಡಬ್ಲ್ಯು ಅಧಿಕಾರಿಗಳು ಹಾಗೂ ಕಾಯಕಲ್ಪ ಸಮನ್ವಯ ಡಾ.ಮೋಹನ್ ಕುಮಾರಿ ತಾಲೂಕಾ ವೈದ್ಯಾಧಿಕಾರಿಗಳು, ಬಳ್ಳಾರಿಈ ಮಹಿಳಾ ಅಧಿಕಾರಿಗಳಿಗೆ ಸನ್ಮಾನಿಸಲಾಯಿತು. ಸನ್ಮಾನಿತರಾಗಿ ಆಗಮಿಸಿದ ನಂದಿನಿ ಕೆ.ಆರ್. ಭಾ.ಆ.ಸೇ-ಮುಖ್ಯಾಕಾರ್ಯನಿರ್ವಾಹಕ ಅಧಿಕಾರಿಗಳು, ಜಿಲ್ಲಾ ಪಂಚಾಯತ್ ಬಳ್ಳಾರಿ ಇವರು ಕೋವಿಡ್ ಸಾಂಕ್ರಾಮಿಕ ಸಮಯದಲ್ಲಿ ತನು ಮನದಿಂದ ಸೇವೆ ಸಲ್ಲಿಸಿದ ಪ್ರತಿಯೊಬ್ಬ ಹೆಣ್ಣುಮಕ್ಕಳಿಗೆ ಈ ಸನ್ಮಾನ ಸಲ್ಲಬೇಕು. ಅಲ್ಲದೇ ಮಹಿಳೆಯ ಗರ್ಭಕೋಶದ ಕೊರಳಿನ ಕ್ಯಾನ್ಸರ್ ಬಗ್ಗೆ ವಿಶೇಷ ಅರಿವು ಮೂಡಿಸಲು ಎಲ್ಲ ತರಹದ ಕ್ರಮಕೈಗೊಂಡಿರುವುದಾಗಿ ಹೇಳಿದರು. ಇನ್ನೊಬ್ಬ ಸನ್ಮಾನಿತರಾದ ಪ್ರೀತಿ ಗಲ್ಹೋತ್, ಭಾ.ಆ.ಸೇ. ಆಯುಕ್ತರು, ಮಹಾನಗರ ಪಾಲಿಕೆ, ಬಳ್ಳಾರಿ ಅವರು ಮಹಿಳೆಯರಿಗೆ ಸರ್ಕಾರದ ಎಲ್ಲಾ ಮಹಿಳಾ ಅಭಿವೃಧ್ದಿ ಕಾರ್ಯಕ್ರಮಗಳ ಅರಿವು ಇರಬೇಕು, ಯಾವುದೇ ಕೆಲಸವನ್ನು ಒಬ್ಬ ಮಹಿಳೆಗೆ ವಹಿಸಿದರೆ ಅವರ ಹೆಚ್ಚಿನ ಮುತುವರ್ಜಿವಹಿಸಿ ಕಾರ್ಯನಿರ್ವಹಿಸುತ್ತಾರೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ ಎಸ್.ವಿಜಯಸಿಂಹ ಇವರು ಈ ಜಾಗತಿಕ ಕೋವಿಡ್ 19 ಸಮಯದಲ್ಲಿ ನಮ್ಮ ಸಂಸ್ಥೆಯು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಿದೆ ಮತ್ತು ಅವಶ್ಯಕತೆ ಇರುವವರಿಗೆ ತನ್ನ ಸಹಾಯಹಸ್ತವನ್ನು ನೀಡಿದೆ ಎಂದು ಹೇಳಲು ಹೆಮ್ಮೆಯಾಗುತ್ತದೆ ಎಂದು ಹೇಳಿದರು. ಅನಿಲ ಶಾಖಾಪುರ ಇವರ ಪ್ರಾರ್ಥನೆಯೊಂದಿಗೆ ಪ್ರಾರಂಭವಾದ ಕಾರ್ಯಕ್ರಮದ ಪ್ರಾಸ್ತಾವನೆಯನ್ನು ಸಂಸ್ಥೆಯ ಕಾರ್ಯದರ್ಶಿಗಳಾದ ಟ.ಜಿ.ವಿಠ್ಠಲ್ ಅವರು ಪ್ರಾಸ್ತಾವಿಕ ಭಾಷಣ ಮಾಡಿದರು, ಸುಜಾತಾಪುರಾಣಿಕ ಅವರು ಸ್ವಾಗತಿಸಿದರು ಕೊನೆಗೆ ಮಲ್ಲಿಕಾರ್ಜುನ ಅವರು ವಂದಿಸಿದರು. ಸಂಸ್ಥೆಯ ಶಾಖಾವ್ಯವಸ್ಥಾಪಕರಾದ ಎಸ್.ವಿಜಯಲಕ್ಷ್ಮಿ ಇವರು ಕಾರ್ಯಕ್ರಮವನ್ನು ನಿರೂಪಿಸಿದರು. ಕಾರ್ಯಕ್ರಮದಲ್ಲಿ ಅನೇಕ ಕ್ರೀಡೆಗಳಲ್ಲಿ ವಿಜಯಿಯಾದ ಮಹಿಳಾ ಸ್ವಸಹಾಯ ಸಂಘದ ಸದಸ್ಯೆಯರಿಗೆ ಬಹುಮಾನ ವಿತರಣೆ ಮಾಡಲಾಯಿತು. ನೂರಕ್ಕೂ ಹೆಚ್ಚು ಸ್ವಸಹಾಯ ಸಂಘದ ಸದಸ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.