ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ
ಬಳ್ಳಾರಿ 10: ಭಾರತ ಸರಕಾರ ನೆಹರು ಯುವ ಕೇಂದ್ರ ಕೊಪ್ಪಳ ಹಾಗೂ ಶ್ರೀ ಮಾತಾ ಮಹಿಳಾ ಶಿಕ್ಷಣ ಮತ್ತು ಗ್ರಾಮೀಣಾಭಿವೃದ್ಧಿ ಸಂಸ್ಥೆ ಇವರು ಸಂಯುಕ್ತ ಆಶ್ರಯದಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ತಾಳಕನಕಾಪುರ ಗ್ರಾಮದಲ್ಲಿ ನಡೆಸಲಾಯಿತು.
ಮುಖ್ಯ ಅತಿಥಿ ಲಕ್ಷಮವ್ವ ಈರಪ್ಪ ಕಟ್ಟಿಮನಿ ಗ್ರಾಮಪಂಚಾಯತ ಉಪಾಧ್ಯಕ್ಷರು ಮಹಿಳೆಯರ ಜಾಗೃತಿಯ ಕುರಿತು ಮತ್ತು ಮಹಿಳೆಯರ ಸಾಧನೆಯ ಕುರಿತು ಮಾತನಾಡಿದರು. ಕೊನೆಯದಾಗಿ ಕಾರ್ಯಕ್ರದ ಅಧಕ್ಷತೆಸ್ಥಾನ ವಹಿಸಿದ ವನಿತಾ ಗಡಾದ ಇವರು ಕೂಡ ಪುರುಷರಿಗಿಂತ ಮಹಿಳೆಯರೇ ಹೆಚ್ಚಿನ ಜವಬ್ದಾರಿಯನ್ನು ನಿಭಾಯಿಸಿದ್ದಾರೆ. ಕೇವಲ ಕುಟಂಬಕ್ಕೆ ಸೀಮತಿವಾಗದೆ. ರಾಜಕೀಯದಲ್ಲಿ, ಶಿಕ್ಷಣದಲ್ಲಿ, ವಿಜ್ಞಾನ ಕ್ಷೇತ್ರದಲ್ಲಿ ಮಹಿಳೆಯರ ಸಾಧನೆ ಅಪಾರ ಎಂದು ಹೇಳಿದರು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವನಿತಾ ಗಡಾದರವರು ವಹಿಸಿದ್ದರು. ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಲಕ್ಷ್ವವ್ವ ಈರಪ್ಪ ಕಟ್ಟಿಮನಿ ಗ್ರಾಮ ಪಂಚಾಯತ ಉಪಾಧ್ಯಕ್ಷರು ಕಲಕೇರಿ ಹಾಗೂ ಅತಿಥಿ ಸ್ಥಾನವನ್ನು ಯಲ್ಲಮ್ಮ, ಭೀಮಪ್ಪ ಗಂಟಿ ಗ್ರಾಮ ಪಂಚಾಯತ ಸದಸ್ಯರು ಮತ್ತು ಶವಂತ್ರವ್ವ ಹರಟಿ ಮತ್ತು ಮರದಾನಿ ಅಂಗನವಾಡಿ ಕಾರ್ಯಕರ್ತರು ಎಸ್ಡಿಎಮ್ಎಸಿ ಸದಸ್ಯರು ಗೋಹಿಚಂದ್ರ ಸಾಮಾಜಿಕ ಸಮಿತಿಯ ಸದಸ್ಯರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರು ಕಾರ್ಯಕ್ರಮದಲ್ಲಿ ಪ್ರಾರ್ಥನೆಯನ್ನು ಶವಂತ್ರವ ಹರಟಿ ಆಶಾ ಕಾರ್ಯಕರ್ತರು ನಡೆಸಿಕೊಟ್ಟರು ನಂತರ ಸ್ವಾಗತ ಬಾಷಣವನ್ನು ಸಾಮಾಜಿಕ ಸಮಿತಿಯ ಸದಸ್ಯ ನಾಗರಾಜರವರು ನಡೆಸಿಕೊಟ್ಟರು.