ಬಳ್ಳಾರಿ

ಅಂತರ ರಾಷ್ಟ್ರೀಯ ಹೆಪಟೈಟಿಸ್ ದಿನ

ಅಂತರ ರಾಷ್ಟ್ರೀಯ ಹೆಪಟೈಟಿಸ್ ದಿನ

ಸಿರುಗುಪ್ಪ 30: ದೇಶದ ಕಾಡು ವನ್ಯಜೀವಿ ನದಿಗಳು ಸೇರಿ ಪರಿಸರ ಉಳಿಸಿ ಬೆಳೆಸುವುದು ಪ್ರತಿಯೊಬ್ಬ ಭಾರತೀಯನ ಸಂವಿಧಾನಬದ್ಧ ಮೂಲಭೂತ ಕರ್ತವ್ಯ ಎಂದು ಇಂಡಿಯನ್ ರೆಡ್ ಕ್ರಾಸ್ ಸಂಸ್ಥೆ ಸಾಕ್ಷರತಾ ಮಿಷನ್ ಪ್ರಾಧಿಕಾರ ಸದಸ್ಯರು ಜನಾಭಿಪ್ರಾಯ ಮುಖಂಡ ಎ ಅಬ್ದುಲ್ ನಬಿ ಹೇಳಿದರು.  


ಸಿರುಗುಪ್ಪ ನಗರದ ಇಬ್ರಾಹಿಮ್ ಮಂಜಿಲ್ ನಲ್ಲಿ ಅವರು ಅಂತರ ರಾಷ್ಟ್ರೀಯ ಹೆಪಾಟೈಟಿಸ್ ದಿನ ವನ್ನು ನೆನಪಿಸಿ ಮಾತನಾಡುತ್ತಾ ರಾಷ್ಟ್ರೀಯ ವೈರಲ್ ಹೆಪಟೈಟಿಸ್ ನಿಯಂತ್ರಣ ಕಾರ್ಯಕ್ರಮ 1ಸಮಗ್ರ ಯೋಜನೆ ಯಾಗಿದೆ ಹೆಪಟೈಟಿಸ್ ಎ, ಬಿ, ಸಿ, ಡಿ ಮತ್ತು ಇ ಅನ್ನು ತಡೆಗಟ್ಟುವ ನಿಯಂತ್ರಣ ಮಾಡುವ ಹಾಗೂ 2030ರ ಅನ್ವಯ ಬರುವ ವೇಳೆಗೆ ಹೈಪಾ ಟೈಟಿಸ್ ಮುಕ್ತ ದೇಶವನ್ನಾಗಿಸುವ ಗುರಿಯನ್ನು ರಾಷ್ಟ್ರೀಯ ಆರೋಗ್ಯ ಅಭಿಯಾನ ಕರ್ನಾಟಕ ಸರ್ಕಾರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೆಪಟೈಟಿಸ್ ಕಾಮಾಲೆಯ ಸೋಂಕು ನಿಯಂತ್ರಣ ವಿಧಾನಗಳು ಸೌಲಭ್ಯದ ಬಗ್ಗೆ ಸುರಕ್ಷಿತ ನೀರು ಸ್ವಚ್ಛ ಶೌಚಾಲಯ ಉಪಯೋಗ ಹಾಗೂ ನೈರ್ಮಲ್ಯ ಕಾಪಾಡುವಿಕೆ. ಸುರಕ್ಷಿತ ರಕ್ತ ಮತ್ತದರ ಉತ್ಪನ್ನಗಳ ಬಳಕೆ ಶಿಶು ಆರೋಗ್ಯ ಕಾರ್ಯಕರ್ತರು ಮತ್ತು ಈ ಸೋಂಕಿನ ಹೆಚ್ಚಿನ ಅಪಾಯ ಉಳ್ಳವರು ಎಲ್ಲ ಸರ್ಕಾರಿ ಆಸ್ಪತ್ರೆಗಳಲ್ಲಿ ಖಾಯಿಲೆಗೆ ಉಚಿತ ತಪಾಸಣೆ ಹೆಚ್ಚಿನ ಮಾಹಿತಿಗೆ ಉಚಿತ ಆರೋಗ್ಯ ಸಹಾಯವಾಣಿ 104ಕ್ಕ ಕರೆ ಮಾಡಿ ಎಲ್ಲರಿಗೂ ಆರೋಗ್ಯ ಎಲ್ಲೆಡೆಯೂ ಆರೋಗ್ಯ ಎಂದು ಅಬ್ದುಲ್ ನಬಿ ಹೇಳಿದರು. ಸಾಕ್ಷರತಾ ಗೌರವ ತಾಲ್ಲೂಕು ಸಂಯೋಜಕ ಜೆ ನಾಗೇಂದ್ರ ಗೌಡಾ ಸಾಮಾಜಿಕ ಕಾರ್ಯಕರ್ತ ಎ ಮೊಹಮ್ಮದ್ ಇಬ್ರಾಹಿಂ, ಎ ಮೊಹಮ್ಮದ್ ರಫಿ, ಎ ಮೊಹಮ್ಮದ್ ನೌಷಾದ್ ಅಲಿ, ಮೊಹಮ್ಮದ್ ನಿಜಾಮುದ್ದೀನ್, ಎ ಮುಹಮ್ಮದ್ ಹಾಜಿ ಇತರರು ಇದ್ದರು. 


ಸುದ್ದಿ ಓದಿ