/ಅಂತರಾಷ್ಟ್ರೀಯ ಮಾನವ ಹಕ್ಕುಗಳ ದಿನಾಚರಣೆ
ಲೋಕದರ್ಶನ ವರದಿ
ಮುಂಡರಗಿ 10: ಡಾ.ಬಾಬಾಸಾಹೇಬ ಅಂಬೇಡ್ಕರ್ ರವರು ಸಂವಿಧಾನದ ಮೂಲಕ ದೇಶದ ಪ್ರತಿಯೊಬ್ಬ ಪ್ರಜೆಗೆ ಸಮಾಜದಲ್ಲಿ ತನ್ನದೇಯಾದ ಹಕ್ಕು ಹಾಗೂ ಜವಾಬ್ದಾರಿಯನ್ನು ಕೊಟ್ಟಿರುತ್ತಾನೆ. ಆ ಹಕ್ಕುಗಳ ಬಗ್ಗೆ ಇಂದಿನ ಯುವಕರು ಜಾಗೃತರಾಗಬೇಕಾಗಿದೆ ಎಂದು ಜಗದ್ಗುರು ಡಾ.ಅನ್ನದಾನೀಶ್ವರ ಶ್ರೀಗಳು ಹೇಳಿದರು.
ಪಟ್ಟಣದ ಕ.ರಾ.ಬೆಲ್ಲದ ಕಾಲೇಜಿನ ಸಭಾಭವನದಲ್ಲಿ ಮಾನವ ಹಕ್ಕುಗಳು ಮತ್ತು ಬ್ರಷ್ಟಾಚಾರ ವಿರೋಧಿ ದಳದ ವತಿಯಿಂದ ಏರಿ್ಡಸಿದ ಅಂತರಾಷ್ಟ್ರೀಯ ಮಾನವ ಹಕ್ಕುಗಳ ದಿನಾಚರಣೆಯಲ್ಲಿ ಸಾನಿಧ್ಯವಹಿಸಿ ಅವರು ಆಶಿರ್ವಚನ ನೀಡಿದರು.
ಡಾ,ಅಂಬೇಡ್ಕರ್ ರವರು ಮಾನವ ಹಕ್ಕುಗಳ ಬಗ್ಗೆ ವಿಸ್ತಾರವಾಗಿ ಸಂವಿಧಾನದಲ್ಲಿ ಕಾಣಿಸಿದ್ದಾರೆ. ಶೋಷಿತರ ವಿರುದ್ಧವಾದ ಹಕ್ಕು, ಸ್ವಾತಂತ್ರ್ಯದ ಹಕ್ಕು, ಸಾಮಾಜಿಕ ಹಕ್ಕು ಹೀಗೆ ಹಲವಾರು ಸಂವಿಧಾನಾತ್ಮಕ ಹಕ್ಕನ್ನು ಈ ದೇಶಕ್ಕೆ ಕೊಡುಗೆಯಾಗಿ ಕೊಟ್ಟಿದ್ದಾರೆ. ಆದರೆ ನಾವುಗಳು ಅವುಗಳನ್ನು ಸಮರ್ಕವಾಗಿ ತಿಳಿದುಕೊಳ್ಳುವ ಗುಣಗಳನ್ನು ಬೆಳೆಸಿಕೊಳ್ಳಬೇಕು. ಹಾಗೂ ದೇಶದಲ್ಲಿ ಹಲವಾರು ಕಡೆ ಕಳಪೆ ಕೆಲಸಗಳು ಆಗುತ್ತಿರುವುದರಿಂದ ಸಮಾಜದಲ್ಲಿ ಗೊಂದಲಮಯ ವಾತಾವರಣ ಸೃಷ್ಟಿಯಾಗಲು ಪ್ರಾರಂಭವಾಗುತ್ತದೆ. ಹೀಗಾಗಿ ಪ್ರತಿಯೊಬ್ಬರೂ ತಮ್ಮ ಆತ್ಮಾವಲೋಕನೆಯಿಂದ ಪ್ರಾಮಾಣಿಕ ಕೆಲಸ ಮಾಡುವಲ್ಲಿ ಮುಂದಾಗಬೇಕು. ಅಂದಾಗ ದೇಶವು ಪ್ರಗತಿಯಾಗಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಈ ವೇಳೆ ಪುರಸಭೆ ಅಧ್ಯಕ್ಷೆ ಕವಿತಾ ಉಳ್ಳಾಗಡ್ಡಿ ಮಾತನಾಡಿ, ಭಾರತ ದೇಶದ ಪ್ರಜಾಪ್ರಭುತ್ವಕ್ಕೆ 1948ರ ಡಿಸೆಂಬರ್.10 ರಂದು ಮಾನವ ಹಕ್ಕುಗಳ ದಿನಾಚರಣೆಯ ಅಂಗಿಕಾರವಾಯಿತು. ನಂತರ 1950 ನೇ ಸಾಲಿನಲ್ಲಿ ಅದೀಕೃತ ಅಂಗಿಕಾರವಾದ್ದರಿಂದ ಅಂದಿನಿಂದ ಅಂತರಾಷ್ಟ್ರೀಯ ಮಾನವ ಹಕ್ಕುಗಳ ದಿನಾಚರಣೆಯನ್ನಾಗಿ ಆಚರಿಸಲಾಗುತ್ತಿದೆ. ಮಾನವ ಹಕ್ಕುಗಳಿಂದ ವಿವಿಧ ಜೀವರಾಶಿಗಳು ಗೌರವಯುತವಾಗಿ ಬದುಕಬೇಕಾದರೆ, ಹಕ್ಕುಗಳ ಅರಿವು ಅವರಲ್ಲಿರಬೇಕಾಗುತ್ತದೆ. ಹೀಗಾಗಿ ಪ್ರತಿಯೊಬ್ಬರೂ ತಮ್ಮ ಹಕ್ಕುಗಳ ಬಗ್ಗೆ ಜಾಗೃತರಾಗಿ ಸಮಾಜದಲ್ಲಿ ಸುಂದರ ಬದುಕನ್ನು ಕಟ್ಟಿಕೊಳ್ಳಲು ಮುಂದಾಗಬೇಕು ಎಂದು ಹೇಳಿದರು.
ವಕೀಲರಾದ ಓಂಪ್ರಕಾಶ ಲಿಂಗಶೆಟ್ಟರ್ ಮಾತನಾಡಿ, 18 ವರ್ಷ ಮೇಲ್ಪಟ್ಟ ಪ್ರತಿಯೊಬ್ಬ ನಾಗರಿಕನೂ ಮಾನವ ಹಕ್ಕುಗಳ ಬಗೆಗೆ ಅರಿವನ್ನು ಪಡೆದುಕೊಳ್ಳಬೇಕು. ಜೊತೆಗೆ ಮಾನವನಿಗೆ ಬದುಕಲು ಮುಖ್ಯವಾಗಿ ಮೂಲಭೂತ ಸೌಕರ್ಯಗಳು ಬೇಕಾಗಿದೆ. ಈ ಹಿನ್ನೆಲೆಯಲ್ಲಿ ಪ್ರತಿಯೊಬ್ಬ ನಾಗರಿಕನಿಗೂ ಭಾರತದ ಸಂವಿಧಾನದ 14ರ ಕಲಂ ಪ್ರಕಾರ ಸಮಾನತೆ ಹಕ್ಕನ್ನು ನೀಡಲಾಗಿದೆ. ಈಡಿ ಜಗತ್ತಿನಲ್ಲಿಯೇ ಉನ್ನತವಾದ ಸಂವಿಧಾನ ಎಂದರೆ, ಅದು ನಮ್ಮ ಭಾರತ ದೇಶದ ಸಂವಿಧಾನ ಎಂದು ಹೇಳಲು ಹೆಮ್ಮೆವೆನಿಸುತ್ತದೆ. ಹೀಗಾಗಿ ಇದನ್ನು ಎಲ್ಲರೂ ಗೌರವದಿಂದ ಕಾಣಬೇಕು. ಇದರಿಂದ ಈ ಭಾಗದ ಜನತೆ ಜಾಗೃತರಾಗುತ್ತಿರುವುದರಿಂದ ದೌರ್ಜನ್ಯಗಳು, ಬಲತ್ಕಾರಗಳ ಸಂಖ್ಯೆ ಕಡಿಮೆ ಕಾಣಿಸಿಕೊಳ್ಳುತ್ತಿವೆ. ಹೀಗಾಗಿ ನಮ್ಮೆಲ್ಲ ಯುವಕರು ಜವಾಬ್ದಾರಿಯುತ ಹಾಗೂ ಕರ್ತವ್ಯಗಳನ್ನು ಸಮರ್ಕವಾಗಿ ಪಾಲಿಸಬೇಕಾಗುತ್ತದೆ ಎಂದು ಸಲಹೆ ನೀಡಿದರು.
ಈ ವೇಳೆ ಶ್ರೀ ವೀರಭದ್ರೇಶ್ವರ ದೇವಸ್ಥಾನ ಕಮೀಟಿ ಅಧ್ಯಕ್ಷ ಕೆ.ವಿ.ಹಂಚಿನಾಳ, ವಕೀಲ ಶಿವು ನಾಡಗೌಡ್ರ ಮಾತನಾಡಿದರು. ಈ ಸಂದರ್ಭದಲ್ಲಿ ಮಾನವ ಹಕ್ಕುಗಳು ಮತ್ತು ಭ್ರಷ್ಟಾಚಾರ ವಿರೋದಿ ದಳದ ಮುಂಡರಗಿ ತಾಲೂಕು ಅಧ್ಯಕ್ಷ ವೀರೇಶ ಗುಗ್ಗರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಅಕ್ಕಮಹಾದೇವಿ ಕಡ್ಡಿ ನಿರೂಪಿಸಿದರು, ಅರುಣಾ ಗುಜ್ಜರಿ ಸ್ವಾಗತಿಸಿದರು.
ಕಾರ್ಯಕ್ರಮದ ಮಧ್ಯದಲ್ಲಿ ನಿವೃತ್ತಿ ಶಿಕ್ಷಕಿ ಚಂದ್ರಮತಿ ಗದ್ದಿ, ಹಾಗೂ ಝೀ-ಕನ್ನಡ ವಾಹಿನಿಯ ಸರಿಗಮಪ ಕಾರ್ಯಕ್ರಮದ ಸ್ಪರ್ಧಿ ನಯನಾ ಅಳವಂಡಿ ಇವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಉಪತಹಶಿಲ್ದಾರ ಎಸ್.ಎಸ್.ಬಿಚ್ಚಾಲಿ, ವೈಧ್ಯರಾದ ಡಾ.ಶಮೀರ ಮುಲ್ಲಾ, ಶಿಕ್ಷಣ ಇಲಾಖೆಯ ಕುಮಾರ.ಬಿ. ವೀರೇಶ ಸಜ್ಜನ, ಗೀರೀಶ ಅಂಗಡಿ, ವಿಜಯ ಕೊಪ್ಪಳ, ಗೋಪಾಲ ಕಂಚಗಾರ, ಅಶೋಕ ಅಂಗಡಿ, ದಸ್ತಗಿರಿ ಹೊಸಮನಿ, ಮೆಳವಿಮಕರ, ಜಗದೀಶ ಪಾಟೀಲ್, ಶರಣಪ್ಪ ಹಿರೇಮಠ ಹಾಗೂ ಇತರರು ಇದ್ದರು.