ಶಿಗ್ಗಾವ್

ಅಂತರರಾಷ್ಟ್ರೀಯ ಹೆಣ್ಣು ಮಗುವಿನ ದಿನಾಚರಣೆ

ಅಂತರರಾಷ್ಟ್ರೀಯ ಹೆಣ್ಣು ಮಗುವಿನ ದಿನಾಚರಣೆ

ಶಿಗ್ಗಾವಿ 12:  ಸಮಾಜದಲ್ಲಿ ಹೆಣ್ಣು ಮಕ್ಕಳಿಗೆ ಸಮಾನತೆ ಹಾಗೂ ಶಿಕ್ಷಣವನ್ನು ನೀಡುವುದರಿಂದ ಎಲ್ಲ ಕ್ಷೇತ್ರಗಳಲ್ಲಿ ಉತ್ತಮ ಸಾಧನೆ ಮಾಡಲು ಸಾಧ್ಯವಾಗುವುದು ಎಂದು ಶಿಗ್ಗಾಂವ ಜೆಎಮ್‌ಎಫ್‌ಸಿ ದಿವಾಣಿ ನ್ಯಾಯಾದೀಶೆ ಅಶ್ವಿನಿ ಚಂದ್ರಕಾಂತ ಹೇಳಿದರು. 

ಪಟ್ಟಣದಡಾ.ಬಿ ಆರ್‌ಅಂಬೇಡ್ಕರ್ ಸರ್ಕಾರಿ ಕಛೇರಿಗಳ ಸಂಕೀರ್ಣ ಶಿಗ್ಗಾಂವ ಸಭಾಭವನದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾವೇರಿ, ಶಿಶು ಅಭಿವೃದ್ಧಿಯೋಜನಾಧಿಕಾರಿಗಳ ಕಛೇರಿ, ತಾಲೂಕು ಕಾನೂನು ಸೇವಾ ಸಮಿತಿ ಹಾಗೂ ವಕೀಲರ ಸಂಘ ಶಿಗ್ಗಾಂವ ಇವರ ಸಂಯುಕ್ತ ಆಶ್ರಮದಲ್ಲಿ ಅಂತರರಾಷ್ಟ್ರೀಯ ಹೆಣ್ಣು ಮಗುವಿನ ದಿನಾಚರಣೆ ಕಾರ್ಯಕ್ರಮವನ್ನು ಗಿಡಕ್ಕೆ ನೀರೆರಿಯುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. 

ಜಿಲ್ಲಾ ನಿರೂಪಣಾಧಿಕಾರಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾವೇರಿ ಅಣ್ಣಪ್ಪ ಹೆಗಡೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಇಲಾಖೆಯಲ್ಲಿ ಹೆಣ್ಣು ಮಕ್ಕಳಿಗೆ ಇರುವ ಯೋಜನೆಗಳು ಮಕ್ಕಳ ಹಕ್ಕುಗಳು ಹೆಣ್ಣು ಮಕ್ಕಳು ತಮ್ಮ ಮೇಲೆ ಆಗುತ್ತಿರುವ ದೌರ್ಜನ್ಯಗಳಿಂದ ರಕ್ಷಣೆ ಮಾಡಿಕೊಳ್ಳುವ ಬಗ್ಗೆ ಮಕ್ಕಳ ಸಹಾಯವಾಣಿ ಬಗ್ಗೆ ಹೆಣ್ಣು ಮಕ್ಕಳ ಮೇಲೆ ನಡೆದಿರುವ ದೌರ್ಜನ್ಯ ಪ್ರಕರಣಗಳ ಸಹಿತಎಲ್ಲರ ಮನ ಮುಟ್ಟುವಂತೆ ಮಾಹಿತಿ ನೀಡಿದರು. 

ಈ ಕಾರ್ಯಕ್ರಮದಲ್ಲಿ ಮೇಲ್ವಿಚಾರಕಿ ಸುಜಾತಾ ಜವಳಗೇರಿ ಇವರು ಪ್ರಾಸ್ತಾವಿಕವಾಗಿ ಮಾತನಾಡಿದರು, ನ್ಯಾಯವಾದಿಗಳಾದ ಎಮ್ ಜಿ ಬಿಜಾಪೂರ ಹಾಗೂ ಎಮ್‌ಎಲ್ ಗೋಣೆಪ್ಪನವರ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು. “ಭಾಗ್ಯಲಕ್ಷ್ಮೀ ಸುಕನ್ಯಾ ಸಮೃದ್ಧಿ ಯೋಜನೆ”ಯಡಿ ಹೆಣ್ಣು ಮಕ್ಕಳಿಗೆ ಅಂಚೆ ಕಛೇರಿ ಪಾಸ ಪುಸ್ತಕಗಳನ್ನು ವಿತರಿಸಲಾಯಿತು. 

ಈ ಕಾರ್ಯಕ್ರಮದಲ್ಲಿ ಕಿಶೋರಿಯರು, ಮಕ್ಕಳ ತಾಯಂದಿರು ಮೇಲ್ವಿಚಾರಕಿಯರು, ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಇಲಾಖೆ ಸಿಬ್ಬಂದಿ ಉಪಸ್ಥಿತರಿದ್ದರು. ಲಲಿತಾ ಪಾಟೀಲ ಪ್ರಾರ್ಥಿಸಿದರು, ರೇಣುಕಾತಾಯಮ್ಮನವರ ಸ್ವಾಗತಿಸಿದರು,  ಶೈಲಾ ತಳವಾರ ವಂದಿಸಿದರು, ಲಕ್ಷ್ಮೀಬಾಯಿ ಬಗಾಡೆನಿರೂಪಿಸಿದರು. 


ಸುದ್ದಿ ಓದಿ