ಆರ್ಥರ್ ಜೈಲಿನಲ್ಲಿ ತಂದೆ ಶಾರೂಖ್ ... ಪುತ್ರ ಆರ್ಯನ್ ನಡುವೆ ಆಸಕ್ತಿಕರ ಸಂಭಾಷಣೆ
ಮುಂಬೈ, ಅ 21 - ಡ್ರಗ್ಸ್ ಪ್ರಕರಣ ಇಡೀ ಬಾಲಿವುಡ್ ಬೆಚ್ಚಿಬೀಳುವಂತೆ ಮಾಡಿದೆ. ಮುಂಬೈ ಕರಾವಳಿಯಲ್ಲಿ ಕ್ರೂಸ್ ಹಡಗಿನಲ್ಲಿ ಭಾರಿ ಪ್ರಮಾಣ ಡ್ರಗ್ಸ್ ವಶಪಡಿಸಿಕೊಂಡಿದ್ದು, ಆ ಪ್ರಕರಣದಲ್ಲಿ ಶಾರೂಖ್ ಖಾನ್ ಪುತ್ರ ಆರ್ಯನ್ ಖಾನ್ ಬಂಧಿಸಿರುವುದು ಸಂಚಲನ ಸೃಷ್ಟಿಸಿದೆ.
ಆದರೆ, ಈ ಪ್ರಕರಣದಲ್ಲಿ ಆರ್ಯನ್ ಖಾನ್ ಗೆ ಇನ್ನೂ ಜಾಮೀನು ಲಭಿಸಿಲ್ಲ. ಈವರೆಗೆ ಮೂರು ಬಾರಿ ನ್ಯಾಯಾಲಯ ಜಾಮೀನು ಆರ್ಜಿ ವಜಾಗೊಳಿಸಿದೆ. ಆರ್ಯನ್ ವಿರುದ್ಧ ಬಲವಾದ ಪುರಾವೆಗಳಿವೆ. ಜಾಮೀನು ನೀಡುವ ಪ್ರಶ್ನೆಯೇ ಉದ್ಬವಿಸುವುದಿಲ್ಲ ಎಂದು ಮುಂಬೈ ಸ್ಪೆಷಲ್ ಕೋರ್ಟ್ ಸ್ಪಷ್ಟಪಡಿಸಿದೆ.
ಈ ಹಿನ್ನೆಲೆಯಲ್ಲಿ ಆರ್ಯನ್ ಖಾನ್ ಜೈಲು ವಾಸಿಯಾಗಿದ್ದಾನೆ. ಆದರೆ, ಮಹಾರಾಷ್ಟ್ರ ಸರ್ಕಾರ ಇಂದಿನಿಂದ ಕೊರೊನಾ ನಿಯಮ ಸಡಿಲಗೊಳಿಸಿದೆ ಜೈಲಿನಲ್ಲಿರುವ ಕೈದಿಗಳು, ವಿಚಾರಣಾಧೀನ ಅರೋಪಿಗಳನ್ನು ಭೇಟಿಯಾಗಲು ಕುಟುಂಬ ಸದಸ್ಯರಿಗೆ ಅವಕಾಶ ಕಲ್ಪಿಸಿದೆ. ಈ ಕ್ರಮದಲ್ಲಿ ಶಾರುಖ್ ಖಾನ್ ಗುರುವಾರ ಪುತ್ರ ಆರ್ಯನ್ ನನ್ನು ಭೇಟಿ ಮಾಡಲು ಆರ್ಥರ್ ರೋಡ್ ಜೈಲಿಗೆ ಹೋಗಿದ್ದರು.
ಪ್ರತಿ ವಾರ ಕುಟುಂಬದ ಸದಸ್ಯರು ಅಥವಾ ವಕೀಲರು ಆರೋಪಿಯನ್ನು ಭೇಟಿ ಮಾಡಲು ಅವಕಾಶ ನೀಡಲಾಗುತ್ತದೆ. ಒಮ್ಮೆ ಇಬ್ಬರು ವ್ಯಕ್ತಿಗಳು ಭೇಟಿಯಾಗಬಹುದು. ಆದರೆ, ಶಾರುಖ್ ಖಾನ್ ಒಬ್ಬರೇ ಮಗನನ್ನು ಭೇಟಿಯಾಗಿದ್ದರು ಎಂದು ವರದಿಯಾಗಿದೆ.
ಪ್ರವೇಶದ್ವಾರದ ಬಳಿ ಆಧಾರ್ ಕಾರ್ಡ್, ಇತರ ದಾಖಲೆಗಳನ್ನು ತೋರಿಸಿದ ಶಾರುಖ್ ಖಾನ್ ಜೈಲಿನೊಳಗೆ ತೆರಳಿದರು. ವಿಐಪಿ ಆಗಿದ್ದರೂ ಜೈಲಿನಲ್ಲಿ ಯಾವುದೇ ವಿಶೇಷ ವ್ಯವಸ್ಥೆ ಮಾಡಿರಲಿಲ್ಲ. ಸಾಮಾನ್ಯ ಜನರಂತೆ ಜೈಲು ಕ್ಯಾಬಿನ್ ನಲ್ಲಿ ಶಾರುಖ್ ಖಾನ್ ಮಗನನ್ನು ಭೇಟಿಯಾದರು. ಅಕ್ಟೋಬರ್ 3 ರಂದು ಆರ್ಯನ್ ಖಾನ್ ನನ್ನು ಎನ್‌ಸಿಬಿ ಬಂಧಿಸಿದ ನಂತರ ಅಪ್ಪ ಮಗನ ಮೊದಲ ಭೇಟಿ ಇದಾಗಿದೆ.
ಜೈಲು ನಿಯಮಗಳ ಪ್ರಕಾರ ಇಬ್ಬರು ನೇರವಾಗಿ ಭೇಟಿಯಾಗಲು ಅವಕಾಶವಿಲ್ಲ. ಗಾಜಿನ ತಡೆಗೋಡೆ ಹೊರಗೆ ಒಬ್ಬರು, ಒಳಗೆ ಒಬ್ಬರು ನಿಂತಿದ್ದರು ಒಬ್ಬರನೊಬ್ಬರು ನೋಡಿಕೊಂಡು ಇಂಟರ್ ಕಾಮ್‌ನಲ್ಲಿ ಮಾತನಾಡುತ್ತಿದ್ದರು. ಸುಮಾರು 10 ನಿಮಿಷಗಳ ಕಾಲ ಮಾತನಾಡಿದರು. ಆ ಕ್ಷಣದಲ್ಲಿ ಗಾಜಿನ ಗೋಡೆಯ ಮೇಲೆ ಇಬ್ಬರು ಕೈಗಳನ್ನು ಇರಿಸಿ ಮಾತನಾಡಿದರು. ತಂದೆಯನ್ನು ನೋಡಿ ಆರ್ಯನ್ ಖಾನ್ ಭಾವೋದ್ವೇಗಕ್ಕೊಳಗಾದರು. ಆದೇ ರೀತಿ ಜೈಲಿನಲ್ಲಿರುವ ಮಗನ ಸ್ಥಿತಿ ಕಂಡು ಕಂಡು ಶಾರೂಖ್ ಖಾನ್ ಭಾವುಕರಾಗಿದ್ದರು. ಎಲ್ಲವೂ ಒಳ್ಳೆಯದಾಲಿದೆ... ಧೈರ್ಯವಾಗಿರು ಎಂದು ಶಾರೂಖ್ ಮಗನಿಗೆ ಹೇಳಿದರು. ಅಪ್ಪ- ಮಗ ಮಾತನಾಡುವ ಸಮಯದಲ್ಲಿ ನಾಲ್ವರು ಜೈಲು ಸಿಬ್ಬಂದಿ ಅಲ್ಲಿ ಕಾವಲು ಕಾಯುತ್ತಿದ್ದರು.
ಆದರೆ, ತಂದೆ ಮಗನ ನಡುವೆ ಆಸಕ್ತಿದಾಯಕ ಸಂಭಾಷಣೆ ನಡೆಯಿತು ಎಂದು ಜೈಲು ಅಧಿಕಾರಿಗಳ ಮೂಲಕ ತಿಳಿದು ಬಂದಿದೆ. ಆರ್ಯನ್ .. ಉಪಹಾರವೇನಾದರೂ ತಿಂದೆಯಾ ಬೇಟಾ .. ಎಂದು ಶಾರುಖ್ ಕೇಳಿದಾಗ .. ಇಲ್ಲ ಡ್ಯಾಡಿ .. ಎಂದು ಆರ್ಯನ್ ತಲೆಯಾಡಿಸಿದ. ಮನೆಯಿಂದ ತಂದ ಆಹಾರವನ್ನು ಆರ್ಯನಿಗೆ ನೀಡಬಹುದೇ ಎಂದು ಶಾರೂಖ್ ಖಾನ್ ಸ್ಥಳದಲ್ಲಿದ್ದ ಜೈಲು ಅಧಿಕಾರಿಗಳಿಗೆ ಕೇಳಿದರು. ನಿಯಮಗಳ ಪ್ರಕಾರ ನ್ಯಾಯಾಲಯ ಅನುಮತಿಸದ ಯಾವುದನ್ನೂ ನೀಡಬಾರದು ಎಂದು ಅವರು ಸೂಚಿಸಿದರು. ನಂತರ ಮಗನೊಂದಿಗೆ ಸ್ವಲ್ಪ ಹೊತ್ತು ಮಾತನಾಡಿದರು .. ಶಾರುಖ್ ಜೈಲಿನಿಂದ ಹೊರಬಂದರು.
ಮತ್ತೊಂದೆಡೆ, ಜಾಮೀನು ಆರ್ಜಿ ಸಂಬಂಧ ಮುಂಬೈ ವಿಶೇಷ ನ್ಯಾಯಾಲಯದ ತೀರ್ಪಿನ ವಿರುದ್ಧ ಆರ್ಯನ್ ಖಾನ್ ವಕೀಲರು ಮೇಲ್ಮನವಿ ಸಲ್ಲಿಸಿದ್ದು, ಬಾಂಬೆ ಹೈಕೋರ್ಟ್‌ನ ಅಕ್ಟೋಬರ್ 23 ರಂದು ಅರ್ಜಿಯ ವಿಚಾರಣೆ ನಡೆಸಲಿದೆ.