ಜಮಖಂಡಿ

ಅಂತರ್ಜಾತಿ ವಿವಾಹ: ಹುಡುಗನ ಬರ್ಬರ ಹತ್ಯೆ

ಅಂತರ್ಜಾತಿ ವಿವಾಹ: ಹುಡುಗನ ಬರ್ಬರ ಹತ್ಯೆ
ಕೊಲೆಯಾದ ವ್ಯಕ್ತಿ,

ಜಮಖಂಡಿ 19: ತಾಲೂಕಿನ ಸಾವಳಗಿ ಸಮೀಪದ ಟಕ್ಕೋಡ ಗ್ರಾಮದ ಭುಜಬಲಿ ಸಿದ್ದಪ್ಪ ಕರ್ಜಗಿ (34) ಎಂಬುವವರು ಕಳೆದ ಒಂದು ವರ್ಷದ ಹಿಂದೆ ಪ್ರೀತಿಸಿ ಅಂತಜರ್ಾತಿ ವಿವಾಹವಾಗಿರುವ ಹಿನ್ನೆಲೆಯಿಂದ ಹುಡುಗಿಯ ತಂದೆ ಹುಡುಗನನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ನಡೆದಿದೆ.

ಭುಜಬಲಿ ಕರ್ಜಗಿ (34)ಎಂಬುವವರು ಅದೇ ಗ್ರಾಮದ ಬೇರೆ ಜಾತಿಯ ಹುಡುಗಿಯನ್ನು ಪ್ರೀತಿಸಿ ವಿವಾಹವಾಗಿ ಬೇರೆ ಗ್ರಾಮದಲ್ಲಿ ನೆಲೆಸಿದ್ದರು. ನಂತರ ಪೊಲೀಸ್ ಠಾಣೆಯಲ್ಲಿ ಹುಡುಗಿಯ ಪೋಷಕರಿಗೆ ಪೊಲೀಸರು ಸಂಧಾನ ಮಾಡಿರುವ ಹಿನ್ನೆಲೆಯಲ್ಲಿ ಟಕ್ಕೋಡ ಗ್ರಾಮದಲ್ಲಿ ನೆಲೆಸಿದ್ದರು. ಹುಡುಗಿಯ ತಂದೆ ಹಳೆಯ ವೈಶಮ್ಯ ಇಟ್ಟುಕೊಂಡು  ಶನಿವಾರ ರಾತ್ರಿ ಗ್ರಾಮದ ಹನುಮಾನ ದೇವಸ್ಥಾನದ ಹತ್ತಿರ ಕಣ್ಣಿಗೆ ಕಾರದಪುಡಿ ಎರಚಿ ಮಚ್ಚಿನಿಂದ ಕೊಲೆ ಮಾಡಿದ್ದಾನೆ. ನಂತರ ಆರೋಪಿ ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದಾನೆ. ಸಾವಳಗಿ ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ. 


 

ಸುದ್ದಿ ಓದಿ