ಬಳ್ಳಾರಿ

ಚದುರಂಗ ಆಟದಿಂದ ಮಕ್ಕಳ ಬೌದ್ಧಿಕ ಮಟ್ಟ ಹೆಚ್ಚುತ್ತದೆ: ಶಾಸಕ ಜಿ.ಸೋಮಶೇಖರರೆಡ್ಡಿ

ಚದುರಂಗ ಆಟದಿಂದ ಮಕ್ಕಳ ಬೌದ್ಧಿಕ ಮಟ್ಟ ಹೆಚ್ಚುತ್ತದೆ: ಶಾಸಕ ಜಿ.ಸೋಮಶೇಖರರೆಡ್ಡಿ

ಬಳ್ಳಾರಿ13: ಚದುರಂಗ ಆಟದಿಂದ ಮಕ್ಕಳ ಬೌದ್ಧಿಕ ಮಟ್ಟವು ಇನ್ನಷ್ಟು ಉತ್ತಮಗೊಳ್ಳುತ್ತದೆ, ಮಕ್ಕಳನ್ನು ಚದುರಂಗ ಪಂದ್ಯಾವಳಿಗಳಲ್ಲಿ ಪಾಲ್ಗೊಳ್ಳುವಂತೆ ಮಾಡುವುದರ ಮೂಲಕ ಅವರಲ್ಲಿ ಮತ್ತಷ್ಟು ಆತ್ಮವಿಶ್ವಾಸ ಹೆಚ್ಚುತ್ತದೆ ಎಂದು ಬಳ್ಳಾರಿ ನಗರ ಶಾಸಕ ಜಿ.ಸೋಮಶೇಖರರೆಡ್ಡಿ ಅವರು ಅಭಿಮತ ವ್ಯಕ್ತಪಡಿಸಿದರು. 

ಭಾನುವಾರ ಬೆಳಿಗ್ಗೆ ನಗರದ ಡಾ. ರಾಜ್ಕುಮಾರ್ ರಸ್ತೆಯಲ್ಲಿರುವ ಬಿಡಿಎಎ ಫುಟ್ಬಾಲ್ ಮೈದಾನದಲ್ಲಿ ಬಳ್ಳಾರಿ ಚೆಸ್ ಸ್ಕೂಲ್ನವರು ಸನ್ರೈಸ್ ಅಕಡೆಮಿಕ್ ಶಾಲೆ ಮತ್ತು ಬಳ್ಳಾರಿ ಜಿಲ್ಲಾ ಚೆಸ್ ಅಸೋಸಿಯೇಷನ್ ಇವರ ಸಹಕಾರದೊಂದಿಗೆ ಮಕ್ಕಳ ದಿನಾಚರಣೆಯ ಅಂಗವಾಗಿ ಏರ್ಪಡಿಸಿದ್ದ ಅಂಡರ್ 16 ಮಕ್ಕಳ ಚದುರಂಗ ಪಂದ್ಯಾವಳಿಗಳಿಗೆ ಚದುರಂಗ ರಾಜನನ್ನು ಮುಂದಕ್ಕೆ ತಳ್ಳುವು ಮೂಲಕ ಚಾಲನೆ ನೀಡಿದರು. 

ಚಿಕ್ಕ ಮಕ್ಕಳಲ್ಲಿ ಆತ್ಮವಿಶ್ವಾಸ ಹೆಚ್ಚಿಸುವುದಕ್ಕೆ ಇಂತಹ ಪಂದ್ಯಾವಳಿಗಳು ಅವಶ್ಯಕತೆ ತುಂಬಾ ಇದೆ, ಇದನ್ನು ಅರಿತು ಇಲ್ಲಿ ತುಂಬಾ ಅಚ್ಚುಕಟ್ಟಾಗಿ ಆಯೋಜಿಸಿದ ಚದುರಂಗ ಪಂದ್ಯಾವಳಿಗಳನ್ನು ಮುಂದಿನ ದಿನಗಳಲ್ಲಿ ಮತ್ತಷ್ಟು ಆಯೋಜಿಸಬೇಕೆಂದು, ಅದಕ್ಕೆ ತಮ್ಮ ಸಹಾಯ ಸಹಕಾರಗಳು ಸದಾ ಇರುತ್ತವೆ ಎಂದು ತಿಳಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಮಾತನಾಡಿದ ಬಳ್ಳಾರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಸರ್ವಶೆಟ್ಟಿ ಮಾರುತಿ ಪ್ರಸಾದ್ ಅವರು, ಬಳ್ಳಾರಿಯಲ್ಲಿ ಇಂತಹ ಚದುರಂಗ ಪಂದ್ಯಾವಳಿಗಳನ್ನು ಆಯೋಜಿಸಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ಅವರು, ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಮಟ್ಟದಲ್ಲಿ ನಗರ ಮತ್ತು ಗ್ರಾಮಾಂತರ ಪ್ರದೇಶಗಳಲ್ಲೂ ಸಹ ಆಯೋಜಿಸಿ ಗ್ರಾಮೀಣ ಭಾಗಗಳ ಜನರಿಗೆ ಚದುರಂಗ ಆಟದ ಮಹತ್ವವನ್ನು ತಿಳಿಸಬೇಕೆಂದರು.

ಬಳ್ಳಾರಿ ಜಿಲ್ಲಾ ಚೆಸ್ ಅಸೋಸಿಯೇಷನ್ನ ಅಧ್ಯಕ್ಷರ ಬಿ.ಹೆಚ್.ಎಂ.ವಿರುಪಾಕ್ಷಯ್ಯನವರು ಮಾತನಾಡುತ್ತಾ ಬಳ್ಳಾರಿಯಲ್ಲಿ ಕಳೆದ ನಾಲ್ಕು ವರ್ಷಗಳಿಂದ ಸತತವಾಗಿ ಚದುರಂಗ ಪಂದ್ಯಾವಳಿಗಳನ್ನು ಆಯೋಜಿಸುತ್ತಾ ಬಂದಿರುವ ಬಸವರಾಜ್ ಅವರು, ಇದೀಗ ಅತ್ಯುನ್ನತ ಮಟ್ಟದಲ್ಲಿ ಈ ಪಂದ್ಯಾವಳಿಗಳನ್ನು ಆಯೋಜಿಸಿರುವುದು ಶ್ಲಾಘನೀಯ ಎಂದರು. ಆಂಧ್ರಪ್ರದೇಶ, ಕಲಬುರಗಿ, ಬೆಂಗಳೂರು, ವಿಜಯನಗರ, ಹಾಸನ, ದಾವಣಗೆರೆ, ಚಿತ್ರದುರ್ಗ, ಕೋಲಾರ ಸೇರಿದಂತೆ ರಾಜ್ಯದ ವಿವಿಧ ಮೂಲೆಗಳಿಂದ ಸುಮಾರು 157 ಜನ ಸ್ಫರ್ಧೆಗಳು (ಅಂಡರ್ 12) ಹಾಗೂ 71 ಸ್ಪರ್ಧೆ ಗಳು (ಅಂಡರ್ 16) ವಿಭಾಗದಲ್ಲಿ ಭಾಗಹಿಸಿದ್ದರು. 

 ವೀರಶೈವ ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ದರೂರು ಶಾಂತನಗೌಡ, ವರದ ವೆಂಕಟಾಚಾರ್ಯ ಸೇವಾ ಸಂಘದ ವೆಂಕಟೇಶುಲು ಶೆಟ್ಟಿ, ಡಯಟ್ನ ಹಿರಿಯ ಉಪನ್ಯಾಸಕ ಸಿದ್ಧಲಿಂಗಮೂರ್ತಿ , ಪಾಲಿಕೆ ಸದಸ್ಯೆ ಚೇತನಾ ಹೇಮಣ್ಣ, ಕೆಸ್ಟರ್ ಮಾರ್ಕೆಟಿಂಗ್ ಸೊಲ್ಯೂಷನ್ಸ್ನ ನರೇಂದ್ರಬಾಬು, ವಾಸವಿ ಕ್ಲಬ್ನ ಅಧ್ಯಕ್ಷ ಜಿ.ಕೆ.ಎಲ್.ದೀಪಕ್ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು. ನಂತರ ನಗರ ಶಾಸಕ ಸೋಮಶೇಖರರೆಡ್ಡಿ ಅವರು ಪಂದ್ಯಾವಳಿಯ ಆಯೋಜಕರಾದ ಎಂ.ಬಸವರಾಜು, ಅಪೂರ್ವ ಎಸ್.ಆರ್. ಕೆ.ನಾಗರಾಜ್ ಇವರನ್ನು ಆತ್ಮೀಯವಾಗಿ ಸನ್ಮಾನಿಸಿದರು 

ಸುದ್ದಿ ಓದಿ